Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಮಂಗಳವಾರದ ಈ ದಿನ ಧನಿಷ್ಠ ನಕ್ಷತ್ರ, ಆಯುಷ್ಮಾನ್ ಯೋಗ ಇರಲಿದ್ದು ಯಾವ ರಾಶಿಯ ಜನರಿಗೆ ಏನು ಫಲ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ವೈವಾಹಿಕ ಜೀವನವು  ಸಂತೋಷದಿಂದ ಕೂಡಿರಲಿದೆ. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ, ಅದರಿಂದಲೇ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಸರ್ಕಾರಿ ನೌಕರರು ಇಂದು ಪ್ರಾಮಾಣಿಕತೆಯಿಂದ ಕೆಲಸ ಮಾಡುವುದರಿಂದ ಶುಭವಾಗಲಿದೆ. ಕುಟುಂಬದಲ್ಲಿ ನಿಮ್ಮೆಲ್ಲಾ ಯೋಜನೆಗಳಿಗೆ ಸಹೋದರವರ್ಗದವರ ಬೆಂಬಲ ದೊರೆಯಲಿದೆ. ವ್ಯವಹಾರದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲ ಪ್ರಾಪ್ತಿಯಾಗಲಿದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಈ ರಾಶಿಯ ವೃತ್ತಿಪರರು ಇಂದು ಉದ್ಯೋಗದಲ್ಲಿ ಬಡ್ತಿಯನ್ನು ನಿರೀಕ್ಷಿಸಬಹುದು. ಆದಾಗ್ಯೂ, ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಮಧುರತೆಯನ್ನು ಕಾಪಾಡಿಕೊಳ್ಳಿ. ಹಿರಿಯರ ಸಲಹೆಯಂತೆ ಮುಂದುವರೆದರೆ ಕುಟುಂಬದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಅನುಭವಿಸುವಿರಿ. ವ್ಯಾಪಾರಸ್ಥರಿಗೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡುವುದು ಹೆಚ್ಚಿನದನ್ನು ಕಲಿಯಲು ಸಹಕಾರಿ ಆಗಲಿದೆ. ಹೂಡಿಕೆಯಿಂದ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. 


ಇದನ್ನೂ ಓದಿ- 100 ವರ್ಷಗಳ ನಂತರ ಒಟ್ಟೊಟ್ಟಿಗೆ ಎರಡು ರಾಜಯೋಗಗಳ ನಿರ್ಮಾಣ: ಆರು ರಾಶಿಯವರಿಗೆ ಸಕಲ ಸುಖ-ಸಂಪತ್ತು ಪ್ರಾಪ್ತಿ!


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಾಶಿಯ ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ ಓದಬೇಕು. ಉದ್ಯೋಗಸ್ಥರಿಗೆ ಕೆಲಸದಲ್ಲಿ ಮೂಡಿದ್ದ ಅಡೆತಡೆಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿಯನ್ನು ಕಾಣುವಿರಿ. ಇಂದು ಯಾರಿಂದಲಾದರೂ ಸಾಲ ಪಡೆಯುವುದನ್ನು ತಪ್ಪಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮ್ಮ ಸಾಮಾಜಿಕ ವಲಯ ಇಂದು ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾಗಬಹುದು. ಆದಾಗ್ಯೂ, ವ್ಯವಹಾರದಲ್ಲಿ ಇಂದು ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗದಲ್ಲೂ ಪ್ರಗತಿಯನ್ನು ಕಾಣಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ಜನರಿಗೆ ನಿಮ್ಮ ದಾಂಪತ್ಯ ಜೀವನದಲ್ಲಿ ಮೂಡಿದ್ದ ಬಿರುಕುಗಳು ನಿವಾರಣೆಯಾಗುತ್ತವೆ. ಆದರೆ, ಇಂದು ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ಬೇರೆಯವರಿಗೆ ಸಾಲ ನೀಡುವುದನ್ನು ತಪ್ಪಿಸಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಯಶಸ್ಸು, ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಮನ್ನಣೆ, ಕೀರ್ತಿ ಹೆಚ್ಚಾಗಲಿದೆ. ಸರ್ಕಾರದ ಯೋಜನೆಗಳಿಂದ ಲಾಭವನ್ನು ಪಡೆಯುವಿರಿ. ದಾಂಪತ್ಯ ಸುಖ ಹೆಚ್ಚಾಗಲಿದೆ. 


ಇದನ್ನೂ ಓದಿ- ಶೀಘ್ರದಲ್ಲೇ ಮುಖಾಮುಖಿಯಾಗಲಿದ್ದಾರೆ ಶನಿ-ಬುಧ: ವೃತ್ತಿ ಬದುಕಿನಲ್ಲಿ ಭಾರೀ ಜಯ ಸಾಧಿಸಲಿದ್ದಾರೆ ಈ ರಾಶಿಯ ಜನ


ಧನು ರಾಶಿಯವರ ಭವಿಷ್ಯ (Sagittarius Horoscope):  
ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಆದರೆ, ನೌಕರರು ಇಂದು ಸೋಮಾರಿತನ ಬಿಟ್ಟು ಕೆಲಸ ಮಾಡದಿದ್ದರೆ ಭಾರೀ ಸಂಕಷ್ಟಕ್ಕೆ ಗುರಿಯಾಗುವಿರಿ. ವ್ಯವಹಾರದಲ್ಲಿ ಲಾಭ, ಕುಟುಂಬ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ದಿನ ವೃತ್ತಿ ಹಾಗೂ ಕೌಟುಂಬಿಕ ಬದುಕಿನಲ್ಲಿ ನಿರ್ಮಾಣವಾಗಿದ್ದ ಪ್ರತೀಕೂಲ ಪರಿಸ್ಥಿತಿಗಳು ಬದಲಾಗುತ್ತವೆ. ಭವಿಷ್ಯವನ್ನು ಭದ್ರಪಡಿಸಲು ಹೂಡಿಕೆಯನ್ನು ಪರಿಗಣಿಸಿ. ಕೆಲವರು ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆಗೆ ಸಂಬಂಧಿಸಿದಂತೆ ಶುಭವಾರ್ತೆ ದೊರೆಯಲಿದೆ. ಪ್ರೀತಿ-ಪ್ರೇಮದಲ್ಲಿರುವವರಿಗೆ ಉತ್ತಮ ಸಮಯ. ವಿದ್ಯಾರ್ಥಿಗಳು ಹೊಸ ವಿಷಯವನ್ನು ಕಲಿಯಲು ಹೆಚ್ಚು ಶ್ರಮವಹಿಸಬೇಕು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯ ಜನರು ಇಂದು ಸ್ಪರ್ಧೆಗಳಲ್ಲಿ ಜಯ ಸಾಧಿಸುವರು. ದಿಢೀರ್ ಧನಲಾಭವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರಿಂದ ಮಾನಸಿಕ ನೆಮ್ಮದಿಯನ್ನು ಅನುಭವಿಸುವಿರಿ. ಆದರೆ, ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಗರೂಕರಾಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.