Saudi Arabia: ಆಮೆ ಆಕಾರದ ದೈತ್ಯ ವಿಹಾರ ನೌಕೆ ನಿರ್ಮಿಸಿದ ಸೌದಿ ಅರೇಬಿಯಾ!
ಸೌದಿ ಅರೇಬಿಯಾದ ಆಮೆ-ಆಕಾರದ ದೈತ್ಯ ವಿಹಾರ ನೌಕೆಯು 60,000 ಜನರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ.
ಆಮೆ-ಆಕಾರದ ವಿಹಾರ ನೌಕೆಯು ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, ಪೂರ್ಣಗೊಂಡ ನಂತರ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ತೇಲುವ ರಚನೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇಟಾಲಿಯನ್ ಡಿಸೈನ್ ಸ್ಟುಡಿಯೋ Lazzarini ವಿನ್ಯಾಸಗೊಳಿಸಿರುವ ಈ Pangeosನ ಉದ್ದವು 1,800 ಅಡಿಗಳಷ್ಟಿರುತ್ತದೆ. Pangeos ರೆಕ್ಕೆಗಳಿಂದ ಅದರ ಅಗಲವಾದ ಬಿಂದುವಿನಲ್ಲಿ 610 metres (2,000 ft) ಅಳತೆ ಹೊಂದಿದೆ.
ಈ ತೇಲುವ ವಿಹಾರ ನೌಕೆಯಲ್ಲಿ 19 ವಿಲ್ಲಾಗಳು ಮತ್ತು 64 ಅಪಾರ್ಟ್‌ಮೆಂಟ್‌ಗಳಿರುತ್ತವೆ. Pangeosನಲ್ಲಿ ಛಾವಣಿಯ ಉದ್ಯಾನ, ಮಾಲ್ ಮತ್ತು ಬೀಚ್ ಕ್ಲಬ್ ಸೇರಿದಂತೆ ಇನ್ನೂ ಹತ್ತು ಹಲವಾರು ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.
Pangeosನ ವಿಶಿಷ್ಟ ರಚನೆಯು 650 ಮೀಟರ್ ಅಗಲ ಮತ್ತು 600 ಮೀಟರ್ ಉದ್ದದ ‘ಟೆರಾಶಿಪ್‌ಯಾರ್ಡ್’ ಮೂಲಸೌಕರ್ಯವನ್ನು ಹೊಂದಿದ್ದು, ಸಮುದ್ರಕ್ಕೆ ನೇರ ಪ್ರವೇಶವನ್ನು ಒದಗಿಸುತ್ತದೆ.
Pangeos ಪ್ರಪಂಚದಾದ್ಯಂತ ತಡೆರಹಿತವಾಗಿ ನೌಕಾಯಾನ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಕೊನೆಯಾಗದ ಹಸಿರು ಶಕ್ತಿ ಸರಬರಾಜು ವ್ಯವಸ್ಥೆಯೊಂದಿಗೆ ಸಿದ್ಧವಾಗಿದೆ.