Mauni Amavasya 2024: ಹಿಂದೂ ಧರ್ಮದಲ್ಲಿ ಮಾಘಿ ಅಮಾವಾಸ್ಯೆಗೆ ಬಹಳ ವಿಶೇಷತೆ ಇದೆ. ಇದನ್ನು ಮೌನಿ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ. ಮೌನಿ ಅಮಾವಾಸ್ಯೆಯ ದಿನ ಭಗವಾನ್ ಶಿವ ಮತ್ತು ವಿಷ್ಣುವನ್ನು ಪೂಜಿಸಲಾಗುತ್ತದೆ. ಇಂದು ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಮೌನ ವ್ರತವನ್ನು ಆಚರಿಸಿ, ಬಡವರಿಗೆ ದಾನ ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯಿದೆ. 


COMMERCIAL BREAK
SCROLL TO CONTINUE READING

ಈ ವರ್ಷ ಇಂದು ಎಂದರೆ 09 ಫೆಬ್ರವರಿ 2024ರ ಶುಕ್ರವಾರದ ದಿನ ಮೌನಿ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಶುಭಕರ ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದೆ. ಸರ್ವಾರ್ಥ ಸಿದ್ಧಿ ಯೋಗದಲ್ಲಿ ಕೆಲವು ಮಾಡುವ ಕೆಲವು ಕೆಲಸಗಳು ಭಾರೀ ಲಾಭವನ್ನು ತರಲಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಮೌನಿ ಅಮಾವಾಸ್ಯೆಯಂದು ರೂಪುಗೊಳ್ಳುತ್ತಿರುವ ಈ ಸರ್ವಾರ್ಥ ಸಿದ್ಧಿ ಯೋಗವು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿವೆ ಎಂದು ಹೇಳಲಾಗುತ್ತಿದೆ. ಆ ದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಮೌನಿ ಅಮಾವಾಸ್ಯೆಯಂದು ಸರ್ವಾರ್ಥ ಸಿದ್ಧಿ ಯೋಗ: ಈ ರಾಶಿಯವರಿಗೆ ಭಾರೀ ಅದೃಷ್ಟ: 
ಸಿಂಹ ರಾಶಿ: 

ಮೌನಿ ಅಮಾವಾಸ್ಯೆಯಂದು ರೂಪುಗೊಳ್ಳುತ್ತಿರುವ ಈ ಸರ್ವಾರ್ಥ ಸಿದ್ಧಿ ಯೋಗವು ಸಿಂಹ ರಾಶಿಯವರಿಗೆ ಫಲಪ್ರದವಾಗಿದೆ. ಈ ಸಮಯದಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು ಮಾನಸಿಕ ಒತ್ತಡಗಳಿಂದ ಮುಕ್ತಿ ನೀಡಲಿದೆ. 


ಇದನ್ನೂ ಓದಿ- Valentine Week 2024: ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಈ ವಸ್ತುಗಳನ್ನು ನಿಡುವುದರಿಂದ ಸಂಬಂಧದಲ್ಲಿ ಬಿರುಕು ಸಾಧ್ಯತೆ!


ತುಲಾ ರಾಶಿ: 
ಮೌನಿ ಅಮಾವಾಸ್ಯೆಯಂದು ನಿರ್ಮಾಣವಾಗಲಿರುವ ಸರ್ವಾರ್ಥ ಸಿದ್ಧಿ ಯೋಗವು ತುಲಾ ರಾಶಿಯವರ ಜೀವನದಲ್ಲೂ ಧನಾತ್ಮಕ ಫಲಗಳನ್ನು ತರಲಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಅಂತಹವರಿಗೆ ಸಮಯ ಅತ್ಯುತ್ತಮವಾಗಿದೆ.  ಆದಾಯದ ಹೊಸ ಮೂಲಗಳು ಸೃಷ್ಟಿಯಾಗುವುದರಿಂದ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. 


ಮಕರ ರಾಶಿ: 
ಈ ವರ್ಷದ ಮೌನಿ ಅಮಾವಾಸ್ಯೆ ಸರ್ವಾರ್ಥ ಸಿದ್ಧಿ ಯೋಗವು ಮಕರ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಮಂಗಳಕರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದ್ದು ಮನಸ್ಸಿಗೆ ನೆಮ್ಮದಿಯನ್ನು ನೀಡಲಿದೆ. ಧನಲಾಭದ ಪ್ರಬಲ ಅವಕಾಶಗಳಿವೆ. 


ಇದನ್ನೂ ಓದಿ- 12 ವರ್ಷಗಳ ನಂತರ ರಾಜ ಯೋಗ !ರಾಜರಂತೆ ಜೀವನ ನಡೆಸುವರು ನಾಲ್ಕು ರಾಶಿಯವರು!ಪ್ರತಿ ಹೆಜ್ಜೆಯಲ್ಲಿಯೂ ವಿಜಯ ಮಾಲೆ


ಕುಂಭ ರಾಶಿ: 
ಮೌನಿ ಅಮಾವಾಸ್ಯೆಯಲ್ಲಿ ರೂಪುಗೊಳ್ಳಲಿರುವ ಸರ್ವಾರ್ಥ ಸಿದ್ಧಿ ಯೋಗವು ಕುಂಭ ರಾಶಿಯವರ್ ಅಜೀವಂದಲ್ಲಿ ಭಾರೀ ಅದೃಷ್ಟದ ಸಾಮ್ಯ ಎಂತಲೇ ಹೇಳಬಹುದು. ಈ ವೇಳೆ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಇದರಿಂದಾಗಿ ಹಿಡಿದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಹಣದ ಹರಿವು ಹೆಚ್ಚಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.