ಬೆಂಗಳೂರು :ಜೀವನದಲ್ಲಿ ಸವಾಲುಗಳು, ಏಳುಬೀಳುಗಳು,ಗೊಂದಲ, ಕಷ್ಟ ಸುಖ ಎಲ್ಲವೂ ಇರುತ್ತದೆ.ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನ ಬಹಳ ಸುಖಮಯವಾಗಿರುತ್ತದೆ.ಇನ್ನು ಯಾವ ಸಮಯದಲ್ಲಿ ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುವುದು ಕೂಡಾ ಮುಖ್ಯ. ಸಮಯಕ್ಕೆ ಸರಿಯಾಗಿ ನಮ್ಮ ವರ್ತನೆ ಹೇಗಿರುತ್ತದೆ ಎನ್ನುವುದು ಕೂಡಾ ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ನಮ್ಮ ಜೀವನದಲ್ಲಿ ಚಾಣಕ್ಯನ ನೀತಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.  ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪುರುಷರ ಗುಣಗಳ ಬಗ್ಗೆಯೂ ಹೇಳಿದ್ದಾರೆ. ಪುರುಷರು ಒಂಟೆಯ ಗುಣಗಳನ್ನು ಅಳವಡಿಸಿಕೊಂಡರೆ, ತಮ್ಮ ಸಂಗಾತಿಯೊಂದಿಗೆ ಸಂತುಷ್ಟ ಜೀವನ ನಡೆಸಬಹುದು ಎಂದು ಹೇಳಿದ್ದಾರೆ. 


ಇದನ್ನೂ ಓದಿ : Naga Chaturthi 2024: ನಾಗ ಚತುರ್ಥಿಯ ಪೂಜಾ ವಿಧಾನ, ಮಂಗಳಕರ ಸಮಯ ಮತ್ತು ಮಹತ್ವವನ್ನು ತಿಳಿಯಿರಿ
  
ಚಾಣಾಕ್ಯರು ಹೇಳಿದ ಗುಣ ಲಕ್ಷಣಗಳು :    
ಸಂತುಷ್ಟಿ :ಒಂಟೆ ತನಗೆ ಎಷ್ಟು ಆಹಾರ ಸಿಗುತ್ತದೆ ಅಷ್ಟರಲ್ಲಿಯೇ ಸಂತುಷ್ಟಿಯನ್ನು ಬದುಕುತ್ತದೆ. ಅದೇ ರೀತಿ ಪುರುಷ ತನಗೆ ಎಷ್ಟು ಸಾಧ್ಯವೋ ಅಷ್ಟು ಪರಿಶ್ರಮ ಪಡಬೇಕು.ತನ್ನ ಪರಿಶ್ರಮಕ್ಕೆ ಸಿಕ್ಕಿದ ಫಲವನ್ನು ಸಂತುಷ್ಟಿಯಿಂದ ಅನುಭವಿಸಬೇಕು. ಇಂಥಹ ಗುಣ ಇರುವ ಪುರುಷ ಬೇಗ ಯಶಸ್ಸು ಹೊಂದುತ್ತಾನೆ. 
  
ಎಚ್ಚರಿಕೆ ಅಗತ್ಯ :ಒಂಟೆ ಗಾಢ ನಿದ್ರೆಯಲ್ಲಿಯೂ ಎಚ್ಚರಿಕೆಯಿಂದ ಇರುತ್ತದೆ, ಹಾಗೆಯೇ ಪುರುಷ ಕೂಡಾ ತನ್ನ ಕುಟುಂಬ,ಪತ್ನಿ ಹಾಗೂ ಕರ್ತವ್ಯದ ಪ್ರತಿ ಎಚ್ಚರಿಕೆಯಿಂದ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ.ಇಂತಹ ಗುಣ ಇರುವ ಪುರುಷನ ಪತ್ನಿ ಯಾವಾಗಲೂ ಸಂತೋಷದಿಂದ ಇರುತ್ತಾಳೆ. 


ಇದನ್ನೂ ಓದಿ :   ೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಜೀವನದಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ !2025ರವರೆಗೆ ಶನಿ ಮಹಾತ್ಮನೇ ಕರುಣಿಸುವನು ರಾಜ ವೈಭೋಗ
  
ಪ್ರಾಮಾಣಿಕ :ಒಂಟೆಯ ಪ್ರಾಮಾಣಿಕತೆಯ ಮೇಲೆ ಸಂಶಯ ಪಡಲೇಬಾರದು ಎನ್ನುವ ಮಾತಿದೆ. ಅದೇ ರೀತಿ ಪುರುಷ ತನ್ನ ಪತ್ನಿ ಹಾಗೂ ಕಾರ್ಯಗಳ ಪ್ರತಿ ಪ್ರಾಮಾಣಿಕರಾಗಿರಬೇಕು.ಪರಸ್ತ್ರೀಯನ್ನು ಎಂದಿಗೂ ಕೆಟ್ಟ ದೃಷ್ಟಿಯಿಂದ ನೋಡಬಾರದು. ಪರ ಸ್ತ್ರೀ ಮೇಲೆ ಮೋಹ ಇಟ್ಟುಕೊಳ್ಳುವ ಹೆಣ್ಣಿನ ಜೊತೆ ಯಾವ ಹೆಣ್ಣೂ ಸುಖವಾಗಿ ಇರಲು ಸಾಧ್ಯವಿಲ್ಲ. 
  
ಶೌರ್ಯ :
ಒಂಟೆ ಸಾಕಷ್ಟು ಶೌರ್ಯ ಹೊಂದಿರುವ ಪ್ರಾಣಿ. ಅದು ತನ್ನ ಮಾಲೀಕನ ರಕ್ಷಣೆಗೆ ಸದಾ ಸಿದ್ಧವಾಗಿ ನಿಲ್ಲುತ್ತದೆ.ಹಾಗೆಯೇ ಪುರುಷ ಕೂಡಾ ತನ್ನ ಪತ್ನಿ ಹಾಗೂ ಕುಟುಂಬದ ರಕ್ಷಣೆಗೆ ತನ್ನ ಜೀವವನ್ನೇ ಪಣಕ್ಕಿಡಲು ಹಿಂಜರಿಯಬಾರದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.