ಇನ್ನೆರಡೇ ದಿನಗಳಲ್ಲಿ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಬೀರುವನು ಶನಿ ದೇವ !ಇನ್ನು ಇವರು ಸೋಲಿಲ್ಲದ ಸರದಾರರು ! ಧನ ಸಂಪತ್ತಿಗೂ ಇಲ್ಲ ಕೊರತೆ

Wed, 01 Nov 2023-5:00 pm,

ಮೇಷ ರಾಶಿ :  ಮೇಷ ರಾಶಿಯವರ ಇಷ್ಟಾರ್ಥಗಳು ನೆರವೇರಲಿವೆ. ನಿಮ್ಮ ಆದಾಯವನ್ನು ಹೆಚ್ಚಿಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಕೆಲಸವನ್ನು  ಆರಂಭಿಸುವುದಾದರೆ ಯಶಸ್ಸು ಸಿಗುತ್ತದೆ. 

ವೃಷಭ ರಾಶಿ : ತಂದೆಯ ಆರೋಗ್ಯದ ಬಗ್ಗೆ ಗಮನ ಕೊಡಿ. ವೃತ್ತಿಯಲ್ಲಿ ಏರಿಳಿತಗಳು ಉಂಟಾಗಬಹುದು. ನಿಮ್ಮ ಕೆಲಸ ಅಥವಾ ಕೆಲಸದ ಸ್ಥಳದಲ್ಲಿಯೂ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.   

ಮಿಥುನ ರಾಶಿ : ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಅದು ಸರಿಯಾದ ಸಮಯ. ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ.   

ಕರ್ಕ ರಾಶಿ : ಆರೋಗ್ಯ ಕ್ಷೀಣಿಸಬಹುದು. ಶನಿ ದೇವರನ್ನು ಮತ್ತು ಕುಲದೇವತೆಯನ್ನು ಪೂಜಿಸಿದರೆ, ಎಲ್ಲಾ ಸವಾಲುಗಳನ್ನು ಜಯಿಸಿ ಯಶಸ್ಸು  ಕಾಣಬಹುದು.   

ಸಿಂಹ ರಾಶಿ : ಶನಿಯ ಈ ಸಂಚಾರವು ನಿಮ್ಮ ವೈವಾಹಿಕ ಸಂಬಂಧಗಳನ್ನು ಉತ್ತಮಗೊಳಿಸುತ್ತದೆ. ವೃತ್ತಿಜೀವನದಲ್ಲಿಯೂ ಯಶಸ್ಸು ಸಿಗುವುದು.  

ಕನ್ಯಾ ರಾಶಿ : ಶತ್ರುಗಳು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಸ್ನೇಹಿತರ ಸಹಾಯದಿಂದ  ಶತ್ರುಗಳು ಸೋಲುವುದು ಖಂಡಿತಾ. 

ತುಲಾ ರಾಶಿ : ತುಲಾ ರಾಶಿಯವರು ತಮ್ಮ ಊರು ಅಥವಾ ದೇಶದ ಹೊರಗಿನ ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.  ಕುಟುಂಬದಲ್ಲಿ ಸಂತೋಷ ಇರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.  

ವೃಶ್ಚಿಕ ರಾಶಿ : ಭೂಮಿ, ಆಸ್ತಿ ಖರೀದಿಸಲು ಬಯಸಿದರೆ, ಕೆಲವು ದಿನಗಳವರೆಗೆ ಕಾಯಿರಿ. ಇಲ್ಲದಿದ್ದರೆ  ಸಮಸ್ಯೆ ಎದುರಾಗಬಹುದು. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. 

ಧನು ರಾಶಿ :  ಸಹೋದರ-ಸಹೋದರಿಯರ ಸಂಬಂಧಗಳು ಬಲವಾಗಿರುತ್ತವೆ.  ಖ್ಯಾತಿ ಮತ್ತು ಗೌರವವನ್ನು ಕಾಪಾಡಿಕೊಳ್ಳಲು, ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರಬೇಕು

ಮಕರ ರಾಶಿ : ಈ ಅವಧಿಯಲ್ಲಿ ಮಕರ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ.   

ಕುಂಭ ರಾಶಿ : ಆರೋಗ್ಯ ಸಂಬಂಧಿ ಸಮಸ್ಯೆಗಳು ಪರಿಹಾರವಾಗಲಿವೆ. ವಿದ್ಯಾರ್ಥಿಗಳು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಈ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಅಡೆತಡೆಗಳನ್ನು ನಿವಾರಿಸಬಹುದು. 

ಮೀನ ರಾಶಿ : ಮೀನ ರಾಶಿಯವರಿಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಹುದಿನಗಳ ಚಿಂತೆಯಿಂದ ಮುಕ್ತಿ ಸಿಗಲಿದೆ. ಕೈಗೆತ್ತಿಕೊಂಡ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link