ಯುಗಾದಿ ನಂತರ ವರ್ಷ ಪೂರ್ತಿ ಈ ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ
ಹಿಂದೂ ಪಂಚಾಂಗದ ಪ್ರಕಾರ, ಹಿಂದೂ ಹೊಸ ವರ್ಷ ಏಪ್ರಿಲ್ 22, 2023 ರಿಂದ ಪ್ರಾರಂಭವಾಗುತ್ತಿದೆ. ಈ ವರ್ಷದ ಮಹತ್ವ ಇನ್ನಷ್ಟು ಹೆಚ್ಚಿದೆ. ಮೂರು ರಾಶಿಯವರಿಗೆ ಹಿಂದೂ ಹೊಸ ವರ್ಷವು ವಿಶೇಷವಾಗಿ ಫಲಪ್ರದವಾಗಿರಲಿದೆ.
ಬೆಂಗಳೂರು : ಹಿಂದೂ ಪಂಚಾಂಗದ ಪ್ರಕಾರ, ಹಿಂದೂ ಹೊಸ ವರ್ಷ ಏಪ್ರಿಲ್ 22, 2023 ರಿಂದ ಪ್ರಾರಂಭವಾಗುತ್ತಿದೆ. ಜ್ಯೋತಿಷ್ಯದ ಪ್ರಕಾರ ಪ್ರತಿ ವರ್ಷಕ್ಕೂ ಒಂದು ರಾಜ ಗ್ರಹ ಮತ್ತೊಂದು ಮಂತ್ರಿ ಗ್ರಹ ಎಂದಿರುತ್ತದೆ. ಆ ಪ್ರಕಾರ ಹೊಸ ವರ್ಷದ ರಾಜ ಬುಧ ಮತ್ತು ಮಂತ್ರಿ ಶುಕ್ರನಾಗಿರಲಿದ್ದಾನೆ. ಅಲ್ಲದೆ, ವಿಕ್ರಮ್ ಸಂವತ್ 2080 ಹಲವು ಅಪರೂಪದ ಯೋಗಳೊಂದಿಗೆ ಪ್ರಾರಂಭವಾಗಲಿದೆ. ಈ ವರ್ಷ 30 ವರ್ಷಗಳ ನಂತರ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಗುರು 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇಂಥಹ ಪರಿಸ್ಥಿತಿಯಲ್ಲಿ ಈ ವರ್ಷದ ಮಹತ್ವ ಇನ್ನಷ್ಟು ಹೆಚ್ಚಿದೆ. ಮೂರು ರಾಶಿಯವರಿಗೆ ಹಿಂದೂ ಹೊಸ ವರ್ಷವು ವಿಶೇಷವಾಗಿ ಫಲಪ್ರದವಾಗಿರಲಿದೆ.
ಮೇಷ ರಾಶಿ :
ಹೊಸ ವರ್ಷದಲ್ಲಿ, ಮೇಷ ರಾಶಿಯವರು ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಬಹುಕಾಲದಿಂದ ಪೂರ್ಣವಾಗದೆ ಉಳಿದಿದ್ದ ಕೆಲಸ ವೇಗ ಪಡೆದುಕೊಳ್ಳಲಿದೆ. ಈ ಅವಧಿಯಲ್ಲಿ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ವ್ಯಾಪಾರಸ್ಥರ ಆದಾಯ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ತಲೆದೋರುವ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ವೃತ್ತಿಜೀವನದಲ್ಲಿ ಯಶಸ್ಸು ಕಂಡು ಬರಲಿದೆ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಪಡೆಯಲಿದ್ದೀರಿ.
ಇದನ್ನೂ ಓದಿ : ಚೈತ್ರ ಮಾಸದಲ್ಲಿ ಎರಡೂ ಕೈಗಳಿಂದ ಸಾಕಷ್ಟು ಹಣ ಬಾಚಿಕೊಳ್ಳಲ್ಲಿದ್ದಾರೆ ಈ 4 ರಾಶಿಗಳ ಜನರು! ಕಾರಣ ಇಲ್ಲಿದೆ
ಮಿಥುನ ರಾಶಿ :
ಹಿಂದೂ ಹೊಸ ವರ್ಷವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿ ದೆ. ಈ ಅವಧಿಯಲ್ಲಿ, ಹಳೆಯ ಹೂಡಿಕೆಗಳಿಂದ ಲಾಭ ಪಡೆಯಬಹುದು. ಆದಾಯದಲ್ಲಿ ಹೆಚ್ಚಳವಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಆಯೋಜನೇ ಮಾಡಬಹುದು. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ, ಅದರಲ್ಲಿ ಯಶಸ್ವಿಯಾಗುವಿರಿ.
ಕಟಕ ರಾಶಿ :
ಈ ರಾಶಿಯವರಿಗೆ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಅಷ್ಟೇ ಅಲ್ಲ ಉನ್ನತ ಸ್ಥಾನವೂ ಸಿಗಲಿದೆ. ಸಂಬಂಧಗಳಲ್ಲಿ ಸುಧಾರಣೆ ಕಂಡುಬರುವುದು. ಕುಟುಂಬದ ಸಲಹೆಯನ್ನು ಪಡೆದ ನಂತರವೇ ವ್ಯಾಪಾರ ವ್ಯವಹಾರಗಳಿಗೆ ಕೈ ಹಾಕಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯ ಸುಧಾರಿಸಲಿದೆ.
ಇದನ್ನೂ ಓದಿ : Mars transit 2023 : ಈ ನಾಲ್ಕು ರಾಶಿಯವರಿಗೆ 69 ದಿನಗಳ ಕಾಲ ಹಣದ ಮಳೆ ಸುರಿಯುತ್ತದೆ..!
ತುಲಾ ರಾಶಿ :
ವಿಕ್ರಮ್ ಸಂವತ್ 2080 ತುಲಾ ರಾಶಿಯವರಿಗೆ ಅನುಕೂಲಕರವಾಗಲಿದೆ. ಈ ಸಮಯದಲ್ಲಿ ಶನಿಯ ಪ್ರಭಾವವು ಕೊನೆಗೊಳ್ಳುತ್ತದೆ. ದೇವಗುರುವಿನ ಆಶೀರ್ವಾದವೂ ಸಿಗಲಿದೆ. ದಾಂಪತ್ಯದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಕೋರ್ಟ್ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.