ವರ್ಷಾಂತ್ಯದಲ್ಲಿ ಮೂರು ಅಪರೂಪದ ರಾಜಯೋಗಗಳ ರಚನೆ, ಈ ಜನರ ಸ್ಥಾನಮಾನ-ಪ್ರತಿಷ್ಠೆಯ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳ!
ರುಚಕ ಹಾಗೂ ಶಶ ರಾಜಯೋಗಗಳು ಪಂಚ ಮಹಾಪುರುಷ ರಾಜಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈದಲ್ಲದ ಭದ್ರಯೋಗ, ಮಾಲವ್ಯ ಯೋಗ ಹಾಗೂ ಹಮಸಾ ಯೋಗಗಳು ಕೂಡ ಇವುಗಳಲ್ಲಿ ಶಾಮೀಲಾಗಿವೆ. ಈ ರಾಜಯೋಗಗಳ ನಿರ್ಮಾಣದಿಂದ ವ್ಯಕ್ತಿಗೆ ಸಾಕಷ್ಟು ಪ್ರಸಿದ್ಧಿ, ಸೌಭಾಗ್ಯ ಜೀವನ ಶಕ್ತಿಯ ಜೊತೆಗೆ ಧನಲಾಭ ಪ್ರಾಪ್ತಿಯಾಗುತ್ತವೆ, ಇದಲ್ಲದೆ ವೃತ್ತಿ ಜೀವನದಲ್ಲಿ ಉನ್ನತಿ ಕೂಡ ಪ್ರಾಪ್ತಿಯಾಗುತ್ತದೆ. ವರ್ಷಾಂತ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ರಾಜಯೋಗಗಳಿಂದ ಲಾಭ ಪಡೆದುಕೊಳ್ಳುವ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಮೇಷ ರಾಶಿ: ಈ ಮೂರು ರಾಜಯೋಗಗಳು ಮೇಷ ರಾಶಿಯ ಜಾತಕದವರಿಗೆ ತುಂಬಾ ವಿಶೇಷವಾಗಿರಲಿವೆ. ವ್ಯಾಪಾರದಲ್ಲಿ ಅಪಾರ ಯಶಸ್ಸು ಹಾಗೂ ಧನಲಾಭ ಉಂಟಾಗಲಿದೆ. ಬಿಸ್ನೆಸ್ ನಲ್ಲಿ ನೀವು ಮಾಡಿರುವ ಹೂಡಿಕೆ ನಿಮ್ಮತ್ತ ಮರಳಲಿದ್ದು, ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ರಾಶ್ಯಾಧಿಪ ಮಂಗಳನ ಶುಭ ದೃಷ್ಟಿ ನಿಮ್ಮ ಮೇಲಿರುವ ಕಾರಣ ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೀಗಿರುವಾಗ ಈ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ವಿದ್ಯಾರ್ಥಿಗಳ ಪಾಲಿಗೂ ಕೂಡ ಈ ಯೋಗಗಳು ತುಂಬಾ ಲಾಭದಾಯಕ ಸಿದ್ಧ ಸಾಬೀತಾಗಲಿವೆ. ಪರಿಶ್ರಮ ಪಟ್ಟರೆ ಯಶಸ್ಸು ನಿಶ್ಚಿತವಾಗಿ ನಿಮ್ಮ ಪಾದಕ್ಕೆ ಮುತ್ತಿಕ್ಕಲಿದೆ. ಭಾಗ್ಯದ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದ್ದು, ನೌಕರಿಯಲ್ಲಿ ಹೊಸ ಅವಕಾಶಗಳು ನಿಮಗೆ ಪ್ರಾಪ್ತಿಯಾಗಲಿವೆ. ನೀವು ನಿಮ್ಮ ಬುದ್ಧಿಯ ಬಲದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.
ವೃಶ್ಚಿಕ ರಾಶಿ: ವರ್ಷಾಂತ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮೂರೂ ರಾಜಯೋಗಗಳು ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿವೆ. ಗ್ರಹಗಳ ರಾಜ ಸೂರ್ಯ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಮಂಗಳ ಹಾಗೂ ಬುಧನ ಜೊತೆಗೆ ವಿರಾಜಮಾನನಾಗಿದ್ದಾನೆ. ಇದರಿಂದ ನೀವು ಕಾರ್ಯಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನು ಸ್ವೀಕರಿಸುವಿರಿ. ನಿಮ್ಮ ಆತ್ಮವಿಶ್ವಾಸ ಹಾಗೂ ಸಾಹಸದಿಂದ ದೊಡ್ಡ ದೊಡ್ಡ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಇದಲ್ಲದೆ ರುಚಕ ರಾಜಯೋಗ ನಿರ್ಮಾಣದಿಂದ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಿಗುವ ನಿರೀಕ್ಷೆ ಇದೆ. ನಿಮ್ಮಲ್ಲಿ ಲೀಡರ್ಶಿಪ್ ಗುಣ ಹೆಚ್ಚಾಗಲಿದೆ. ಇದರಿಂದ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ನಲ್ಲಿಯೋ ಕೂಡ ಅಪಾರ ಯಶಸ್ಸು ಮತ್ತು ಧನಲಾಭ ಪ್ರಾಪ್ತಿಯಾಗಲಿದೆ.
ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಪಾಲಿಗೂ ಕೂಡ ಈ ಮೂರು ರಾಜಯೋಗಗಳು ವರದಾನ ಸಾಬೀತಾಗಲಿವೆ. ನಿಮ್ಮ ವ್ಯಕ್ತಿತ್ವ, ಸ್ವಭಾವ ಹಾಗೂ ಕಾರ್ಯಶೈಲಿಯಲ್ಲಿ ಪರಿವರ್ತನೆಯನ್ನು ನೀವು ಕಾಣಬಹುದು. ನಿಮಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಲಾಭ ಸಿಗಲಿದೆ. ಮಹಾಧನ ರಾಜಯೋಗ ನಿರ್ಮಾಣದಿಂದ ಬಿಸ್ನೆಸ್, ವ್ಯವಸಾಯ ಕೂಡ ವೃದ್ಧಿಯಾಗಲಿದೆ. ಹೊಸ ವ್ಯಾಪಾರ ಆರಂಭಿಸಲು ಬಯಸುತ್ತಿದ್ದರೆ, ಈ ಅವಧಿ ನಿಮಗೆ ಉತ್ತಮ ಸಾಬೀತಾಗಲಿದೆ. ಪಾರ್ಟ್ನರ್ ಶಿಪ್ ನಲ್ಲಿ ಆರಂಭಿಸಿದ ಕೆಲಸ ಕೂಡ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ನಿಮ್ಮ ಎಲ್ಲ ಆಸೆ ಆಕಾಂಕ್ಷೆಗಳು ಈಡೇರಲಿವೆ. ಮಾನಸಿಕ ಶಾಂತಿ ಸಿಗಲಿದೆ. ವಾಹನ, ಸಂಪತ್ತು, ಮನೆ ಇತ್ಯಾದಿಗಳನ್ನು ಖರೀದಿಸುವ ನಿಮ್ಮ ಆಸೆ ಈಡೇರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ವೈವಾಹಿಕ ಜೀವನ ಸುಖಮಯವಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)