Adhik Shravan 2023: ವೈದಿಕ ಪಂಚಾಂಗ ಹಾಗೂ ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವ ಕಲಿಪ್ಸಲಾಗಿದೆ. ಏಕೆಂದರೆ ಈ ತಿಂಗಳಿನಲ್ಲಿ ಯಾರೊಬ್ಬರು ಅತ್ಯಂತ ಶುದ್ಧ ಅಂತಃಕರಣ ಮತ್ತು ಭಕ್ತಿ ಭಾವದಿಂದ ದೇವಾದಿದೇವ ಮಹಾದೇವನಿಗೆ ಪೂಜೆ ಸಲ್ಲಿಸುತ್ತಾರೋ, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಉತ್ತರ ಭಾರತದಲ್ಲಿ ಜುಲೈ 4 ರಿಂದ ಅಧಿಕ ಶ್ರಾವಣ ಮಾಸ ಆರಂಭಗೊಂಡಿದೆ. ಇದು ಉತ್ತರ ಭಾರತದಲ್ಲಿ ಆಗಸ್ಟ್ 31, 2023 ರವರೆಗೆ ಇರಲಿದೆ. ದಕ್ಷಿಣ ಭಾರತದ ಪಂಚಾಂಗದ ಪ್ರಕಾರ ಅಧಿಕ ಶ್ರಾವಣ ಮಾಸ ಜುಲೈ 18, 2023 ರಿಂದ ಆರಂಭವಾಗಲಿದ್ದು. ಸೆಪ್ಟೆಂಬರ್ 15, 2023ರವರೆಗೆ ಇರಲಿದೆ. ಈ ಬಾರಿ ಅಧಿಕ ಮಾಸ ಇರುವ ಕಾರಣ ಶ್ರಾವಣ ಮಾಸದ ಅವಧಿ ಒಂದು ತಿಂಗಳು ಹೆಚ್ಚಾಗಿದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನ ವಿಶೇಷ ಕೃಪೆ ಭಕ್ತಾದಿಗಳ ಮೇಲಿರಲಿದೆ. ಇನ್ನೊಂದೆಡೆ ಪಂಚಾಂಗದ ಪ್ರಕಾರ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ದೇವ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ಶ್ರಾವಣ ಮಾಸ 4 ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

COMMERCIAL BREAK
SCROLL TO CONTINUE READING

ಸಿಂಹ ರಾಶಿ- ಎರಡು ತಿಂಗಳ ಶ್ರಾವಣ ಮಾಸದ ಅವಧಿ ಸಿಂಹ ರಾಶಿಯ ಜಾತಕದವರ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಈ ಅವಧಿ ನೌಕರವರ್ಗದ ಜನರಿಗೆ ಪದೋನ್ನತಿ ದಯಪಾಲಿಸುವ ಸಾಧ್ಯತೆ ಇದೆ. ನಿಮ್ಮ ಹಲವು ಇಷ್ಟಾರ್ಥಗಳು ಈ ಅವಧಿಯಲ್ಲಿ ನೆರವೇರುವ ಸಾಧ್ಯತೆ ಇದೆ. ಸುಖ ಸಾಧನಗಳಲ್ಲಿ ವೃದ್ಧಿ, ಹೊಸ ಕಾರ್ಯಗಳ ಆರಂಭ, ಆದಾಯ ವೃದ್ದಿಯ ಯೋಗ ಮತ್ತು ವೈವಾಹಿಕ ಜೀವನದಲ್ಲಿ ಅಪಾರ ಸುಖ-ಸಂತೋಷ ನಿಮ್ಮದಾಗಲಿದೆ.

ಮಿಥುನ ರಾಶಿ- ನಿಮ್ಮ ಪಾಳಿಗೂ ಕೂಡ ಶ್ರಾವಣ ಮಾಸದ ಅವಧಿ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಅಪಾರ ಸುಖ ಹರಿದುಬರಲಿದ್ದು, ಸಂತಾನ ಸುಖ ಪ್ರಾಪ್ತಿಯ ಎಲ್ಲಾ ಸಾಧ್ಯತೆಗಳಿವೆ. ಆಸೆ ಆಕಾಂಕ್ಷೆಗಳು ಈಡೇರಲಿವೆ, ಹೊಸ ಕೆಲಸಗಳು ಆರಂಭಗೊಳ್ಳಲಿವೆ ಮತ್ತು ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರಲಿದೆ.

ವೃಶ್ಚಿಕ ರಾಶಿ- ಶ್ರಾವಣ ಮಾಸದ ಈ ಎರಡು ತಿಂಗಳ ಅವಧಿ ವೃಶ್ಚಿಕ ರಾಶಿಯ ಜನರ ಪಾಲಿಗೆ ಒಂದು ವರದಾನ ಎಂಬಂತೆ ಸಾಬೀತಾಗಲಿದೆ. ಏಕೆಂದರೆ, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆಯಾಗಲಿದ್ದು, ಆರೋಗ್ಯ ಭಾಗ್ಯ ನಿಮ್ಮದಾಗಲಿದೆ. ರೋಗ-ವ್ಯಾಧಿಗಳಿಂದ ನಿಮಗೆ ಮುಕ್ತಿ ಸಿಗಲಿದೆ. ನೌಕರಿ ಬದಲಾವಣೆ ಕುರಿತು ಆಲೋಚಿಸುತ್ತಿರುವ ಜನರು ನೌಕರಿಯನ್ನು ಬದಲಾಯಿಸಬಹುದು. ಇನ್ನೊಂದೆಡೆ ನೌಕರವರ್ಗದ ಜನರಿಗೆ ಬಡ್ತಿ ಹಾಗೂ ವೇತನ ಬಡ್ತಿಯ ಎಲ್ಲಾ ಸಾಧ್ಯತೆಗಳಿವೆ. 

ಇದನ್ನೂ ಓದಿ-Rajyog In Simha Rashi: ಆದಿತ್ಯನ ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ' ಈ ರಾಶಿಗಳ ಜನರಿಗೆ ಸಿಗಲಿದೆ ಅಪಾರ ಧನಸಂಪತ್ತು!

ಮೇಷ ರಾಶಿ- ಶ್ರಾವಣ ಮಾಸದ ಈ ಎರಡು ತಿಂಗಳ ಅವಧಿ ಮತ್ತು ನಿರ್ಮಾಣ ಗೊಳ್ಳುತ್ತಿರುವ ಶುಭ ಕಾಕತಾಳೀಯ ಮೇಷ ರಾಶಿಯ ಜಾತಕದವರಿಗೆ ಅತ್ಯದ್ಭುತ ಸಾಬೀತಾಗಲಿದೆ. ಕೆಲಸ-ವ್ಯಾಪಾರದಲ್ಲಿ ಉನ್ನತಿ ನಿಮ್ಮದಾಗಲಿದೆ. ಘನತೆ, ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಸುಖ ಸಾಧನಗಳಲ್ಲಿ ಹೆಚ್ಚಳವಾಗಲಿದ್ದು, ಅವಿವಾಹಿತರಿಗೆ ವಿವಾಹ ಯೋಗ ರೂಪುಗೊಳ್ಳುತ್ತಲಿದೆ. ನಿಂತುಹೋಗಿರುವ ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. 

ಇದನ್ನೂ ಓದಿ-Shubh Yoga: ದೇವಗುರು ಬೃಹಸ್ಪತಿ ಹಾಗೂ ಸೇನಾಪತಿ ಮಂಗಳನ ಕೃಪೆಯಿಂದ ನವಪಂಚಮ ಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.