24 ಗಂಟೆಗಳಲ್ಲಿ ಬದಲಾಗಲಿದೆ 5 ರಾಶಿಗಳ ಭಾಗ್ಯ, ಹಣದ ಹೊಳೆಯೇ ಹರಿದು, ಕೋಟ್ಯಾಧೀಶರಾಗುವ ಭಾಗ್ಯ!

Sun, 16 Jul 2023-1:23 pm,

ಮೇಷ ರಾಶಿ: ಮೇಷ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದೆ. ಈ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವರು. ನಿಮಗೆ  ಪ್ರಮೋಷನ್ ಅಥವಾ ಇನ್ಕ್ರಿಮೆಂಟ್ ಸಿಗಲಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ದೀರ್ಘಾವಧಿಯಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ.  ಹೊಸ ಉದ್ಯೋಗ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭ ಇರಲಿದೆ.  

ವೃಷಭ ರಾಶಿ: ಸೂರ್ಯನ ರಾಶಿ ಪರಿವರ್ತನೆ ವೃಷಭ ರಾಶಿಯವರಿಗೆ ಒಂದು ವರದಾನ ಎಂಬಂತೆ ಸಾಬೀತಾಗಲಿದೆ. ಧೈರ್ಯ ಮತ್ತು ಶೌರ್ಯ ಹೆಚ್ಚಾಗಲಿದೆ. ನಿರ್ಭಯತೆಯಿಂದ ಜೀವನದಲ್ಲಿ ಮುಂದಕ್ಕೆ ಸಾಗುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ, ಸುಖ-ಸಂತೋಷ ಹೆಚ್ಚಾಗಲಿದೆ.  ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ವಿದೇಶದಿಂದ ಲಾಭವಾಗಲಿದೆ. ವೃತ್ತಿಯಲ್ಲಿ ಉನ್ನತ ಪ್ರಗತಿ ಸಾಧಿಸುವಿರಿ, ಈ ಅವಧಿಯಲ್ಲಿ ನೀವು ಅಪಾರ ಸಂಪತ್ತನ್ನು ಪಡೆಯುತ್ತೀರಿ.  

ತುಲಾ ರಾಶಿ: ಸೂರ್ಯನ ರಾಶಿ ಪರಿವರ್ತನೆ ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಅಪಾರ ಸಾಧ್ಯತೆಗಳನ್ನು ಸೃಷ್ಟಿಸಲಿದೆ. ನಿಮಗೆ ದೊಡ್ಡ ಹುದ್ದೆ, ವೇತನ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಆದಾಯವನ್ನು ಹೆಚ್ಚಾಗುವುದರಿಂದ ನಿಮ್ಮ ಅನೇಕ ಸಮಸ್ಯೆಗಳನ್ನು ಬಗೆಹರಿಯಲಿವೆ. ವ್ಯಾಪಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿಮ್ಮಿಂದ ಸಾಧ್ಯವಾಗಲಿದೆ.  ವೈಯಕ್ತಿಕ ಸಂಬಂಧಗಳು ಉತ್ತಮವಾಗಿರುತ್ತವೆ. ಆಸ್ತಿ-ವಾಹನವನ್ನು ಖರೀದಿಸಬಹುದು.  

ವೃಶ್ಚಿಕ ರಾಶಿ: ಸೂರ್ಯನ ರಾಶಿಯ ಪರಿವರ್ತನೆ ವೃಶ್ಚಿಕ ರಾಶಿಯವರಿಗೆ ಉತ್ತಮ ಯಶಸ್ಸನ್ನು ತರಲಿದೆ . ಅದೃಷ್ಟ ನಿಮ್ಮೊಂದಿಗೆ ಇರಲಿದೆ. ನೀವು ಪ್ರಮುಖ ಒಪ್ಪಂದ ಅಥವಾ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆ ಇದೆ. ದಾನ ಮಾಡಿವುದರಿಂದ ಪ್ರಯೋಜನವಾಗಲಿದೆ. ಕೆಲ ದೊಡ್ಡ ಸವಾಲುಗಳ ಮೇಲೆ ನೀವು ಜಯ ಸಾಧಿಸುವಿರಿ.  

ಮೀನ ರಾಶಿ: ಸೂರ್ಯನ ಈ ಸಂಕ್ರಮಣ ನಿಮಗೆ ಅನಿರೀಕ್ಷಿತ ಲಾಭಗಳನ್ನು ನೀಡಲಿದೆ.  ಇದು ನಿಮ್ಮ ಆಧ್ಯಾತ್ಮಿಕ ಪ್ರಗತಿಗೆ ಕಾರಣವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ, ಅನೇಕ ಮೂಲಗಳಿಂದ ಧನಪ್ರಾಪ್ತಿಯಾಗಲಿದೆ.  ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ನವವಿವಾಹಿತರು ಸಂತೋಷದ ಸಮಯವನ್ನು ಆನಂದಿಸುತ್ತಾರೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link