Solar Eclipse 2023 : ಹಿಂದೂ ಧರ್ಮಗ್ರಂಥಗಳಲ್ಲಿ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಸೂರ್ಯಗ್ರಹಣದ ಪರಿಣಾಮವನ್ನು ಎಲ್ಲಾ ರಾಶಿಯವರ ಜೀವನದ ಮೇಲೆ  ಕಾಣಬಹುದು. ಈ ಬಾರಿ ವರ್ಷದ ಮೊದಲ ಗ್ರಹಣವು  ಏಪ್ರಿಲ್ 20 2023 ರಂದು ಸಂಭವಿಸಲಿದೆ. ಆದರೆ, ಇದು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ. ಗ್ರಹಣದ ಸಮಯದಲ್ಲಿ, ಸೂರ್ಯನು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿ ಇರುತ್ತಾನೆ. ಹೀಗಿರುವಾಗ ಗ್ರಹಣದ   ಗರಿಷ್ಠ ಪರಿಣಾಮ ಮೇಷ ರಾಶಿಯ ಜನರ ಮೇಲೆ ಕಂಡುಬರುತ್ತದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇಷ ರಾಶಿಯವರಿಗೆ ಸೂರ್ಯಗ್ರಹಣವು ಪ್ರತಿಕೂಲವಾಗಿರುತ್ತದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಕಂಡುಬರುತ್ತವೆ. ಈ ಸಮಯದಲ್ಲಿ, ಮಾನಸಿಕ ತೊಡಕುಗಳು ಹೆಚ್ಚಾಗುತ್ತವೆ. ಹಣಕಾಸಿನ ವಿಷಯದಲ್ಲೂ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ, ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ಯಾವುದೇ ರೀತಿಯ ಬದಲಾವಣೆಯ ಬಗ್ಗೆ ಯೋಚಿಸಬೇಡಿ. ಸೂರ್ಯನ ಮಂಗಳಕರ ಫಲಗಳಿಗಾಗಿ, ನಿಯಮಿತವಾಗಿ ಕೆಂಪು ಹೂವುಗಳನ್ನು ಮತ್ತು ನೀರನ್ನು ಸೂರ್ಯನಿಗೆ ಅರ್ಪಿಸಿ.


ಇದನ್ನೂ ಓದಿ : ಗುರು ಸಂಕ್ರಮಣ 2023: ಈ 3 ರಾಶಿಯವರು ಅದೃಷ್ಟದ ಜೊತೆಗೆ ಹಣವಂತರಾಗುತ್ತಾರೆ!
 
ವೃಷಭ ರಾಶಿ
ಸೂರ್ಯಗ್ರಹಣವು ಈ ರಾಶಿಯವರ ಜೀವನದಲ್ಲಿ ಕೋಲಾಹಲವನ್ನು ಸೃಷ್ಟಿಸಲಿದೆ. ಈ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಕೋಪ ಬರುತ್ತದೆ. ಖರ್ಚುಗಳಲ್ಲಿ ದಿಢೀರ್ ಹೆಚ್ಚಳವಾಗಲಿದೆ. ಪೋಷಕರ ಕಾಯಿಲೆಗಳಿಗೆ ಖರ್ಚು ಮಾಡಬೇಕಾಗಬಹುದು. ಪರಿಹಾರಕ್ಕಾಗಿ ಪ್ರತಿ ಭಾನುವಾರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.


ಕನ್ಯಾರಾಶಿ 
ಆರೋಗ್ಯದ ವಿಷಯದಲ್ಲಿ, ಈ ರಾಶಿಯವರಿಗೆ ಸಮಯ ಉತ್ತಮವಾಗಿರುವುದಿಲ್ಲ. ಹಳೆಯ ರೋಗವು ಮತ್ತೆ ತೊಂದರೆ ನೀಡಬಹುದು. ವ್ಯಾಪಾರ ಮಾಡುವವರು ನಷ್ಟವನ್ನು ಎದುರಿಸಬೇಕಾಗಬಹುದು. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪರಿಹಾರಕ್ಕಾಗಿ, ತಾಮ್ರದ ಪಾತ್ರೆಯಲ್ಲಿ ಪ್ರತಿದಿನ ಸೂರ್ಯನಿಗೆ ನೀರನ್ನು ಅರ್ಪಿಸಿ.


ಇದನ್ನೂ ಓದಿ : Lakshmi Narayana Yog: ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!


ತುಲಾ ರಾಶಿ
ಈ ರಾಶಿಯ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೂಡಿಕೆ ಮಾಡುವ ಮುನ್ನ ಯೋಚಿಸಿ. ಏಕೆಂದರೆ ಹೂಡಿಕೆಯು ನಿಮಗೆ ನಿರೀಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ. ಪರಿಹಾರಕ್ಕಾಗಿ ಪ್ರತಿ ಮಂಗಳವಾರ ಗೋಧಿಯನ್ನು ದಾನ ಮಾಡಿ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.