ದಿನಭವಿಷ್ಯ :  19 ಡಿಸೆಂಬರ್ 2023ರ ಮಂಗಳವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಜನರ ದಿನ ಭವಿಷ್ಯ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿ:  
ಮೇಷ ರಾಶಿಯವರಿಗೆ ಇಂದು ಆತ್ಮಾವಲೋಕನಕ್ಕೆ ಸೂಕ್ತ ದಿನ. ನಿಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಸಮಯ ಮೀಸಲಿಡಿ. ಇದರಿಂದ ಕೌಶಲ್ಯ ವೃದ್ಧಿಯಾಗುವುದರ ಜೊತೆಗೆ ಹಣಕಾಸಿನ ಫಲವನ್ನೂ ನಿರೀಕ್ಷಿಸಬಹುದು. 


ವೃಷಭ ರಾಶಿ:  
ವೃಷಭ ರಾಶಿಯವರಿಗೆ ದೀರ್ಘ ಸಮಯದಿಂದ ಬಾಧಿಸುತ್ತಿದ್ದ ಸವಾಲುಗಳಿಂದ ಮುಕ್ತಿ ದೊರೆಯಲಿದೆ. ನಿಮ್ಮ ಸ್ಪರ್ಧಾತ್ಮಕ ಮನೋಭಾವವು ಚೈತನ್ಯವನ್ನು ತುಂಬಲಿದೆ. ಆದಾಗ್ಯೂ,  ಸಂಭಾವ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದಿರಿ. 


ಮಿಥುನ ರಾಶಿ:   
ಮಿಥುನ ರಾಶಿಯವರು ನಿಮ್ಮ ಗುರಿ ಮುಟ್ಟಲು ದೃಢಸಂಕಲ್ಪದೊಂದಿಗೆ ಮುಂದುವರೆಯಿರಿ. ವ್ಯಾಪಾರಸ್ಥರಿಗೆ ಬಂಪರ್ ಲಾಭ ನಿರೀಕ್ಷೆ ಇದೆ. ಆದಾಗ್ಯೂ, ನಿಮ್ಮ ಸುತ್ತಲೂ ಇರುವ ಹಿತ ಶತ್ರುಗಳ ಬಗ್ಗೆ ಜಾಗರೂಕರಾಗಿರಿ. 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರಿಗೆ ಸ್ಪಷ್ಟ ಪ್ರತಿಫಲದೊಂದಿಗೆ ನಿಮ್ಮ  ವೃತ್ತಿಪರ ಶ್ರೇಷ್ಠತೆಯು ನಿಮಗಾಗಿ ಕಾಯುತ್ತಿದೆ. ಇಂದು ಬುದ್ದಿವಂತಿಕೆಯಿಂದ ಮಾಡಿದ ಯಾವುದೇ ಕೆಲಸ ಕಾರ್ಯಗಳಲ್ಲಿ ಲಾಭವನ್ನು ನಿರೀಕ್ಷಿಸಬಹುದು. 


ಇದನ್ನೂ ಓದಿ- Shani Gochar: 2024ರಲ್ಲಿ ಮೂರು ಬಾರಿ ಪಥ ಬದಲಿಸಲಿರುವ ಶನಿ, ಈ ರಾಶಿಯವರಿಗೆ ಸುವರ್ಣ ಯುಗ


ಸಿಂಹ ರಾಶಿ:   
ಸಿಂಹ ರಾಶಿಯವರೇ ನಿಮ್ಮ ಕನಸನ್ನು ಸಾಕಾರಗೊಳಿಸುವತ್ತ ಗಮನಹರಿಸಿ. ನಿಮ್ಮ ಪ್ರತಿಭೆಗೆ ಗೌರವ, ಮನ್ನಣೆ ಸಿಗಲಿದೆ. ಇದು ಆದಾಯವನ್ನೂ ಹೆಚ್ಚಿಸಲಿದ್ದು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. 


ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಇಂದು ನಿಮ್ಮ ಪ್ರೀತಿ ಪಾತ್ರರ ಮಾತು ಮನಸ್ಸಿಗೆ ನೋವುಂಟು ಮಾಡಬಹುದು. ಆದಾಗ್ಯೂ, ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ, ದೃಢವಾಗಿರಿ. ಯಾವುದೇ ನಕಾರಾತ್ಮಕ ಮಾತುಗಳಿಗೆ ಕಿವಿಗೊಡಬೇಡಿ. 


ತುಲಾ ರಾಶಿ:  
ತುಲಾ ರಾಶಿಯವರಿಗೆ ಇಂದು ನಿರೀಕ್ಷೆಯಂತೆ ಕೆಲಸಕಾರ್ಯಗಳು ನಡೆಯದೆ ಇರಬಹುದು. ಆದರೆ, ಹತಾಶರಾಗಬೇಡಿ. ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾಗಿರುವುದನ್ನು ಮಾಡಲು ಹಿಂಜರಿಯಬೇಡಿ. 


ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರು ಇಂದು ಸ್ನೇಹಿತರು, ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಆದಾಗ್ಯೂ, ಕ್ಷುಲ್ಲಕ ವಿಷಯಗಳಿಗೆ ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ. 


ಇದನ್ನೂ ಓದಿ- Budh Asta: ಧನು ರಾಶಿಯಲ್ಲಿ ಬುಧ ಅಸ್ತ- ಯಾವ ರಾಶಿಯವರಿಗೆ ಏನು ಫಲ


ಧನು ರಾಶಿ:  
ಧನು ರಾಶಿಯವರಿಗೆ ಇಂದು ನಿಮ್ಮ ಆಪ್ತರೊಂದಿಗೆ ತಪ್ಪು ತಿಳುವಳಿಕೆಯು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ಇದು ಉದ್ವಿಗ್ನತೆಗೂ ಕಾರಣವಾಗಬಹುದು. ಸಾಧ್ಯವಾದಷ್ಟು ಕೋಪದ ಕೈಗೆ ಬುದ್ದಿ ನೀಡುವುದನ್ನು ತಪ್ಪಿಸಿ. 


ಮಕರ ರಾಶಿ:  
ಮಕರ ರಾಶಿಯವರು ಇಂದು ನಿಮ್ಮ ಸಂಗಾತಿಯಿಂದ ಗುಡ್ ನ್ಯೂಸ್ ಪಡೆಯಲಿದ್ದೀರಿ. ಇದು ನಿಮ್ಮ ದಿನವನ್ನು ತುಂಬಾ ಖುಷಿಯಾಗಿರಿಸುತ್ತದೆ. ದೀರ್ಘಕಾಲದಿಂದ ದೂರ ಸರಿದಿದ್ದ ಸ್ನೇಹಿತರು, ಸಂಬಂಧಿಕರು ಇಂದು ಮತ್ತೆ ನಿಮ್ಮನ್ನು ಸಂಪರ್ಕಿಸಬಹುದು. 


ಕುಂಭ ರಾಶಿ:  
ಕುಂಭ ರಾಶಿಯವರಿಗೆ ಇಂದು ಆರ್ಥಿಕವಾಗಿ ತುಂಬಾ ಶುಭದಿಂದ. ನಿಮ್ಮ ಆಲೋಚನೆ ಮತ್ತು ನಡವಳಿಕೆಯಲ್ಲಿನ ಬದಲಾವಣೆಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಧ್ಯವಾದಷ್ಟು ಯಾರನ್ನೂ ಭಾವನಾತ್ಮಕವಾಗಿ ಹೆಚ್ಚು ಹಚ್ಚಿಕೊಳ್ಳಬೇಡಿ. 


ಮೀನ ರಾಶಿ:  
ಮೀನ ರಾಶಿಯವರು ಕೆಲಸದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದರಿಂದ ಉತ್ತಮ ಫಲವನ್ನು ನಿರೀಕ್ಷಿಸಬಹುದು. ದಿನದ ಅಂತ್ಯದ ವೇಳೆಗೆ ಕುಟುಂಬಸ್ಥರಿಂದ ಶುಭ ಸುದ್ದಿಯು ಮನಸ್ಸಿಗೆ ಸಂತೋಷವನ್ನು ನೀಡಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.