Guruvara Dina Bhavishya In Kannada: 02ನೇ ಮೇ 2024ರ ಗುರುವಾರದ ಈ ದಿನ ಚೈತ್ರ ಮಾಸ, ಕೃಷ್ಣ ಪಕ್ಷ, ನವಮಿಯಂದು ಶುಕ್ಲ ಯೋಗ ಯಾವ ರಾಶಿಯವರಿಗೆ ಶುಭ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿ:  
ಇಂದು ಶುಕ್ಲ ಯೋಗದಿಂದಾಗಿ ಮೇಷ ರಾಶಿಯವರು ವೃತ್ತಿ-ವ್ಯವಹಾರದಲ್ಲಿ ಹೊಸ ಎತ್ತರವನ್ನು ತಲುಪುವರು. ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಮನ್ನಣೆ ಪಡೆಯುವಿರಿ. ಶಾಂತಿಯುತವಾಗಿ ಮಾತನಾಡುವುದರಿಂದ ಕುಟುಂಬದಲ್ಲಿ ವಾತಾವರಣ ಸುಧಾರಿಸಲಿದೆ. 


ವೃಷಭ ರಾಶಿ:  
ವೃಷಭ ರಾಶಿಯವರಿಗೆ ಇಂದು ಶುಕ್ಲ ಯೋಗದ ಪರಿಣಾಮವಾಗಿ ವ್ಯಾಪಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ನಿರುದ್ಯೋಗಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. 


ಮಿಥುನ ರಾಶಿ:   
ಮಿಥುನ ರಾಶಿಯವರೇ ನೀವು ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಮಾಡಲು ಯೋಜಿಸುತ್ತಿದ್ದರೆ,  ಇಂದು ಒಳ್ಳೆಯ ಸಮಯ. ಪಾಲುದಾರಿಕೆಯ ವ್ಯಾಪಾರ ನಡೆಸುತ್ತಿರುವವರು ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಮತ್ತು ರಾಜಕೀಯ ಮಟ್ಟದಲ್ಲಿ ತಾಳ್ಮೆ ಮತ್ತು ಕಠಿಣ ಪರಿಶ್ರಮದಿಂದ ಕಾರ್ಯ ಸಿದ್ಧಿ. 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರೇ ಪಾಲುದಾರಿಕೆ ವ್ಯವಹಾರದಲ್ಲಿ ಸಂಬಂಧಗಳಿಂದ ದೂರ ಇರುವುದು ಒಳ್ಳೆಯದು. ಉದ್ಯಮಿಗಳು ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಗಿರಿ. 


ಇದನ್ನೂ ಓದಿ- Angarak Yog: ಮೀನ ರಾಶಿಯಲ್ಲಿ ಮಂಗಳ ರಾಹು ಯುತಿ, 3 ರಾಶಿಯವರಿಗೆ ಭಾರೀ ನಷ್ಟ, ಹೆಜ್ಜೆ ಹೆಜ್ಜೆಗೂ ಸಂಕಷ್ಟ


ಸಿಂಹ ರಾಶಿ:   
ಸಿಂಹ ರಾಶಿಯವರಿಗೆ ವ್ಯಾಪಾರದಲ್ಲಿ ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಹೆಚ್ಚಿನ ಲಾಭದ ಆಲೋಚನೆಯಲ್ಲಿ ದಾಸ್ತಾನು ಸಂಗ್ರಹಿಸಿದ್ದ ಉದ್ಯಮಿಗಳಿಗೆ ಬಂಪರ್ ಲಾಭ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು. 


ಕನ್ಯಾ ರಾಶಿ: 
ಶುಕ್ಲ ಯೋಗದ ರಚನೆಯೊಂದಿಗೆ ಕನ್ಯಾ ರಾಶಿಯವರಿಗೆ ಹೊಸ ವ್ಯವಹಾರದಲ್ಲಿ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹಾಯಕ ಮನೋಭಾವದ ಲಾಭವನ್ನು ಯಾರಾದರೂ ಪಡೆಯಬಹುದು. ಸಂಯಮದಿಂದಿದ್ದರೆ ಸಾಮಾಜಿಕ ಮತ್ತು ರಾಜಕೀಯ ಮಟ್ಟದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಬಹುದು.


ತುಲಾ ರಾಶಿ:  
ತುಲಾ ರಾಶಿಯ ವ್ಯಾಪಾರಸ್ಥರಿಗೆ ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ನಿಮ್ಮ ಕುಟುಂಬದೊಂದಿಗೆ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಸಮಯ ಅತ್ಯುತ್ತಮವಾಗಿದೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಕುಟುಂಬದ ಎಲ್ಲ ಸದಸ್ಯರ ಬೆಂಬಲವನ್ನು ನೀವು ಪಡೆಯುತ್ತೀರಿ.


ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯ ಕಾರ್ಪೊರೇಟ್ ವ್ಯವಹಾರಕ್ಕೆ ಸಂಬಂಧಿಸಿದ ಜನರು ಇಂದು ಬಹಳ ಜಾಗರೂಕರಾಗಿರಬೇಕು. ವ್ಯಾಪಾರಸ್ಥರು ಗ್ರಾಹಕರೊಂದಿಗೆ ವಾಗ್ವಾದವನ್ನು ತಪ್ಪಿಸಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವವರ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವುದನ್ನು ಪರಿಗಣಿಸಿ. 


ಇದನ್ನೂ ಓದಿ- 12 ವರ್ಷ ನಂತರ ವೃಷಭದಲ್ಲಿ ಗುರು ಗೋಚಾರ.. ಈ 3 ರಾಶಿಯವರಿಗೆ ಅದೃಷ್ಟ, ಹಣದ ಮಳೆ, ವೃತ್ತಿಯಲ್ಲಿ ಉನ್ನತಿ.. ಸಂಪತ್ತು ಹೆಚ್ಚಾಗಿ ಸಮಾಜದಲ್ಲಿ ಖ್ಯಾತಿ ಪಡೆಯುವಿರಿ!


ಧನು ರಾಶಿ:  
ಶುಕ್ಲ ಯೋಗದ ರಚನೆಯಿಂದಾಗಿ, ಧನು ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಬೆಂಬಲ ದೊರೆಯಲಿದೆ. ಹಣಕಾಸಿನ ವಿಷಯದಲ್ಲಿ ಚಿಂತನಶೀಲವಾಗಿರುವುದರಿಂದ ವ್ಯವಹಾರದಲ್ಲಿ ಯಶಸ್ಸು. ಬುದ್ದಿವಂತಿಕೆಯಿಂದ ಕೌಟುಂಬಿಕ ವಿವಾದಗಳಿಂದಲೂ ಪರಿಹಾರ ದೊರೆಯಲಿದೆ. 


ಮಕರ ರಾಶಿ:  
ಮಕರ ರಾಶಿಯವರು ಶುಕ್ಲ ಯೋಗದ ಫಲವಾಗಿ ವ್ಯಾಪಾರದಲ್ಲಿ ಹೊಸ ಆರ್ಡರ್‌ಗಳನ್ನು ಪಡೆಯುವಿರಿ. ಹೊಸ ತಂತ್ರಜ್ಞಾನದತ್ತ ನಿಮ್ಮ ಒಲವು ಕೂಡ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಧನಾತ್ಮಕ ಚಿಂತನೆಯು ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತದೆ.


ಕುಂಭ ರಾಶಿ:  
ಶುಕ್ಲ ಯೋಗದ ರಚನೆಯು ಕುಂಭ ರಾಶಿಯವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಕೊಡಲಿದೆ. ಕೆಲಸದಲ್ಲಿ ಸಮಯ ನಿರ್ವಹಣೆಗೆ ಗಮನ ಕೊಡಿ. ಆತ್ಮವಿಶ್ವಾಸ ಮತ್ತು ಸಮರ್ಪಣೆಯೊಂದಿಗೆ ಸಾಮಾಜಿಕ ಮಟ್ಟದಲ್ಲಿ ನಿಮ್ಮ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ.


ಮೀನ ರಾಶಿ:  
ಮೀನ ರಾಶಿಯ ಉದ್ಯಮಿಗಳು ಇಂದು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆಸ್ತಿಗೆ ಸಂಬಂಧಿಸಿದಂತೆ ಕುಟುಂಬ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ಹಳೆಯ ವಿಷಯಗಳಿಗೆ ಪ್ರಾಮುಖ್ಯತೆ ನೀಡುವುದು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಯಾವುದೇ ಪ್ರಯೋಜನವನ್ನು ತರುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.