ಹೇಗಿತ್ತು ಸೌರವ್ ಗಂಗೂಲಿ 50ನೇ ಹುಟ್ಟುಹಬ್ಬದ ಸಂಭ್ರಮ?

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ಜುಲೈ 8 ರಂದು 50 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

Written by - Manjunath N | Last Updated : Jul 7, 2022, 06:26 PM IST
  • ವಿಶೇಷವೆಂದರೆ ಸೌರವ್ ಗಂಗೂಲಿ ಮತ್ತು ತೆಂಡೂಲ್ಕರ್ ಅವರು ಒಟ್ಟಿಗೆ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಜೊತೆಯಾಟದ ರನ್‌ಗಳ ವಿಶ್ವ ದಾಖಲೆಯನ್ನು ಹಂಚಿಕೊಂಡಿದ್ದಾರೆ.
  • ಈ ಜೋಡಿಯು 176 ಇನ್ನಿಂಗ್ಸ್‌ಗಳಲ್ಲಿ 47.55 ಸರಾಸರಿಯಲ್ಲಿ 8227 ರನ್ ಗಳಿಸಿರುವುದಲ್ಲದೆ 26 ಶತಕಗಳ ಜೊತೆಯಾಟವನ್ನು ಆಡಿದ್ದಾರೆ.
ಹೇಗಿತ್ತು ಸೌರವ್ ಗಂಗೂಲಿ 50ನೇ ಹುಟ್ಟುಹಬ್ಬದ ಸಂಭ್ರಮ? title=

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ಜುಲೈ 8 ರಂದು 50 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.ಈಗ ಇಂಗ್ಲೆಂಡ್ ನಲ್ಲಿ ಹುಟ್ಟು ಹಬ್ಬದ ಆಚರಣೆಗಾಗಿ ಭರ್ಜರಿ ತಯಾರಿ ನಡೆದಿದ್ದು, ಒಂದು ದಿನ ಮುಂಚಿತವಾಗಿ ಈಗ ಮಾಜಿ ಐಪಿಎಲ್ ಚೇರ್ಮನ್ ಮತ್ತು ಹಿರಿಯ ಕ್ರಿಕೆಟ್ ಆಡಳಿತಗಾರ ರಾಜೀವ್ ಶುಕ್ಲಾ ಟ್ವಿಟರ್‌ನಲ್ಲಿ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : IB Recruitment 2022 : ಗುಪ್ತಚರ ಇಲಾಖೆಯಲ್ಲಿ 766 ಹುದ್ದೆಗಳಿಗೆ ಅರ್ಜಿ : ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ!

ಸದ್ಯ ಸೌರವ್ ಗಂಗೂಲಿ ಅವರು ಏಕದಿನ ಹಾಗೂ ಟಿ20 ಸರಣಿಯನ್ನು ಆಡಲು ಇಂಗ್ಲೆಂಡ್ ಗೆ ತೆರಳಿರುವ ಟೀಮ್ ಇಂಡಿಯಾದ ಜೊತೆಗಿದ್ದಾರೆ.

ಈಗ ಹುಟ್ಟುಹಬ್ಬಕ್ಕೂ ಮುನ್ನ ಸೌರವ್ ಜೊತೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ನಲ್ಲಿ ಮಾಜಿ ಸಹ ಆಟಗಾರನೊಂದಿಗೆ ಸಾಕಷ್ಟು ಕ್ರಿಕೆಟ್ ನೆನಪುಗಳನ್ನು ಹೊಂದಿದ್ದಾರೆ.ಇನ್ನೊಂದೆಡೆಗೆ ಪ್ರಸ್ತುತ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ 2007 ರಲ್ಲಿ ಇಂಗ್ಲೆಂಡ್‌ನಲ್ಲಿ ಭಾರತದ ಕೊನೆಯ ಟೆಸ್ಟ್ ಸರಣಿಯನ್ನು ಗೆದ್ದ ತಂಡದ ಭಾಗವಾಗಿದ್ದರು.

ಇದನ್ನೂ ಓದಿ : Railway Recruitment 2022 : SSLC ಪಾಸಾದವರಿಗೆ ಸಿಹಿ ಸುದ್ದಿ : ರೈಲ್ವೆಯಲ್ಲಿ 1600 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಅರ್ಜಿ!

ವಿಶೇಷವೆಂದರೆ ಸೌರವ್ ಗಂಗೂಲಿ ಮತ್ತು ತೆಂಡೂಲ್ಕರ್ ಅವರು ಒಟ್ಟಿಗೆ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಜೊತೆಯಾಟದ ರನ್‌ಗಳ ವಿಶ್ವ ದಾಖಲೆಯನ್ನು ಹಂಚಿಕೊಂಡಿದ್ದಾರೆ.ಈ ಜೋಡಿಯು 176 ಇನ್ನಿಂಗ್ಸ್‌ಗಳಲ್ಲಿ 47.55 ಸರಾಸರಿಯಲ್ಲಿ 8227 ರನ್ ಗಳಿಸಿರುವುದಲ್ಲದೆ 26 ಶತಕಗಳ ಜೊತೆಯಾಟವನ್ನು ಆಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News