ಈ 3 ರಾಶಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ ʼ2025ʼರ ಹೊಸ ವರ್ಷ: ಸಾಲವೇ ಇಲ್ಲದೆ ನೆಮ್ಮದಿಯ ಬದುಕು ಇವರದ್ದಾಗಲಿದೆ; ದುಡಿದಷ್ಟೂ ದುಡ್ಡು ಜೇಬು ಸೇರುತ್ತದೆ

Sat, 07 Sep 2024-7:25 am,

2025ರ ಹೊಸ ವರ್ಷ ಪ್ರಾರಂಭವಾಗಲು ಇನ್ನೇನು ಸಂಪೂರ್ಣ 4 ತಿಂಗಳು ಕೂಡ ಇಲ್ಲ. ಈ ಸಂದರ್ಭದಲ್ಲಿ ಮುಂದಿನ ವರ್ಷ ಯಾವ ರಾಶಿಯವರಿಗೆ ಅದೃಷ್ಟದ ವರ್ಷವಾಗಲಿದೆ ಎಂಬುದನ್ನು ತಿಳಿಯೋಣ.

ಕೆಲವು ರಾಶಿಗಳ ಜನರಿಗೆ 2025 ರ ವರ್ಷವು ತುಂಬಾ ವಿಶೇಷವಾಗಿರುತ್ತದೆ. ದೃಕ್ ಪಂಚಾಂಗದ ಪ್ರಕಾರ, 2025 ರಲ್ಲಿ, ಸೂರ್ಯ, ಚಂದ್ರ, ಮಂಗಳ, ಶುಕ್ರ, ಬುಧ ಮುಂತಾದ ಗ್ರಹಗಳು ನಿರ್ದಿಷ್ಟ ಅವಧಿಯ ನಂತರ ತಮ್ಮ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಇದಲ್ಲದೇ ಈ ವರ್ಷ ಮೇ ತಿಂಗಳಲ್ಲಿ ದೇವತೆಗಳ ಗುರುವಾದ ಗುರು ಕೂಡ ವೃಷಭ ರಾಶಿಯಿಂದ ಮಿಥುನ ರಾಶಿಗೆ ತೆರಳುತ್ತಾನೆ. ಇದರೊಂದಿಗೆ ಶನಿಯು ಕೂಡ ಕುಂಭ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

 

ಇದಲ್ಲದೇ ಕ್ರೂರಗ್ರಹಗಳಾದ ರಾಹು ಮತ್ತು ಕೇತು ಕೂಡ ರಾಶಿಯನ್ನು ಬದಲಾಯಿಸಲಿದ್ದಾರೆ. ಹೀಗಿರುವಾಗ 12 ರಾಶಿಗಳ ಜೀವನವು ಖಂಡಿತವಾಗಿಯೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಎದುರಿಸುತ್ತದೆ. ಒಟ್ಟಾರೆಯಾಗಿ 2025 ರಲ್ಲಿ ಯಾವ ರಾಶಿಗಳು ಅದೃಷ್ಟದ ಕೃಪೆಯನ್ನು ಪಡೆಯುತ್ತವೆ ಎಂಬುದನ್ನು ತಿಳಿಯೋಣ,

 

ಮೇಷ ರಾಶಿ: ಹೊಸ ವರ್ಷ 2025 ಮೇಷ ರಾಶಿಯ ಜನರಿಗೆ ಅನುಕೂಲಕರವಾಗಲಿದೆ. ವರ್ಷದ ಆರಂಭದಿಂದ ಮೇ ವರೆಗೆ ಗುರು ಗ್ರಹ ಸಂಪತ್ತಿನ ಮನೆಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಈ ರಾಶಿಯ ಜನರು ಅಪಾರ ಸಂಪತ್ತನ್ನು ಪಡೆಯುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯವು ವೇಗವಾಗಿ ಹೆಚ್ಚಾಗುತ್ತದೆ.

 

ಕರ್ಕಾಟಕ ರಾಶಿ: ಈ ವರ್ಷಕ್ಕೆ ಹೋಲಿಸಿದರೆ, ಕರ್ಕಾಟಕ ರಾಶಿಯವರಿಗೆ ಹೊಸ ವರ್ಷ 2025 ಹೆಚ್ಚು ಉತ್ತಮವಾಗಿರುತ್ತದೆ. ವೃತ್ತಿ ಸಂಬಂಧಿತ ಅನೇಕ ಸಮಸ್ಯೆಗಳನ್ನು ನಿವಾರಣೆಯಾಗಲಿದೆ. ಸಾಲಬಾಧೆಯಿಂದ ಮುಕ್ತಿಹೊಂದಲಿದ್ದೀರಿ. ಅನೇಕ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಮೇ ಮಧ್ಯದಲ್ಲಿ ಗುರುವಿನ ರಾಶಿ ಬದಲಾವಣೆಯಿಂದ ಕೆಲಸದಲ್ಲಿ ಸ್ವಲ್ಪ ಒತ್ತಡವಿರಬಹುದು. ಆದರೆ ಇದರಿಂದ ನೀವು ಪ್ರಯೋಜನವನ್ನು ಸಹ ಪಡೆಯುತ್ತೀರಿ.

 

ಸಿಂಹ ರಾಶಿ: 2025 ರ ವರ್ಷವು ಸಿಂಹ ರಾಶಿಯವರಿಗೆ ಸಂತೋಷವನ್ನು ತರಲಿದೆ. ಈ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ವೃತ್ತಿ ಮತ್ತು ವ್ಯವಹಾರದ ಬಗ್ಗೆ ಮಾತನಾಡುವುದಾದರೆ, ಈ ರಾಶಿಯ ಜನರು ಬಡ್ತಿ ಪಡೆಯುವ ಸಂಪೂರ್ಣ ಅವಕಾಶಗಳನ್ನು ಹೊಂದಿರುತ್ತಾರೆ.

 

ಸೂಚನೆ: ಈ ಲೇಖನದಲ್ಲಿ ನೀಡಲಾದ ಯಾವುದೇ ಮಾಹಿತಿಯ ನಿಖರತೆ ಅಥವಾ ವಿಶ್ವಾಸಾರ್ಹತೆ ಖಾತರಿಯಿಲ್ಲ. ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಾತರಿಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link