Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿಯ ಈ ದಿನ ಮಂಗಳವಾರ ವಿಶಾಖಾ ನಕ್ಷತ್ರ, ಬ್ರಹ್ಮಾ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ತಿಳಿಯಿರಿ.  


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ಮಾನಸಿಕ ನೋವಿನಿಂದ ಹೊರಬರಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿ. ಅನುಮಾನದಲ್ಲಿ ಜೀವಿಸುವ ಬದಲು ಮುಕ್ತವಾಗಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಕಾಯ್ದುಕೊಳ್ಳುವ ಸಮಯ. ಯಾವುದೇ ಕೆಟ್ಟ ಸನ್ನಿವೇಶದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಮನದ ನೋವನ್ನು ಹಂಚಿಕೊಳ್ಳಿ. ಯಾರೊಂದಿಗೂ ದ್ವೇಷದ ಭಾವನೆಯನ್ನು ಮುಂದುವರೆಸಬೇಡಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮೊಳಗಿನ ಉಜ್ವಲವಾದ ಬೆಳಕನ್ನು ಜಾಗೃತಗೊಳಿಸಿ, ಸಕಾರಾತ್ಮಕತೆಯತ್ತ ಮುಂದುವರೆಯಿರಿ. ನಿಮ್ಮ ಪರಿಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವು ನಿಮ್ಮ ಜೀವನದ ಗೇಮ್ ಚೇಂಜರ್ ಆಗಬಹುದು. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ನಾಯಕತ್ವದ ಗುಣಗಳಿಂದಾಗಿ ಉದ್ಯೋಗದಲ್ಲಿ ಬೇರೆಯವರನ್ನು ನಿಮ್ಮತ್ತ ಸೆಳೆಯುವಿರಿ. ನಿಮ್ಮ ಸುತ್ತಮುತ್ತಲಿನವರು ಸಹ ದೊಡ್ಡ-ದೊಡ್ಡ ಕನಸುಗಳನ್ನು ಕಾಣುವಂತೆ ಅವರನ್ನು ಪ್ರೇರೇಪಿಸುವಿರಿ. 


ಇದನ್ನೂ ಓದಿ- ಫಾಲ್ಗುಣ ನಕ್ಷತ್ರದಲ್ಲಿ ಶುಕ್ರ: ಈ ರಾಶಿಯವರಿಗೆ ಕುಬೇರ ಯೋಗದಿಂದ ತುಂಬಲಿದೆ ಖಜಾನೆ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಪ್ರೀತಿಯಲ್ಲಿರುವವರಿಗೆ ಕಠಿಣ ಸಮಯ. ನಿಮ್ಮ ಮಾಜಿ ಪ್ರೇಮಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಬದಲಿಗೆ ಶಾಂತ ಚಿತ್ತತೆಯಿಂದ ಪರಿಸ್ಥಿತಿಯಿಂದ ಹೊರಬರುವ ಬಗ್ಗೆ ಚಿಂತಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಗುಪ್ತ ಸತ್ಯಗಳು ಹೊರಬರುವ ಸಂಭವವಿದೆ. ಈ ಭಯದ ನೆರಳಿನಲ್ಲೇ ದಿನಗಳೆಯುವಿರಿ. ನೈಸರ್ಗಿಕ ಪ್ರಪಂಚವು ನಿಮ್ಮನ್ನು ಕೇಂದ್ರಕ್ಕೆ ಮರಳಿ ತರಲು ಅನುಮತಿಸಿ.


ತುಲಾ ರಾಶಿಯವರ ಭವಿಷ್ಯ (Libra Horoscope): 
ಆರ್ಥಿಕ ಪ್ರಗತಿಯನ್ನು ಕಾಣುವಿರಿ. ನಿಮ್ಮ ವೃತ್ತಿ ಮತ್ತು ಹಣಕಾಸಿನ ವಿಷಯಕ್ಕೆ ಬಂದಾಗ ಈ ದಿನ ಅತ್ಯುತ್ತಮ ದಿನಗಳಲ್ಲಿ ಒಂದು. ಪ್ರಮುಖ ಹೂಡಿಕೆಯ ಬಗ್ಗೆ ಮರೆಯದಿರಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಸಂಬಂಧಗಳು ಗಟ್ಟಿಯಾಗಲಿವೆ ವಿನೋದ ಮತ್ತು ಉಲ್ಲಾಸದ ಶಕ್ತಿಯು ನಿಮ್ಮನ್ನು ಸುತ್ತುವರೆದಿದೆ. ನಿಮ್ಮ ಹಿರಿಯರು ನೀಡುವ ಎಲ್ಲಾ ಆಶೀರ್ವಾದಗಳಿಗೆ ನೀವು ಅರ್ಹರು. ಇದನ್ನು ಆನಂದಿಸಿ. 


ಇದನ್ನೂ ಓದಿ- ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಕೈ ಇಟ್ಟಲೆಲ್ಲಾ ಹಣ ಉಕ್ಕುವ ಕಾಲ !ಯಶಸ್ಸು, ಕೀರ್ತಿ ಗೌರವಕ್ಕೆ ಕೊನೆಯೇ ಇಲ್ಲ 


ಧನು ರಾಶಿಯವರ ಭವಿಷ್ಯ (Sagittarius Horoscope):  
ಮಾತಿನಲ್ಲಿ ಸಂಯಮವನ್ನು ಕಾಯ್ದುಕೊಳ್ಳುವುದರಿಂದ ಪರಸ್ಪರ ಸಂಬಂಧಗಳು ಬದುಕುಳಿಯಲಿವೆ. ಆದರೆ ನೆನಪಿಡಿ, ಪ್ರತಿ ಸಂಬಂಧವು ದ್ವಿಮುಖ ರಸ್ತೆಯಾಗಿದೆ!  ಸಮಯ, ಶಕ್ತಿ ಅಥವಾ ಸಲಹೆ ಏನೇ ಇದ್ದರೂ ನೀವಂದುಕೊಂಡತೆ ಎದುರಿನವರೂ ಇರಬೇಕು ಎಂದೇನಿಲ್ಲ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಕನಸುಗಳನ್ನು ನನಸಾಗಿಸಲು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ. ಸಂಭಾಷಣೆಗಳು ನಿಮ್ಮ ಸಂಬಂಧದಲ್ಲಿ ಹೊಸ ಆಯಾಮಗಳನ್ನು ತೆರೆಯಬಹುದು. ಪ್ರಕೃತಿಯಲ್ಲಿ ದೀರ್ಘ ನಡಿಗೆ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ವೃತ್ತಿಪರ ಉದ್ಯಮದ ಮೂಲಕ ನೀವು ಪ್ರಗತಿಯನ್ನು ಕಾಣಬಹುದು. ಆತ್ಮವಿಶ್ವಾಸ ಮತ್ತು ಚತುರತೆಯೊಂದಿಗೆ ಯಾವುದೇ ಕಠಿಣ ಪರಿಸ್ಥಿತಿಯನ್ನು ಸಹ ನಿಮ್ಮತ್ತ ತಿರುಗಿಸುವ ಶಕ್ತಿ ನಿಮಗಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳು ಸಂಭವಿಸಬಹುದು. ಯಾವುದೇ ವಿಚಾರದಲ್ಲಿ ಒಂದು ಬಾಗಿಲು ಮುಚ್ಚಿತೆಂದು ಕೈಕಟ್ಟಿ ಕೂರಬೇಡಿ. ಬದಲಿಗೆ ಹೊಸ ದಾರಿಯನ್ನು ಹುಡುಕಿದರಷ್ಟೇ ನಿಮ್ಮ ಜೀವನದಲ್ಲಿ ಬೆಳಕನ್ನು ಕಾಣಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.