The Bra City: ಬೇಡಿದ ವರ ಈಡೇರಲು ಇಲ್ಲಿ ಮಹಿಳೆಯರ ಒಳಉಡುಪುಗಳನ್ನು ನೇತುಹಾಕಬೇಕು!! ಇದೆಂಥಾ ವಿಚಿತ್ರ ಹರಕೆ

Sun, 15 Jan 2023-12:01 pm,

ನ್ಯೂಜಿಲೆಂಡ್‌ನಲ್ಲಿ ವಿಚಿತ್ರ ಪದ್ಧತಿಯೊಂದು ಇದೆ. ಇಲ್ಲಿ ಹರಕೆ ತೀರಲು ಒಳ ಉಡುಪುಗಳನ್ನು ತಂತಿಗಳಿಗೆ ನೇತುಹಾಕುವ ಪದ್ಧತಿ ಇದೆ. ಆಸೆ ಈಡೇರಬಹುದು ಅಥವಾ ಈಡೇರದಿರಬಹುದು. ಆದರೆ ಈ ಪ್ರದೇಶವು ಇದೀಗ ಖಂಡಿತವಾಗಿಯೂ ಪ್ರವಾಸೋದ್ಯಮದ ಒಂದು ಭಾಗವಾಗಿ ಮಾರ್ಪಾಡಾಗಿದೆ. 

1999 ರಲ್ಲಿ, ಈ ತಂತಿಗಳಿಗೆ ಯಾರೋ ನಾಲ್ಕು ಮಹಿಳೆಯರ ಒಳ ಉಡುಪುಗಳನ್ನು ನೇತು ಹಾಕಿದ್ದರಂತೆ. ಹೊಸ ವರ್ಷಾಚರಣೆ ಮಾಡಿ ಕೆಲ ಹುಡುಗಿಯರು ಈ ಕೆಲಸ ಮಾಡಿದ್ದರು ಎನ್ನಲಾಗಿದೆ. ಮರುದಿನ ಮತ್ತೆ ಕೆಲವು ಹುಡುಗಿಯರು ಇಲ್ಲಿ ಇದೇ ರೀತಿ ಮಾಡಿದ್ದಾರೆ. ಇದೇ ವೇಳೆ ಹೀಗೆ ಮಾಡುವುದರಿಂದ ಬೇಡಿಕೆಗಳು ಈಡೇರುತ್ತವೆ ಎಂಬ ವದಂತಿಯನ್ನು ಕೆಲವರು ಹಬ್ಬಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ.

ನ್ಯೂಜಿಲೆಂಡ್ ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರಾಕೃತಿಕ ಸೊಬಗನ್ನು ನೋಡಲು ದೂರದೂರುಗಳಿಂದ ಜನ ಬರುತ್ತಾರೆ. ವಿಶೇಷವಾಗಿ ನ್ಯೂಜಿಲೆಂಡ್‌ನ ಕ್ವೀನ್ಸ್‌ಟೌನ್ ಮತ್ತು ವೆಲ್ಲಿಂಗ್‌ಟನ್ ನಗರಗಳು ವಿಶಿಷ್ಟವಾಗಿವೆ. ಆದರೆ ಈಗ ನ್ಯೂಜಿಲೆಂಡ್‌ನ ಸೆಂಟ್ರಲ್ ಒಟಾಗೊ ಕಾರ್ಡೋನಾ ಪ್ರವಾಸಿಗರಿಗೆ ವಿಶೇಷವಾಗಿದೆ. ಕಾರಣ ಇಲ್ಲಿ ಕಬ್ಬಿಣದ ತಂತಿಯ ಮೇಲೆ ನೇತಾಡುವ ಸಾವಿರಾರು ಮಹಿಳೆಯರ ಒಳ ಉಡುಪುಗಳು.

ಈಗ ನ್ಯೂಜಿಲೆಂಡ್‌ಗೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ಈ ಸ್ಥಳವನ್ನು ನೋಡಲು ಬರುತ್ತಾರೆ. ಈ ಪ್ರದೇಶದಲ್ಲಿ  ಸದ್ಯ ಪ್ರವಾಸೋದ್ಯಮ ಹೆಚ್ಚಾಗಿದೆ. ವಿಶೇಷವೆಂದರೆ ಈ ವಿಚಿತ್ರ ಸಂಪ್ರದಾಯವನ್ನು ತಡೆಯಲು ನ್ಯೂಜಿಲೆಂಡ್ ಸರ್ಕಾರ ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಲ್ಲಿಗೆ ಆಗಮಿಸುವ ಮಹಿಳೆಯರು ತಮ್ಮ ಸ್ವಂತ ಇಷ್ಟದಿಂದಲೇ ಈ ಕೆಲಸವನ್ನು ಮಾಡುತ್ತಾರೆ.  

ನ್ಯೂಜಿಲೆಂಡ್‌ನಲ್ಲಿ, ಸೆಂಟ್ರಲ್ ಒಟಾಗೊ ಕಾರ್ಡೋನಾ ಎಂಬ ಸ್ಥಳದಲ್ಲಿ ಹುಡುಗಿಯರು ತಮ್ಮ ಬ್ರಾಗಳನ್ನು ತೆಗೆದು ಕಬ್ಬಿಣದ ತಂತಿಯ ಮೇಲೆ ನೇತುಹಾಕುತ್ತಾರೆ. ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಿಂದಾಗಿ ಸಾವಿರಾರು ಬ್ರಾಗಳು ತಂತಿಯ ಮೇಲೆ ನೇತಾಡುತ್ತಿರುವುದು ಕಂಡುಬರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link