Broom Vastu Tips: ಪೊರಕೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುತ್ತದೆ. ತಾಯಿ ಲಕ್ಷ್ಮಿದೇವಿಯು ಪೊರಕೆಯಲ್ಲಿ ವಾಸಿಸುತ್ತಾಳೆಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಶುಕ್ರವಾರ & ಗುರುವಾರ ಲಕ್ಷ್ಮಿದೇವಿಯ ಆರಾಧನೆಯ ದಿನಗಳಾಗಿದ್ದು, ಆ ದಿನ ಹಳೆಯ ಪೊರಕೆಯನ್ನು ಎಸೆಯಬಾರದು. ಧರ್ಮಗ್ರಂಥಗಳ ಪ್ರಕಾರ ಹಳೆಯ ಪೊರಕೆಯನ್ನು ಸುಟ್ಟರೆ ಮನೆಯಲ್ಲಿ ಬಡತನ ನೆಲೆಸುತ್ತದೆಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಪೊರಕೆ ಖರೀದಿಯ ಬಗ್ಗೆಯೂ ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಯಾವಾಗ ಪೊರಕೆ ಖರೀದಿ ಮಾಡಬೇಕು? ಅದನ್ನು ಎಲ್ಲಿ ಇಡಬೇಕು? ಅನ್ನೋದರ ಬಗ್ಗೆ ನೀವು ತಿಳಿದುಕೊಳ್ಳಬೇಕು. ಪೊರಕೆಯ ನಿಯಮಗಳನ್ನು ನೀವು ವಾಸ್ತು ಪ್ರಕಾರ ಪಾಲಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. 


ಇದನ್ನೂ ಓದಿ: Chanakya Niti : ಹೆಂಡತಿಯಲ್ಲಿ ಈ ಗುಣಗಳಿದ್ದರೆ ಪತಿ ಶ್ರೀಮಂತನಾಗುತ್ತಾನೆ...!


ಪೊರಕೆಯ ಬಗ್ಗೆ ಎಲ್ಲರಿಗೂ ಒಂದು ನಿಕೃಷ್ಟ ವಸ್ತು ಎಂಬ ಭಾವನೆಯಿರುತ್ತದೆ. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಪೊರಕೆ ವಾಸ್ತವವಾಗಿ ನಮ್ಮ ಮನೆಯಲ್ಲಿರುವ ಕಸವನ್ನು ಹೊರ ಹಾಕಿ ಮನೆಯನ್ನು ಶುದ್ಧ ಮಾಡಿ ತಾಯಿ ಲಕ್ಷ್ಮೀದೇವಿಯನ್ನು ಬರಮಾಡಿಕೊಳ್ಳಲು ಸಹಾಯ ಮಾಡುವ ಸಾಧನವಾಗಿದೆ.


ಹೀಗಾಗಿ ಪೊರಕೆಯನ್ನು ಒಂದು ಪ್ರಶಸ್ತ ದಿನದಲ್ಲಿ ಖರೀದಿ ಮಾಡುವುದು ಮುಖ್ಯವಾಗಿದೆ. ಪೊರಕೆ ಅದೃಷ್ಟದ ಸಂಕೇತವಾಗಿದ್ದು, ಇದನ್ನು ಖರೀದಿ ಮಾಡುವುದಕ್ಕೆ ಇಂತಹ ದಿನ ಎಂಬುದಿಲ್ಲ. ಆದರೆ ಸಂಜೆ ಮೇಲೆ ಪೊರಕೆ ಖರೀದಿ ಮಾಡುವುದು ಅಷ್ಟು ಶುಭಕರವಲ್ಲ ಎನ್ನಲಾಗುತ್ತದೆ.


ಇದನ್ನೂ ಓದಿ: ಗೋರಂಟಿ ಅಲ್ಲ.. ಈ ಎಲೆಯ ಪುಡಿ ತಲೆಗೆ ಹಚ್ಚಿ, ಬಿಳಿಕೂದಲು 10 ನಿಮಿಷದಲ್ಲೇ ಗಾಢ ಕಪ್ಪಾಗುವುದು ಖಚಿತ..!


ಹೊಸದಾಗಿ ತಂದ ಪೊರಕೆಯನ್ನು ಶನಿವಾರದಿಂದ ಬಳಸಲು ಪ್ರಾರಂಭಿಸಬೇಕು. ಪೊರಕೆಯನ್ನು ಯಾವಾಗಲೂ ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಆದರೆ ಅಪ್ಪಿತಪ್ಪಿಯೂ ಅದನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಇದರಿಂದ ನಿಮ್ಮ ಸಂಪತ್ತಿಗೆ ಹಾನಿಯಾಗಬಹುದು. ಪೊರಕೆಯನ್ನು ಯಾವಾಗಲೂ ವಿಶ್ರಾಂತಿ ಕೊಠಡಿಯ ಮೂಲೆಯಲ್ಲಿ ಯಾರಿಗೂ ಕಾಣದಂತೆ ಇಡಬೇಕು. ಇದರಿಂದ ನಿಮಗೆ ಮತ್ತು ನಿಮ್ಮ ಮನೆಗೆ ಒಳಿತಾಗುತ್ತದೆ ಎಂದು ಹೇಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.