ಈ ಬಾರಿ ಚಳಿಗೆ ತತ್ತರಿಸಲಿದೆ ರಾಜ್ಯ !ಬೇಸಿಗೆ ರಜೆಯಂತೆ ಚಳಿಗಾಲದ ರಜೆ ಕೂಡಾ ಘೋಷಣೆ ! ಶಾಲೆಗಳಿಗೆ 15 ದಿನ ಚಳಿಗಾಲದ ರಜೆ
ಈ ವರ್ಷ ಅತಿ ಹೆಚ್ಚು ಮಳೆ ಸುರಿದಿದ್ದು, ಬಹುತೇಕ ದಿನಗಳಲ್ಲಿ ರೆಡ್ ಅಥವಾ ಆರೆಂಜ್ ಅಲರ್ಟ್ ಅನ್ನೇ ನೀಡಲಾಗುತ್ತಿತ್ತು. ಹಾಗಾಗಿ ಮುಂಜಾಗೃತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗುತ್ತಿತ್ತು.
ಇದರ ನಡುವೆ ಈ ವರ್ಷ ಬೇಸಿಗೆ, ಮಳೆ ಇದ್ದ ಹಾಗೆ ಚಳಿ ಕೂಡಾ ವಿಪರೀತವಾಗಿ ಕಾಡಲಿದೆ. ಹಿಂದೆಂದೂ ಕಾಣದ ಶೀತ ವಾತಾವರಣ ಈ ಬಾರಿ ಇರಲಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇದೀಗ ಬಹುತೇಕ ಕಡೆಗಳಲ್ಲಿ ಚಳಿಗಾಲದ ರಜೆಯನ್ನು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೇಸಿಗೆ ರಜೆಯಂತೆಯೇ ಈ ಬಾರಿ ಚಳಿಗಾಲದ ರಜೆಯನ್ನು ಕೂಡಾ ಘೋಷಿಸಲಾಗಿದೆ.
ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಘಡ, ಜಮ್ಮು ಕಾಶ್ಮೀರಗಳಲ್ಲಿ ಚಳಿಗಾಲದ ರಜೆ ಸಾರಲಾಗಿದೆ
ಉತ್ತರ ಪ್ರದೇಶದಲ್ಲಿ ಚಳಿಗಾಲದ ರಜಾದಿನಗಳು ಡಿಸೆಂಬರ್ 31 ರಿಂದ ಜನವರಿ 15 ರವರೆಗೆ ಇರುತ್ತದೆ. ಬರೋಬ್ಬರಿ 15 ದಿನಗಳವರೆಗೆ ಚಳಿಗಾಲದ ರಜೆ ನೀಡಲಾಗಿದೆ.
ಪಂಜಾಬ್ ನಲ್ಲಿ ಡಿಸೆಂಬರ್ 24 ರಿಂದ ಡಿಸೆಂಬರ್ 31 ರವರೆಗೆ ಚಳಿಗಾಲದ ರಜೆಯಾದರೆ, ಛತ್ತೀಸ್‌ಗಢದಲ್ಲಿ ಮೊದಲಿನಂತೆಯೇ ಡಿಸೆಂಬರ್ 23 ರಿಂದ ಡಿಸೆಂಬರ್ 29 ರವರೆಗೆ 6 ದಿನಗಳ ಕಾಲ ಚಳಿಗಾಲದ ರಜೆಯನ್ನು ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಫೆಬ್ರವರಿ 28 ರವರೆಗೆ ರಜೆ ನೀಡಲಾಗಿದೆ.