Goddess Lakshmi Devi: ಶುಕ್ರವಾರ ತಾಯಿ ಲಕ್ಷ್ಮೀದೇವಿಯ ವಾರವೆಂದೇ ಪರಿಗಣಿಸಲಾಗಿದೆ. ಈ ದಿನವನ್ನು ಶುಭ ಕೆಲಸಗಳಿಗೆ ಯೋಗ್ಯವೆಂದು ನಂಬಲಾಗಿದೆ. ಆದರೆ ಕೆಲವೊಂದು ವಸ್ತುಗಳನ್ನು ಈ ದಿನ ಖರೀದಿಸಿ ಮನೆಗೆ ತಂದರೆ ದಾರಿದ್ರ್ಯ ಬರುತ್ತದೆ ಎಂದು ಹೇಳಲಾಗಿದೆ. ಇಂತಹ ವಸ್ತುಗಳು ಯಾವುವು ಅಂತಾ ತಿಳಿದುಕೊಳ್ಳಿರಿ.


COMMERCIAL BREAK
SCROLL TO CONTINUE READING

ಪೂಜಾ ಸಾಮಗ್ರಿಗಳು: ಪೂಜಾ ಸಾಮಗ್ರಿಗಳು ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬಾರದು. ಹೀಗೆ ಮಾಡಿದರೆ ನಿಮಗೆ ದಾರಿದ್ರ್ಯ ಬರಬಹುದು.


ಇದನ್ನೂ ಓದಿ: ಮನೆಯಂಗಳದಲ್ಲಿ ಈ ಹೂವಿನ ಗಿಡ ಅಪ್ಪಿತಪ್ಪಿಯೂ ಬೆಳೆಸಬೇಡಿ… ಹಾವುಗಳು ಬರುತ್ತೆ!


ಅಡುಗೆ ಪಾತ್ರೆಗಳು: ಶುಕ್ರವಾರ ಅಡುಗೆ ಮನೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಮನೆಗೆ ತಂದರೆ ತಾಯಿ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಧಾನ್ಯ ನಷ್ಟವಾಗುವ ಭೀತಿಯಿರುತ್ತದೆ. ಹೀಗಾಗಿ ಈ ದಿನ ಅಡುಗೆ ಮನೆಯ ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿ ಮಾಡಬೇಡಿ.


ಆಸ್ತಿ & ವಾಹನ ಖರೀದಿಗೆ ಸೂಕ್ತವಲ್ಲ: ಶುಕ್ರವಾರ ಹುಳಿ ಪದಾರ್ಥಗಳು, ಇಲೆಕ್ಟ್ರಾನಿಕ್ ವಸ್ತುಗಳು, ಆಸ್ತಿ, ವಾಹನ ಖರೀದಿಗೂ ಸೂಕ್ತ ದಿನವಲ್ಲ. ಅಷ್ಟೇ ಏಕೆ ಶುಕ್ರವಾರ ಯಾರಾದರೂ ವಸ್ತು ಅಥವಾ ಹಣವನ್ನು ಸಾಲವಾಗಿ ಕೇಳಿದರೂ ಕೊಡಲು ಹೋಗಬೇಡಿ. ಇದರಿಂದ ನಿಮಗೆ ದಾರಿದ್ರ್ಯ ಉಂಟಾಗುವ ಅಪಾಯವಿರುತ್ತದೆ.


ಇದನ್ನೂ ಓದಿ: ಈ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕೇವಲ ರುಚಿಯಷ್ಟೇ ಹಾಳಾಗಲ್ಲ, ಆರೋಗ್ಯಕ್ಕೂ ಹಾನಿಕರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.