Guru Uday Effect 2023 : ಜ್ಯೋತಿಷ್ಯದ ಪ್ರಕಾರ, ಗುರು ಸಂಕ್ರಮಣದ ಪರಿಣಾಮವು ಜ್ಞಾನ, ಬೆಳವಣಿಗೆ, ಶಿಕ್ಷಣ, ಮಕ್ಕಳು, ತಂದೆ-ಮಗನ ಸಂಬಂಧ ಇತ್ಯಾದಿಗಳ ಮೇಲೆ ಗೋಚರಿಸುತ್ತದೆ. ಗುರು ಗ್ರಹದ ಸ್ಥಾನದಲ್ಲಾಗುವ ಬದಲಾವಣೆಯ ಪರಿಣಾಮ ಜಾತಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಸ್ತುತ ಅಸ್ತ ಸ್ಥಿತಿಯಲ್ಲಿರುವ ಗುರು ಏಪ್ರಿಲ್ 27 ರಂದು ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಗುರುವಿನ ಉದಯ ಕೆಲವು ರಾಶಿಯವರ ಜೀವನದ ಅದೃಷ್ಟವನ್ನು ಕೂಡಾ ಮೇಲಕೆತ್ತುತ್ತದೆ.  


COMMERCIAL BREAK
SCROLL TO CONTINUE READING

ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 27 ರಂದು ಗುರು ಗ್ರಹವು ಮೇಷ ರಾಶಿಯಲ್ಲಿಯೇ ಉದಯವಾಗಲಿದೆ. ಈ ಸಮಯದಲ್ಲಿ, ಈ ರಾಶಿಯವರ ಒಲವು ಆಧ್ಯಾತ್ಮದತ್ತ ಹೆಚ್ಚಾಗಲಿದೆ. ವಿದೇಶ ಪ್ರವಾಸದ ಭಾಗ್ಯ ಕೂಡಿ ಬರಲಿದೆ. ವೃತ್ತಿ ಜೀವನದಲ್ಲಿಯೂ ಸಾಕಷ್ಟು ಯಶಸ್ಸು ಸಿಗಲಿದೆ. ಅಷ್ಟೇ ಅಲ್ಲ, ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳದ ಅವಕಾಶಗಳಿವೆ. 


ಇದನ್ನೂ ಓದಿ : Inauspicious Sign: ಅಚಾನಕ್ ಆಗಿ ಕೈಯಿಂದ ಪಾತ್ರೆ ಬಿದ್ದರೆ ಸಂಭವಿಸಬಹುದು ಈ ದುರಂತ! ಈಗಲೇ ತಿಳಿಯಿರಿ ಅರ್ಥ


ಕಟಕ ರಾಶಿ :
ಮೇಷ ರಾಶಿಯಲ್ಲಿ ಗುರುವಿನ ಉದಯವು ಕರ್ಕಾಟಕ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಈ  ರಾಶಿಯವರು ದೊಡ್ಡ ಮಟ್ಟದ ಪ್ರಯೋಜನಗಳನ್ನು ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ಉದ್ಯೋಗಿಗಳು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ.   


ಸಿಂಹ ರಾಶಿ :
ಈ ರಾಶಿಯವರು ವ್ಯಾಪಾರದಲ್ಲಿ ಅಸಾಧಾರಣ ಲಾಭ  ಗಳಿಸುವುದು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಉದ್ಯೋಗಸ್ಥರಿಗೆ ಹಲವು ರೀತಿಯ ಲಾಭಗಳ ಸೂಚನೆಗಳು ಸಿಗುತ್ತವೆ. ವರ್ಗಾವಣೆ ಅಥವಾ ಉದ್ಯೋಗ ಬದಲಾವಣೆಯಾಗುವ ಸಾಧ್ಯತೆಯೂ ಇದೆ.


ತುಲಾ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯ ಜನರು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಪಾರ್ಟನರ್ ಶಿಪ್ ನಲ್ಲಿ ಕೆಲಸ ಮಾಡುವವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ವ್ಯಾಪಾರಸ್ಥರು ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.


ಇದನ್ನೂ ಓದಿ : Astro Tips: ಮಲಗುವ ಮುನ್ನ ಈ ತರಕಾರಿಗಳನ್ನು ಹೀಗೆ ಬಳಸಿದರೆ ವಜ್ರದಂತೆ ಹೊಳೆಯುವುದು ಅದೃಷ್ಟ!


ಮಕರ ರಾಶಿ : 
ಗುರುವಿನ ಉದಯ ಮಕರ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಹೊಸ ಮನೆಗೆ ಶಿಫ್ಟ್ ಆಗಬಹುದು. ಈ ಸಮಯದಲ್ಲಿ ಹಣ ಸಂಪಾದಿಸುವುದು ಸುಲಭವಾಗುತ್ತದೆ. ಆಸ್ತಿಯಲ್ಲಿಯೂ ಹೂಡಿಕೆ ಮಾಡಬಹುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು.


ಮೀನ ರಾಶಿ :
ಮೇಷ ರಾಶಿಯಲ್ಲಿ ಗುರು ಗ್ರಹವು ಉದಯಿಸುವುದರಿಂದ ಮೀನ ರಾಶಿಯವರಿಗೆ ಶುಭಫಲಗಳು ದೊರೆಯುತ್ತವೆ. ಈ ಸಮಯದಲ್ಲಿ, ಈ ರಾಶಿಯವರು ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.  ಆರ್ಥಿಕ ಲಾಭವಾಗುವ ಸಾಧ್ಯತೆ ಹೆಚ್ಚು.  


(ಸೂಚನೆ: ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.