Budh Vakri 2023: ಶೀಘ್ರದಲ್ಲಿಯೇ ಅಸ್ತ ಭಾವದಲ್ಲಿ ಬುಧನ ವಕ್ರ ನಡೆ ಆರಂಭ, 3 ರಾಶಿಗಳ ಜನರ ವೃತ್ತಿ-ವ್ಯಾಪಾರದಲ್ಲಿ ಅಪಾರ ಹೊಳಪು!

Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಸಿಂಹರಾಶಿಯಲ್ಲಿ ಅಸ್ತ ಭಾವದ ಬುಧ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಬುಧನ ಈ ಹಿಮ್ಮುಖ ಚಲನೆಯಿಂದ ಒಟ್ಟು ಮೂರು ರಾಶಿಗಳ ಜನರ ವೃತ್ತಿಜೀವನ ಮತ್ತು ವ್ಯಾಪಾರದಲ್ಲಿ ಅಪಾರ ಹೊಳಪು ಕಂಡುಬರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,   

Written by - Nitin Tabib | Last Updated : Jul 5, 2023, 03:05 PM IST
  • ಪ್ರಸ್ತುತ ವ್ಯಾಪಾರ ಮತ್ತು ಬುದ್ಧಿಯ ಕಾರಕ ಗ್ರಹ ಎಂದೇ ಕರೆಯಲಾಗುವ ಗ್ರಹಗಳ ರಾಜಕುಮಾರ ಬುಧ ಸಿಂಹ ರಾಶಿಯಲ್ಲಿ ಅಸ್ತನಾಗಿ
  • ತನ್ನ ವಕ್ರ ನಡೆ (Budh Vakri 2023) ಅಂದರೆ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ.
  • ಬುಧನ ಈ ನಡೆ ಬದಲಾವಣೆಉ ಒಟ್ಟು 3 ರಾಶಿಗಳ (Zodiac Signs) ಜಾತಕದವರಿಗೆ ವ್ಯಾಪಾರ ಹಾಗೂ
  • ವೃತ್ತಿ ಜೀವನದಲ್ಲಿ ಅಪಾರ ಯಶಸ್ಸನ್ನು ದಯಪಾಲಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ,
Budh Vakri 2023: ಶೀಘ್ರದಲ್ಲಿಯೇ ಅಸ್ತ ಭಾವದಲ್ಲಿ ಬುಧನ ವಕ್ರ ನಡೆ ಆರಂಭ, 3 ರಾಶಿಗಳ ಜನರ ವೃತ್ತಿ-ವ್ಯಾಪಾರದಲ್ಲಿ ಅಪಾರ ಹೊಳಪು! title=

Mercury Retrograde 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುತ್ತವೆ ಮತ್ತು ಕೆಲವೊಮ್ಮೆ ಹಿಮ್ಮುಖ ಚಲನೆಯನ್ನು ಕೂಡ ಆರಂಭಿಸುತ್ತವೆ. ಗ್ರಹಗಳ ಈ ನಡೆಯ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಈ ಪ್ರಭಾವ ಕೆಲ ರಾಶಿಗಳ ಪಾಲಿಗೆ ಸಕಾರ್ರಾತ್ಮಕವಾಗಿದ್ದಾರೆ ಕೆಲ ರಾಶಿಗಳ ಪಾಲಿಗೆ ನಕಾರಾತ್ಮಕ ಸಾಬೀತಾಗುತ್ತದೆ. ಪ್ರಸ್ತುತ ವ್ಯಾಪಾರ ಮತ್ತು ಬುದ್ಧಿಯ ಕಾರಕ ಗ್ರಹ ಎಂದೇ ಕರೆಯಲಾಗುವ ಗ್ರಹಗಳ ರಾಜಕುಮಾರ ಬುಧ ಸಿಂಹ ರಾಶಿಯಲ್ಲಿ ಅಸ್ತನಾಗಿ ತನ್ನ ವಕ್ರ ನಡೆ (Budh Vakri 2023) ಅಂದರೆ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಬುಧನ ಈ ನಡೆ ಬದಲಾವಣೆಉ ಒಟ್ಟು 3 ರಾಶಿಗಳ (Zodiac Signs) ಜಾತಕದವರಿಗೆ ವ್ಯಾಪಾರ ಹಾಗೂ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸನ್ನು ದಯಪಾಲಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ, 

ಮಿಥುನ ರಾಶಿ- ಸಿಂಹ ರಾಶಿಯಲ್ಲಿ ಅಸ್ತ ಭಾವದಲ್ಲಿರುವ ಬುಧನ ವಕ್ರ ನಡೆ (Mercury Retrograde) ಮಿಥುನ ರಾಶಿಯ ಜಾತಕದವರ ಪಾಲಿಗೆ ಅಪಾರ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ, ಬುಧ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಈ ಹಿಮ್ಮುಖ ಚಲನೆಯನ್ನು ಆರಂಬಿಸಲಿದೆ. ಇದರಿಂದ ನಿಮ್ಮ ಸಾಹಸ ಹಾಗೂ ಪರಾಕ್ರಮ ಹೆಚ್ಚಾಗಲಿದೆ. ಜೊತೆಗೆ ಶತ್ರುಗಳ ಮೇಲೆ ನೀವು ಜಯ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ವಿದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ ಜನರಿಗೆ ಈ ಸಮಯ ಅದ್ಭುತವಾಗಿರಲಿದೆ. ಇನ್ನೊಂದೆಡೆ ಬುಧ ನಿಮ್ಮ ಗೋಚರ ಜಾತಕದ ಲಗ್ನ ಹಾಗೂ ಚತುರ್ಥ ಭಾವಕ್ಕೆ ಅಧಿಪತಿ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನೀವು ವಾಹನ, ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. 

ಧನು ರಾಶಿ- ಸಿಂಹ ರಾಶಿಯಲ್ಲಿ ಬುಧನ ಈ ಅಸ್ತ ಭಾವದ ವಕ್ರ ನಡೆ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ, ಬುಹ ನಿಮ್ಮ ಜಾತಕದ ನವಮ ಭಾವದಲ್ಲಿ ವಕ್ರನಾಗಲಿದ್ದಾನೆ. ಇದರಿಂದ ನಿಮ್ಮ ಭಾಗ್ಯೋದಯ ನೆರವೇರುವ ಸಾಧ್ಯತೆ ಇದೆ. ಜೊತೆಗೆ ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಮನೆ ಅಥವಾ ಕುಟುಂಬದ ಯಾವುದೇ ಒಂದು ಧಾರ್ಮಿಕ ಅಥವಾ ಮಂಗಳ ಕಾರ್ಯದಲ್ಲಿ ನೀವು ಭಾಗವಹಿಸುವ ಸಾಧ್ಯತೆ ಇದೆ.  ಬುಧ ನಿಮ್ಮ ಗೋಚರ ಜಾತಕದ ಸಪ್ತಮ ಹಾಗೂ ದಶಮ ಭಾವಕ್ಕೆ ಅಧಿಪತಿಯೂ ಕೂಡ ಹೌದು. ಹೀಗಾಗಿ ಈ ಸಮಯ ವಿವಾಹಿತರಿಗೆ ಅಂತ್ಯಂತ ಅನುಕೂಲಕರವಾಗಿರಲಿದೆ. ಕೆಲಸ ಕಾರ್ಯಗಳ ವಿಷಯದಲ್ಲಿ ಬುಧನ ವಕ್ರ ನಡೆ (Todays Horoscope) ನಿಮಗೆ ಲಾಭದಾಯಕ ಸಾಬೀತಾಗಲಿದೆ. 

ಇದನ್ನೂ ಓದಿ-Shubh Yoga: ದೇವಗುರು ಬೃಹಸ್ಪತಿ ಹಾಗೂ ಸೇನಾಪತಿ ಮಂಗಳನ ಕೃಪೆಯಿಂದ ನವಪಂಚಮ ಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಯೋಗ!

ಕುಂಭ ರಾಶಿ- ಸಿಂಹ ರಾಶಿಯಲ್ಲಿ ಅಸ್ತಭಾವದ ಬುಧನ ಹಿಮ್ಮುಖ ಚಾಲನೆ ಕುಂಭ ಜಾತಕದ ಜನರ ಪಾಲಿಗೆ ಬಂಬಾತ್ ಸಾಬೀತಾಗಲಿದೆ. ನಿಮ್ಮ ಕುಂಡಲಿಯ ಏಳನೇ ಭಾವದಲ್ಲಿ ಬುಧ ತನ್ನ ವಕ್ರ ನಡೆ ಅನುಸರಿಸುತ್ತಿದ್ದಾನೆ. ನಿಮ್ಮ ಗೋಚರ ಜಾತಕದ ಪಂಚಮ ಹಾಗೂ ಅಷ್ಟಮ ಭಾವಕ್ಕೆ ಬುಧ ಅಧಿಪತಿಯೂ ಕೂಡ ಹೌದು. ಹೀಗಾಗಿ ನಿಮ್ಮ ಬಾಳಸಂಗಾತಿ ಉನ್ನತಿ ಕೂಡ ನೆರವೇರಲಿದೆ. ಅದರಲ್ಲಿಯೂ ವಿಶೇಷವಾಗಿ ಸಂಶೋಧನೆಯಲ್ಲಿ ತೊಡಗಿದ ಜನರಿಗೆ  ಇದರಿಂದ ಬಂಪರ್ ಲಾಭ ಸಿಗಲಿದೆ. ಸಂತಾನ ಪಕ್ಷದ ಏಳಿಗೆ ಕೂಡ ನೆರವೇರಲಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ತೊಡಗಿರುವ ಈ ಸಮಯ ಒಂದು ಲೀಯ ಸಮಯ ನ್ದು ಹೇಳಿದರೆ ತಪ್ಪಾಗಲಾರದು.

ಇದನ್ನೂ ಓದಿ-Mars Sun Conjunction: ಒಂದು ವರ್ಷದ ಬಳಿಕ ಸೂರ್ಯ-ಮಂಗಳರ ಮೈತ್ರಿ, 3 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

 

Trending News