Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಶುಕ್ರವಾರ ಆರ್ದ್ರಾ ನಕ್ಷತ್ರ, ಧ್ರುವ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರ ಭವಿಷ್ಯ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯ ಜನರು ಇಂದು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ನಿಮ್ಮ ಮನೆಯವರ ಪ್ರೀತಿ-ಆರೈಕೆಯನ್ನು ಅನುಭವಿಸುವಿರಿ. ಮಧ್ಯಾಹ್ನದ ಬಳಿಕ ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿ ಜನರಿಗೆ ಇಂದು ನಿಮ್ಮ ಪ್ರಯತ್ನಗಳಲ್ಲಿ ಉತ್ತಮ ಫಲ ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಮಕ್ಕಳ ಪ್ರೀತಿಯೇ ನಿಮ್ಮ ಬಹುದೊಡ್ಡ ಶಕ್ತಿ ಎಂಬುದನ್ನೂ ಅರಿತುಕೊಳ್ಳುವಿರಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರಿಗೆ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸವೊಂದು ಮತ್ತೆ ಆರಂಭವಾಗಬಹುದು. ಆದಾಯದ ಹೊಸ ಮೂಲಗಳು ಹೆಚ್ಚಾಗಲಿವೆ. ಆಧ್ಯಾತ್ಮ ವಿಚಾರಗಳಿಗಾಗಿ ಖರ್ಚು ಮಾಡಬಹುದು. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರಿಗೆ ಇಂದು ವೃತ್ತಿ-ವ್ಯವಹಾರದಲ್ಲಿ ಯಶಸ್ಸು, ಕೀರ್ತಿ ದೊರೆಯಲಿದೆ. ನಿಮ್ಮ ಜೀವನದಲ್ಲಿ ಪ್ರೀತಿಯ ಪ್ರವೇಶವಾಗಬಹುದು. ಆರೋಗ್ಯವೂ ಉತ್ತಮವಾಗಿರುತ್ತದೆ. 


ಇದನ್ನೂ ಓದಿ- Ketu Nakshatra Parivartane: ಈ ರಾಶಿಯವರಿಗೆಕೇತು ಕೃಪೆಯಿಂದ ಅಪಾರ ಸಂಪತ್ತು, ಉತ್ತಮ ಸ್ಥಾನಮಾನ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯ ಜನರಿಗೆ ಇಂದು ಪ್ರೀತಿ ವಿಷಯದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದಾಗ್ಯೂ, ಹಣದ ಒಳಹರಿವಿನಲ್ಲಿ ಹೆಚ್ಚಳ, ವ್ಯಾಪಾರದಲ್ಲಿ ಪ್ರಗತಿಯು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯ ಜನರಿಗೆ ನಿಮ್ಮ ಬಹುಕಾಲದ ಕೆಲಸವೊಂದು ಇಂದು ಪೂರ್ಣಗೊಳ್ಳಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದೆ. ಪ್ರೀತಿ ವಿಷಯದಲ್ಲಿ ದಿನವು ಮಧ್ಯಮವಾಗಿರುತ್ತದೆ. ದೇವರ ಆರಾಧನೆಯಲ್ಲಿ ಆಸಕ್ತಿ ಹೊಂದಿರುವಿರಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರಿಗೆ ಇಂದು ಹಣಕಾಸಿನ ಹರಿವು ಹೆಚ್ಚಾಗುವುದರಿಂದ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಪಡೆಯಬಹುದು. ಆದರೆ, ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ, ಇಲ್ಲವೇ ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯವರಿಗೆ ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆಯಲಿವೆ. ಉದ್ಯೋಗ-ವ್ಯವಹಾರದ ವಿಷಯದಲ್ಲಿ ದಿನವು ಉತ್ತಮವಾಗಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.  ನಿಮ್ಮ ಮಕ್ಕಳಿಂದ ಪ್ರೀತಿ-ಬೆಂಬಲವನ್ನು ಪಡೆಯುತ್ತೀರಿ. ಇಂದು ಯಾರಿಗೂ ಸಾಲ ನೀಡಬೇಡಿ. 


ಇದನ್ನೂ ಓದಿ- ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಗಳಿಗೆ ಭಾಗ್ಯೋದಯ... ಲಕ್‌ ಜೊತೆ ಲೈಫೂ ಚೇಂಜ್‌, ಧನ ಸಂಪತ್ತು ಹೊತ್ತು ಮನೆಗೆ ಬರುವಳು ಮಹಾಲಕ್ಷ್ಮೀ!


ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯವರಿಗೆ ಇಂದು ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು, ನಿಮ್ಮ ಜೀವನದಲ್ಲಿ ಹೊಸ ಪ್ರೀತಿಯ ಆಗಮನವಾಗಬಹುದು. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಇಂದು ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರಿಗೆ ಇಂದು ಧನಾಗಮನವಾಗಲಿದೆ. ನಿಮ್ಮ ಪ್ರೀತಿ-ಪಾತ್ರರಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆದಾಗ್ಯೂ, ಅನಾವಶ್ಯಕ ವಾದಗಳನ್ನು ತಪ್ಪಿಸಿದರೆ ಒಳ್ಳೆಯದು. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರು ಇಂದು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮಕ್ಕಳ ಬೆಂಬಲದಿಂದ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಭೂಮಿ, ವಾಹನ ಖರೀದಿಸಲು ಇಂದು ಉತ್ತಮ ದಿನ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯ ಜನರು ಇಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಆರೋಗ್ಯವು ಮಧ್ಯಮವಾಗಿರುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಕುಟುಂಬದ ಹಿರಿಯರ ಬೆಂಬಲ ದೊರೆಯಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.