Photo Gallery: ಈ ಪ್ರತಿಮೆಗಳ ಹಿಂದೆಯೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೈಚಳಕವಿದೆ..!
ಮೈಸೂರಿ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಹಿಂಭಾಗದ ಭವ್ಯವಾದ ಮೇಲಾವರಣದಲ್ಲಿ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯವರ ಕೊಡುಗೆಯನ್ನು ಗೌರವಿಸಲು ಅವರ 125ನೇ ಜನ್ಮ ವಾರ್ಷಿಕೋತ್ಸವದ ಮೊದಲು ಈ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಪ್ರಧಾನಿ ಮೋದಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಹಿಂದೂಗಳ ನಂಬಿಕೆಯ ಕೇಂದ್ರವಾದ ಕೇದಾರನಾಥ ಧಾಮದಲ್ಲಿ ಸ್ಥಾಪಿಸಲಾದ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ್ದಾರೆ. ಈ ವಿಗ್ರಹವು ಸುಮಾರು 30 ಟನ್ ತೂಕವಿದೆ. ಈ ಮೂರ್ತಿಯನ್ನು ಕಪ್ಪು ಗ್ರಾನೈಟ್ ಕಲ್ಲಿನಿಂದ ಮಾಡಲಾಗಿದೆ.
ಮೈಸೂರು ಜಿಲ್ಲೆಯ ಚುಂಚನಕಟ್ಟೆಗೆ ಅರುಣ್ ಯೋಗಿರಾಜ್ 21 ಅಡಿ ಎತ್ತರದ ಹನುಮಾನ್ ಪ್ರತಿಮೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 15 ಅಡಿ ಎತ್ತರದ ಪ್ರತಿಮೆ, ಮೈಸೂರಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ಶ್ವೇತ ಅಮೃತಶಿಲಾ ಪ್ರತಿಮೆ, 6 ಅಡಿ ಎತ್ತರದ ಏಕಶಿಲಾ ನಂದಿ ಪ್ರತಿಮೆ, 6 ಅಡಿ ಎತ್ತರದ ಬನಶಂಕರಿ ದೇವಿಯ ಪ್ರತಿಮೆ ಮತ್ತು ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿ ಎತ್ತರದ ಬಿಳಿ ಅಮೃತಶಿಲಾ ಪ್ರತಿಮೆ ಸೇರಿದಂತೆ ಹಲವು ಪ್ರತಿಮೆಗಳನ್ನು ರಚಿಸಿದ್ದಾರೆ.
ಮೈಸೂರಿನ ಪ್ರಸಿದ್ಧ ಶಿಲ್ಪಿಗಳ ಕುಟುಂಬದ 5ನೇ ತಲೆಮಾರಿನವರು ಅರುಣ್ ಯೋಗಿರಾಜ್. ಇವರು ತಯಾರಿಸಿದ ಶಿಲ್ಪಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾಗಿದೆ.
ಅರುಣ್ ಯೋಗಿರಾಜ್ ಅವರ ರಕ್ತದಲ್ಲಿ ಕಸುಬುದಾರಿಕೆ ಇದ್ದರೂ, ಅವರು ತಮ್ಮ ವೃತ್ತಿಜೀವನವನ್ನು ಉದ್ಯೋಗದಿಂದ ಪ್ರಾರಂಭಿಸಿದರು. ಎಂಬಿಎ ಮಾಡಿದ ಬಳಿಕ ಎಂಎನ್‍ಸಿಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು.