Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ  ಗ್ರೀಷ್ಮ ಋತು. ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿಯ ಈ ದಿನ ಬುಧವಾರ ಮಘಾ ನಕ್ಷತ್ರ, ವ್ಯತೀಪಾತ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ವ್ಯಾಪಾರಸ್ಥರಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಕುಟುಂಬದಲ್ಲಿ ಮದುವೆ ಮಾತುಕತೆಗಳಿಂದ ಮನಸ್ಸಿಗೆ ಸಂತೋಷ. ಪ್ರೇಮ ಜೀವನವೂ ಕೂಡ ಮಾಧುರ್ಯದಿಂದ ಕೂಡಿರಲಿದೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ದಿನ ಆರ್ಥಿಕ ಪರಿಸ್ಥಿತಿ ಬಲವಾಗಿರಲಿದ್ದು ಮನಸ್ಸು ಸಂತೋಷವಾಗಿರುತ್ತದೆ. ಆದಾಗ್ಯೂ, ಕೆಲಸಗಳು ಪೂರ್ಣಗೊಳ್ಳದ ಕಾರಣ ಒತ್ತಡ ಹೆಚ್ಚಾಗಬಹುದು. ನಿಮ್ಮ ಸಂಗಾತಿ ನಿಯೋಜಿಸುವ ಜವಾಬ್ದಾರಿಗಳ ಬಗ್ಗೆ ಗಮನ ಹರಿಸುವುದು ಅವಶ್ಯಕ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇಂದು ಶುಭ ಸುದ್ದಿ ಕೇಳಿಬರಲಿದೆ. ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಹೂಡಿಕೆಗೆ ಶುಭ ಸಮಯ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ವಿರುದ್ಧ ಪಿತೂರಿ ನಡೆಸುವ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದವು ಇಂದು ನಿಮ್ಮನ್ನು ತೊಂದರೆಗೊಳಿಸುತ್ತದೆ. ಆದಾಗ್ಯೂ, ನೀವು ವ್ಯಾಪಾರದಲ್ಲಿ ದೊಡ್ಡ ಅವಕಾಶವನ್ನು ಪಡೆಯಬಹುದು. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿ. 


ಇದನ್ನೂ ಓದಿ- Mangal Gochar: ಮಂಗಳನ ದಯೆಯಿಂದ ಜಾಗೃತಗೊಳ್ಳಲಿದೆ ಈ ರಾಶಿಯವರ ಮಲಗಿರುವ ಅದೃಷ್ಟ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಉದ್ಯೋಗಸ್ಥರು ಇಂದು ಕೆಲವು ಬದಲಾವಣೆಗಳನ್ನು ಕಾಣಬಹುದು. ಅರೆಕಾಲಿಕ ಕೆಲಸಗಾರರಿಗೆ ನಿಮ್ಮ ಬಹುದಿನಗಳ ಆಸೆ ಈಡೇರಲಿದೆ. ಸಮಾಜದಲ್ಲಿ ಪ್ರೀತಿ, ಗೌರವ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇದು ಮಿಶ್ರ ಫಲಗಳಿಂದ ಕೂಡಿದ ದಿನ. ವ್ಯಾಪಾರ-ವ್ಯವಹಾರದಲ್ಲಿ ಪಿತೃ ಸಮಾನರೊಂದಿಗೆ ಚರ್ಚಿಸುವುದು ಉತ್ತಮ. ಇದರಿಂದ ಹಣಕಾಸಿನ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ಸ್ನೇಹಿತರೊಂದಿಗೆ ಪ್ರಯಾಣಿಸಲು ಬಯಸುವವರಿಗೆ ಶುಭ ಸಮಯ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಹೆಂಡತಿ-ಮಕ್ಕಳಿಗಾಗಿ ಖರ್ಚು ಹೆಚ್ಚಾಗಲಿದ್ದು ಬಜೆಟ್ ಕ್ಷೀಣಿಸಬಹುದು. ಇದರೊಂದಿಗೆ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಚಿಂತಿನೆಗೆ ಗುರಿಪಡಿಸಬಹುದು. ಆದರೆ, ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುವುದರಿಂದ ನೀವು ಸ್ವಲ್ಪ ಸಮಾಧಾನವನ್ನು ಪಡೆಯುವಿರಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಉತ್ತಮ ಚಿಂತನೆಯಿಂದ ಒಳ್ಳೆಯ ಫಲಗಳನ್ನು ಪಡೆಯುವಿರಿ. ಉದ್ಯೋಗ ಕ್ಷೇತ್ರದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರವನ್ನು ಅನುಭವಿಸುವಿರಿ.  ಬಾಕಿ ಇರುವ ಕೆಲಸಗಳು ಬೇಗ ಪೂರ್ಣಗೊಳ್ಳುವುದರಿಂದ ಮನಸ್ಸು ಸಂತಸಗೊಳ್ಳುತ್ತದೆ. 


ಇದನ್ನೂ ಓದಿ- ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ವೃತಾಚರಣೆ ಮಾಡಬಹುದೇ? ಶಾಸ್ತ್ರ ಹೇಳುವುದೇ


ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಶುಭ ಫಲಿತಾಂಶಗಳಿಂದ ಕೂಡಿದ ದಿನ. ವ್ಯಾಪಾರ ಕ್ಷೇತ್ರಗಳಲ್ಲಿ ದೊಡ್ಡ ಆರ್ಡರ್ ಪಡೆಯಬಹುದು. ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಕಲೆ ಮತ್ತು ಸಂಗೀತಕ್ಕೆ ಸಂಬಂಧಿಸಿದ ಜನರು ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವನ್ನು ಪಡೆಯಬಹುದು.


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರ ಮಾಡುವುದನ್ನು ತಪ್ಪಿಸಿ. ಇಲ್ಲವೇ ಮೋಸ ಹೋಗುವ ಸಂಭವವಿರುತ್ತದೆ. ಇಂದು ನೀವು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕೆಲಸದ ಸ್ಥಳದಲ್ಲಿ ನಿಮ್ಮ ಅಸಭ್ಯ ವರ್ತನೆಯನ್ನು ತಪ್ಪಿಸಿ ಇಲ್ಲವೇ ಭಾರೀ ದಂಡ ತೆರಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.  ನಿಮ್ಮ ಹಣಕಾಸಿನ ಪರಿಸ್ಥಿತಿಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಇಂದು ಪರಿಸ್ಥಿತಿ ಸುಧಾರಿಸಲಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಆರ್ಥಿಕ ಏರಿಳಿತದಿಂದ ಕೂಡಿದ ದಿನ ಇದಾಗಿದೆ. ಯೋಚಿಸದೆಯಾವುದೇ ವ್ಯವಹಾರವನ್ನು ಮಾಡಬೇಡಿ. ಕೆಲಸದ ಸ್ಥಳದಲ್ಲಿ ತರಾತುರಿಯಲ್ಲಿ ಮಾಡುವ ಯಾವುದೇ ಕೆಲಸವು ತಲೆನೋವಾಗಿ ಪರಿಣಮಿಸಬಹುದು. 


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.