Yearly Horoscope: 2024ರಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಯಾರಿಗೆ ಎಚ್ಚರಿಕೆ ಅಗತ್ಯ
ವರ್ಷ ಭವಿಷ್ಯ 2024: ಹಳೆಯ ವರ್ಷ ಕಳೆದು ಹೊಸ ವರ್ಷದ ಹೊಸ್ತಿಲಿನಲ್ಲಿದ್ದಾಗ ಈ ವರ್ಷ ನಮಗೆ ಸಂತೋಷದಿಂದಲೇ ತುಂಬಿರಲಿ ಎಂದು ಎಲ್ಲರೂ ಬಯಸುತ್ತಾರೆ. 2023 ಕೊನೆಗೊಂಡು 2024 ಆರಂಭಗೊಳ್ಳಲು ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಪ್ರತಿ ವರ್ಷದಂತೆ 2024ರಲ್ಲಿಯೂ ರಾಶಿಗಳ ಸ್ಥಾನ ಬದಲಾವಣೆ ಆಗಲಿದ್ದು ಇವು ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತವೆ.
2024ರ ಹೊಸ ವರ್ಷದ ದ್ವಾದಶ ರಾಶಿಗಳ ಫಲಾಫಲ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರ ಹೊಸ ವರ್ಷದ ದ್ವಾದಶ ರಾಶಿಗಳ ಫಲಾಫಲ ಹೇಗಿದೆ. ಈ ವರ್ಷ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಏನೆಲ್ಲಾ ಹೊತ್ತು ತರಲಿದೆ ತಿಳಿಯಿರಿ...
ಮೇಷ ರಾಶಿ ವರ್ಷ ಭವಿಷ್ಯ 2024 : 2024ರ ವರ್ಷದ ಆರಂಭದಲ್ಲಿ ಮೇಷ ರಾಶಿಯವರು ಭಾರೀ ಲಾಭವನ್ನು ನಿರೀಕ್ಷಿಸಬಹುದು. ಇದರಿಂದಾಗಿ ಸಮಾಜದಲ್ಲಿ ನಿಮ್ಮ ಸ್ಥಾನಮಾನವೂ ಬಲಗೊಳ್ಳಲಿದೆ. ಶನಿ ದೇವನ ಕೃಪೆಯಿಂದಾಗಿ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ನೀವು ಉನ್ನತ ವಿದ್ಯಾಭ್ಯಾಸ ಇಲ್ಲವೇ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ ಈ ಸಂರ್ಭದಲ್ಲಿ ನಿಮ್ಮ ಬಹುದಿನಗಳ ಕನಸು ಕೂಡ ನನಸಾಗಲಿದೆ.
ವೃಷಭ ರಾಶಿ ವರ್ಷ ಭವಿಷ್ಯ 2024: ಹೊಸ ವರ್ಷದ ಆರಂಭದಲ್ಲಿ ವೃಷಭ ರಾಶಿಯವರ ಖರ್ಚು ಹೆಚ್ಚಾಗಲಿದೆ. ಮೇ ತಿಂಗಳಲ್ಲಿ ಗುರು ಸಂಚಾರದ ಬಳಿಕ ನಿಮ್ಮ ಸಮಸ್ಯೆಗಳು ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತವೆ. ಯೋಗಕಾರಕ ಶನಿಯು ವರ್ಷವಿಡೀ ಹತ್ತನೇ ಮನೆಯಲ್ಲಿ ಇರುವುದರಿಂದ ಕಠಿಣ ಪರಿಶ್ರಮ ಅಗತ್ಯವಿರುತ್ತದೆ. ನಿಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲವೂ ಲಭ್ಯವಿರುತ್ತದೆ. ವೃತ್ತಿ ಬದುಕಿನಲ್ಲಿ ರಾಜಯೋಗವಿದ್ದು, ಪ್ರಗತಿಯ ಹಾದಿಗಳು ತೆರೆಯಲಿವೆ.
ಮಿಥುನ ರಾಶಿ ವರ್ಷ ಭವಿಷ್ಯ 2024: ಹೊಸ ವರ್ಷವು ಮಿಥುನ ರಾಶಿಯವರಿಗೆ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಶುಭ ಫಲಗಳನ್ನು ನೀಡಲಿದೆ. ಇದು ಕೌಟುಂಬಿಕ ಸಂತೋಷವನ್ನು ಹೆಚ್ಚಿಸಲಿದ್ದು ಹಣಕಾಸಿನ ಬಂಪರ್ ಲಾಭವನ್ನು ಸಹ ನಿರೀಕ್ಷಿಸಬಹುದು. ಒಟ್ಟಾರೆಯಾಗಿ, ಸಂಗಾತಿ, ಮಕ್ಕಳು, ಕುಟುಂಬಕ್ಕೆ ಸಂಬಂಧಿಸಿದಂತೆ 2024ರ ವರ್ಷವು ಮಿಥುನ ರಾಃಶಿಯವರಿಗೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ.
ಕರ್ಕಾಟಕ ರಾಶಿ ವರ್ಷ ಭವಿಷ್ಯ 2024: 2024ರಲ್ಲಿ ಕರ್ಕಾಟಕ ರಾಶಿಯವರು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಿಶ್ರ ಫಲಗಳನ್ನು ಪಡೆಯಲಿದ್ದಾರೆ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಸವಾಲುಗಳು ಹೆಚ್ಚಾಗಲಿದ್ದು, ಬಹುತೇಕ ಸಂದರ್ಭದಲ್ಲಿ ಹಠಾತ್ ಕೆಲಸ ಬದಲಾವಣೆಯಂತಹ ಸಮಸ್ಯೆಯನ್ನೂ ಕೂಡ ಎದುರಿಸಬೇಕಾಗುತ್ತದೆ. ಹಾಗಾಗಿ ಸಂಯಮದಿಂದ ಯಾವುದೇ ಕೆಲಸ ಮಾಡುವುದನ್ನು ಪರಿಗಣಿಸಿ.
ಸಿಂಹ ರಾಶಿ ವರ್ಷ ಭವಿಷ್ಯ 2024: 2024ರ ವರ್ಷ ಸಿಂಹ ರಾಶಿಯವರಿಗೆ ಸಕಲ ರೀತಿಯಲ್ಲೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ನೀವು ಯೋಚಿಸುವುದಕ್ಕಿಂತ ಹೆಚ್ಚು ಆದಾಯವನ್ನು ಪಡೆಯುವಿರಿ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಕೌಟುಂಬಿಕ ಸುಖವನ್ನೂ ಅನುಭವಿಸುವಿರಿ.
ಕನ್ಯಾ ರಾಶಿ ವರ್ಷ ಭವಿಷ್ಯ 2024: 2024ರ ವರ್ಷದ ಆರಂಭವು ಕನ್ಯಾ ರಾಶಿಯವರಿಗೆ ಉದ್ಯೋಗ ರಂಗಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ವ್ಯಾಪಾರಸ್ಥರೂ ಸಹ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ನಿಮ್ಮ ಪಾಲಿಗಿದೆ. ಬಿಸಿನೆಸ್ ಮಾಡುವ ವ್ಯಕ್ತಿಗಳು ವಿದೇಶಿ ಸಂಪರ್ಕವನ್ನು ಸಾಧಿಸಲು ಯೋಚಿಸುತ್ತಿದ್ದರೆ ಈ ವರ್ಷ ಅದು ಸಾಧ್ಯವಾಗಲಿದೆ.
ತುಲಾ ರಾಶಿ ವರ್ಷ ಭವಿಷ್ಯ 2024: ತುಲಾ ರಾಶಿಯವರಿಗೆ ವರ್ಷದ ಆರಂಭ ಅತ್ಯುತ್ತಮವಾಗಿದೆ. ವರ್ಷದ ಆರಂಭವು ವೈವಾಹಿಕ ಸಂಬಂಧಗಳಿಗೆ ಅನುಕೂಲಕರವಾಗಿರುತ್ತದೆ. ವರ್ಷದ ಮಧ್ಯದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಬಾಧಿಸಬಹುದು. ನಿಮ್ಮ ಜವಾಬ್ದಾರಿಗಳನ್ನು ನೀವು ಹೆಚ್ಚು ಅರ್ಥಮಾಡಿಕೊಂಡರೆ ಎಂತಹುದೇ ಸಮಸ್ಯೆಗಳಿಂದ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು.
ವೃಶ್ಚಿಕ ರಾಶಿ ವರ್ಷ ಭವಿಷ್ಯ 2024: ವೃಶ್ಚಿಕ ರಾಶಿಯವರಿಗೆ 2024ರ ವರ್ಷದ ಆರಂಭವು ವೃತ್ತಿಯಲ್ಲಿ ಪ್ರಗತಿ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನೆಚ್ಚಿನ ಉದ್ಯೋಗವನ್ನು ನೀಡಲಿದೆ. ಕೆಲಸ ಮಾಡುವವರಿಗೆ ಈ ವರ್ಷ ಉತ್ತಮವಾಗಿರುತ್ತದೆ. ಹೊಸ ಉದ್ಯೋಗ ಸಿಗಬಹುದು. ನೀವು ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಮೂಲಗಳು ಹೆಚ್ಚಾಗಲಿದೆ. ಶತ್ರುಗಳ ವಿರುದ್ಧ ಜನ ನಿಮ್ಮದಾಗಲಿದ್ದು ಯಾವುದೇ ಹೊಸ ಯೋಜನೆಯಲ್ಲಿ ನೀವು ಸುಲಭವಾಗಿ ಜಯ ಸಾಧಿಸುವಿರಿ.
ಧನು ರಾಶಿ ವರ್ಷ ಭವಿಷ್ಯ 2024: 2024ರ ವರ್ಷದಲ್ಲಿ ನೀವು ಸೋಮಾರಿತನವನ್ನು ಬಿಟ್ಟರಷ್ಟೇ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂಬುದನ್ನೂ ಧನು ರಾಶಿಯವರು ನೆನಪಿಡಿ. ರಾಹುವಿನ ಪ್ರಭಾವದಿಂದಾಗಿ ಉದ್ಯೋಗ ಕ್ಷೇತ್ರಗಳು ಏರಿಳಿತಗಳು ಕಂಡು ಬರಲಿವೆ. ಕೌಟುಂಬಿಕ ಜೀವನದಲ್ಲಿಯೂ ನೀವು ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಮಕರ ರಾಶಿ ವರ್ಷ ಭವಿಷ್ಯ 2024: ಮಕರ ರಾಶಿಯವರಿಗೆ 2024ರ ವರ್ಷವು ಆರ್ಥಿಕವಾಗಿ ನಿಮ್ಮನ್ನು ಸದೃಢರಾಗಿಸುತ್ತದೆ. ಯಾವುದೇ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಖಂಡಿತವಾಗಿಯೂ ವಿಜಯಮಾಲೆ ನಿಮ್ಮದೇ ಆಗಿರಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ನಿಮ್ಮ ಕುಟುಂಬ ಜೀವನದ ಸುಖ ಸಂತೋಷಕ್ಕೆ ಕಾರಣವಾಗಲಿದೆ.
ಕುಂಭ ರಾಶಿ ವರ್ಷ ಭವಿಷ್ಯ 2024: 2024ರಲ್ಲಿಯೂ ಶನಿ ನಿಮ್ಮ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಇದರ ಶುಭ ಪರಿಣಾಮಗಳನ್ನು ನೀವು ಅನುಭವಿಸುವಿರಿ. ಯಾವುದೇ ಕೆಲಸದಲ್ಲಿ ಸಂಪೂರ್ಣ ಪರಿಶ್ರಮದ ಫಲ ದೊರೆಯಲಿದೆ. ಇದು ನಿಮ್ಮನ್ನು ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ. ಒಟ್ಟಾರೆಯಾಗಿ 2024ರಲ್ಲಿ ಕುಂಭ ರಾಶಿಯವರಿಗೆ ಅತ್ಯುತ್ತಮ ಸಮಯ ಎಂದು ಹೇಳಬಹುದು.
ಮೀನ ರಾಶಿ ವರ್ಷ ಭವಿಷ್ಯ 2024: 2024ರ ವರ್ಷದ ಆರಂಭದಲ್ಲಿ ಮೀನ ರಾಶಿಯವರ ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. ನಿಮ್ಮ ಮಾತಿನಲ್ಲಿ ಮಾಧುರ್ಯ ಹೆಚ್ಚಲಿದ್ದು ಇದು ಸಂಬಂಧಗಳನ್ನು ಬಳಪಡಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ವೃತ್ತಿ ಬದುಕಿನಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಅದೃಷ್ಟದ ಬೆಂಬಲದಿಂದಾಗಿ 2024ರಲ್ಲಿ ಮೀನ ರಾಶಿಯವರು ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬಹುದು. ಆದಾಗ್ಯೂ, ಖರ್ಚುಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.