ಇನ್ನು 48 ಗಂಟೆಯಲ್ಲಿ ಈ ರಾಶಿಯಲ್ಲಿ ಗಜ ಕೇಸರಿ ಯೋಗ ! ಉಕ್ಕಿ ಬರುವುದು ಧನ ಸಂಪತ್ತು

Mon, 15 May 2023-2:53 pm,

ಮೇ 17 ರಂದು ರಾತ್ರಿ 7.39 ಕ್ಕೆ ಚಂದ್ರನು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರು ಕೂಡಾ ಇಡೀ ರಾಶಿಯಲಿದ್ದಾನೆ.  ಗುರು ಮತ್ತು ಚಂದ್ರನ ಸಂಯೋಗದಿಂದ ಗಜ ಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಅನೇಕ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಗಜಕೇಸರಿ ರಾಜಯೋಗದಿಂದ ಯಾವ ರಾಶಿಯವರಿಗೆ ವಿಶೇಷ ಲಾಭವಾಗಲಿದೆ ನೋಡೋಣ. 

ಗಜಕೇಸರಿ ರಾಜಯೋಗದ ರಚನೆಯಿಂದಾಗಿ ಮೇಷ ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ. ಈ ರಾಶಿಯಲ್ಲಿಯೇ ಗುರು ಮತ್ತು ಚಂದ್ರನ ಸಂಯೋಗವು ನಡೆಯಲಿದೆ. ಈ ಸಮಯದಲ್ಲಿ, ಈ ರಾಶಿಯ ಜನರು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ ಬಹುಕಾಲದಿಂದ ನಿಂತು ಹೋಗಿದ್ದ ಕೆಲಸ ಚುರುಕು ಪಡೆದು ಪೂರ್ಣಗೊಳ್ಳುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಬಡ್ತಿ ಮತ್ತು ವೇತನ ಹೆಚ್ಚಳದ ಸಂಪೂರ್ಣ ಅವಕಾಶಗಳಿವೆ.

ಗುರು ಮತ್ತು ಚಂದ್ರನ ಸಂಯೋಗದಿಂದ ರೂಪುಗೊಳ್ಳುವ ಗಜಕೇಸರಿ ಯೋಗವು, ಈ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ, ಈ ರಾಶಿಯ ಜನರು ಸಮಾಜದಲ್ಲಿ ಗೌರವ, ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರೆ. ಅಲ್ಲದೆ,  ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು.

ಗಜಕೇಸರಿ ಯೋಗವು ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಪಾರ ಯಶಸ್ಸನ್ನು ಸಾಧಿಸಲಾಗುತ್ತದೆ. ಹಣಕಾಸಿನ ಲಾಭವಾಗಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವ ಅವಕಾಶ ಸಿಗುವುದು. 

ಜ್ಯೋತಿಷಿಗಳ ಪ್ರಕಾರ, ಗುರು ಮತ್ತು ಚಂದ್ರ ಯಾವುದೇ ರಾಶಿಯಲ್ಲಿ ಸೇರಿದಾಗ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಗುರುಗ್ರಹವು ಜಾತಕದಲ್ಲಿ ಚಂದ್ರನಿಂದ ಕೇಂದ್ರಸ್ಥಾನದಲ್ಲಿ (ಪ್ರಥಮ, ನಾಲ್ಕನೇ, ಏಳನೇ ಮತ್ತು ಹತ್ತನೇ ಮನೆ) ಸ್ಥಿತಗೊಂಡಾಗ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)   

ZEENEWS TRENDING STORIES

By continuing to use the site, you agree to the use of cookies. You can find out more by Tapping this link