Shukravara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ ಅಷ್ಟಮಿ ತಿಥಿಯ ಈ ದಿನ ಶುಕ್ರವಾರ ಉತ್ತರ ಫಲ್ಗುಣಿ ನಕ್ಷತ್ರ, ಸಿದ್ಧಿ ಯೋಗ ಇರಲಿದೆ. ಈ ಶುಭ ಶುಕ್ರವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯವರು ಇಂದು ಇಡೀ ದಿನ ಚೈತನ್ಯದಿಂದ ಕೂಡಿರುವಿರಿ. ಕೆಲಸ ಕಾರ್ಯಗಳು ವೇಗ ಪಡೆಯಲಿದ್ದು, ಹಿಡಿದ ಕೆಲಸಗಳನ್ನು ಸಾಧಿಸುವಿರಿ. ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಪಡೆಯುವಿರಿ. ಸಂಗಾತಿಯ ಸಲಹೆ ಅನುಸರಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯವರು ಇಂದು ಪ್ರತಿಸ್ಪರ್ಧಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಬೇಕು. ಹಣ-ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿರ್ದಿಷ್ಟ ಗುರಿಯೊಂದಿಗೆ ಮುಂದುವರೆಯುವುದರಿಂದ ಶುಭವಾಗಲಿದೆ. ಸಮಾಜದಲ್ಲಿ ನಿಮ್ಮದೇ ಆದ ಗುರುತು ಮಾಡುವಿರಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರಿಗೆ ಸಿದ್ಧಿ ಯೋಗದ ಫಲವಾಗಿ ಹೂಡಿಕೆಯಿಂದ ಲಾಭವಾಗಲಿದೆ. ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರಲಿದೆ. ಕೌಟುಂಬಿಕ ಕಲಹ ಸಾಧಯ್ತೆ ಇರುವುದರಿಂದ ಮಾತಿಗೆ ಕಡಿವಾಣ ಹಾಕುವುದು ಅಗತ್ಯ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರಿಗೆ ಉತ್ತರ ಫಲ್ಗುಣಿ  ನಕ್ಷತ್ರ ಸಿದ್ದಿ ಯೋಗವು ಇಂದು ಅನುಕೂಲಕರ ದಿನ ಎಂದು ಸಾಬೀತುಪಡಿಸಲಿದೆ. ಯಾವುದೇ ವಿಚಾರದಲ್ಲಿ ಸಂದೇಹವಿದ್ದರೆ ಗುರು-ಹಿರಿಯರೊಂದಿಗೆ ಮಾತನಾಡಿ ಸಲಹೆ ಪಡೆಯಿರಿ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. 


ಇದನ್ನೂ ಓದಿ- Budh Gochar 2024: ಇಂದು ಮಿಥುನ ರಾಶಿಗೆ ಬುಧನ ಪ್ರವೇಶ, ಜಾಗೃತಗೊಳ್ಳಲಿದೆ ಮೂರು ರಾಶಿಯವರ ಅದೃಷ್ಟ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರಿಗೆ ಇಂದು ಫಲಪ್ರದವಾದ ದಿನ. ಕೆಲಸದಲ್ಲಿ ಉತ್ತಮ ಕಾರ್ಯಕ್ಷಮತೆಯಿಂದ ಬೇರೆಯವರನ್ನು ಆಕರ್ಷಿಸುವಿರಿ. ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯುವಿರಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರು ಇಂದು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಣ್ಣ ಪಿಕ್ನಿಕ್ ಯೋಜಿಸಬಹುದು. ಒಟ್ಟಾರೆಯಾಗಿ ಇಂದು ಆನಂದದಾಯಕ ಕ್ಷಣಗಳನ್ನು ಆನಂದಿಸುವಿರಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರಿಗೆ ಇಂದು ಸಿದ್ದಿಯೋಗದ ಫಲವಾಗಿ ಹಣದ ಹೊಳೆಯೇ ಹರಿಯಲಿದೆ. ಹೊಸ ವಾಹನ ಖರೀದಿ ಯೋಗವೂ ಇದೆ. ಆದಾಗ್ಯೂ, ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಯೋಚಿಸಿ ಖರ್ಚು ಮಾಡುವುದು ಒಳ್ಳೆಯದು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯ ಜನರಿಗೆ ಇಂದು ಸಿದ್ದಿ ಯೋಗವು ಉದ್ಯೋಗ ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ನೀಡಲಿದೆ. ವೈವಾಹಿಕ ಜೀವಂದಲ್ಲಿ ಸುಖ-ಸಂತೋಷವನ್ನು ಅನುಭವಿಸುವಿರಿ. ಆದಾಗ್ಯೂ, ನಿಮ್ಮ ಮಾತಿಗೆ ಕಡಿವಾಣ ಹಾಕುವ ಅವಶ್ಯಕತೆಯನ್ನು ಅರಿತುಕೊಳ್ಳಿ. 


ಇದನ್ನೂ ಓದಿ- Shani Vakri 2024: ಈ ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ ಶನಿ ಮಹಾದೇವ


ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯ ವಿದ್ಯಾರ್ಥಿಗಳು ಸ್ವಲ್ಪ ಹೆಚ್ಚು ಶ್ರಮಪಡಬೇಕಾಗುವುದು. ನೀವು ಶಾಂತ ಚಿತ್ತತೆಯಿಂದ ಕುಳಿತು ಓದುವುದರಿಂದ ಖಂಡಿತವಾಗಿಯೂ ನಿರೀಕ್ಷಿತ ಯಶಸ್ಸನ್ನು ಪಡೆಯಬಹುದು. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸ್ವಲ್ಪ ಶ್ರಮದಾಯಕ ದಿನ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರಿಗೆ ಇಂದು ಕಠಿಣ ಪರಿಶ್ರಮದಿಂದ ಯಶಸ್ಸು. ವ್ಯಾಪಾರದಲ್ಲಿ ಬಂಪರ್ ಲಾಭವಾಗಲಿದೆ. ನಿಮ್ಮ ಪ್ರೀತಿಪಾತ್ರರಿಗಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರು ಇಂದು ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವಿರಿ. ಉದ್ಯೋಗಸ್ಥರಿಗೆ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಖ್ಯಾತಿ ಹೆಚ್ಚಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯವರಿಗೆ ಇಂದು ನಿಮ್ಮ ಮನಸ್ಸು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಲಿದೆ. ಕಬ್ಬಿಣದ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಕಡಿಮೆ ಲಾಭವಾಗಲಿದೆ. ಆದರೆ, ಧೃತಿಗೆಡದೆ ಮುಂದುವರೆಯುವುದರಿಂದ ಭವಿಷ್ಯದಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.