Chaturgrahi Yoga Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಕೂಡಿದಾಗ ಆಂತಹ ಸಂದರ್ಭದಲ್ಲಿ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. ಇದೀಗ ಇನ್ನೂ 21ದಿನಗಳ ಬಳಿಕ ಆಗಸ್ಟ್ 17, 2023ರಂದು ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯಲ್ಲಿ ಶುಕ್ರ, ಚಂದ್ರ, ಮಂಗಳ ಮತ್ತು ಬುಧ ಸಂಯೋಜನೆಗೊಳ್ಳಲಿದ್ದು ಇದರಿಂದಾಗಿ ಶುಭಕರವಾದ ಚತುರ್ಗ್ರಾಹಿ ಯೋಗ ನಿರ್ಮಾಣಗೊಳ್ಳಲಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಆಗಸ್ಟ್ 17, 2023ರಂದು ಸಿಂಹ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಮಂಗಳಕರ ಚತುರ್ಗ್ರಾಹಿ ಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಒಳ್ಳೆಯ ಸಮಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಈ ಶುಭ ಯೋಗವು ಮೂರು ರಾಶಿಯವರ ಜೀವನದಲ್ಲಿ ಪ್ರಗತಿಯ ಹೊಸ ಹಾದಿಯನ್ನು ತೆರೆಯಲಿದ್ದು, ಇವರ ಜೀವನದಲ್ಲಿ ಅದೃಷ್ಟವು ಹೊಳೆಯುತ್ತದೆ. ಮಾತ್ರವಲ್ಲ ಅಪಾರ ಕೀರ್ತಿ, ಪ್ರಗತಿಯನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- 1000 ವರ್ಷಗಳಿಂದ ಅಡಿಪಾಯವೇ ಇಲ್ಲದೆ ನಿಂತಿರುವ ಈ ಶಿವನ ದೇವಾಲಯ ವಿಜ್ಞಾನಿಗಳಿಗೂ ಸವಾಲ್!


21 ದಿನಗಳ ಬಳಿಕ ರೂಪುಗೊಳ್ಳಲಿದೆ ಶುಭಕರ ಚತುರ್ಗ್ರಾಹಿ ಯೋಗ, ಮೂರು ರಾಶಿಯವರ ಜೀವನದಲ್ಲಿ ಧನಸಂಪತ್ತು ಪ್ರಾಪ್ತಿ: 
ಮೃಷಭ ರಾಶಿ: 

ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ನಿರ್ಮಾಣಗೊಳ್ಳಲಿರುವ ಶುಭಕರ ಚತುರ್ಗ್ರಾಹಿ ಯೋಗವು ವೃಷಭ ರಾಶಿಯವಾರ ಜೀವನದಲ್ಲಿ ಸುಖ-ಸಂಪತ್ತನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಆಸ್ತಿ ಸಂಬಂಧಿತ ನಿಮ್ಮ ಹಳೆಯ ವ್ಯಾಜ್ಯಗಳು ಬಗೆಹರಿಯಲಿದ್ದು, ಭೂಮಿ-ವಾಹನ ಖರೀದಿ ಬಗ್ಗೆ ಯೋಚಿಸಬಹುದು. ವೃತ್ತಿ ಜೀವನದಲ್ಲಿ ವಿಶೇಷವಾಗಿ ಪ್ರಯೋಜನ ಪಡೆಯಲಿದ್ದೀರಿ. 


ಮಿಥುನ ರಾಶಿ: 
ಚತುರ್ಗ್ರಾಹಿ ಯೋಗದಿಂದಾಗಿ ಮಿಥುನ ರಾಶಿಯವರಿಗೆ ಧೈರ್ಯ ಹೆಚ್ಚಾಗಲಿದೆ. ಮಾತ್ರವಲ್ಲ, ವೃತ್ತಿ ವ್ಯವಹಾರದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಕುಟುಂಬ ವರ್ಗದವರ ಸಹಕಾರವೂ ಲಭ್ಯವಾಗಲಿದ್ದು, ವೃತ್ತಿ ಬದುಕಿನಲ್ಲಿ ಉತ್ತುಂಗದ ಶಿಖರವನ್ನು ಏರುವಿರಿ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನೂ ಸಹ ಸುಧಾರಿಸಲಿದೆ. 


ಇದನ್ನೂ ಓದಿ- Vastu Tips: ಶ್ರಾವಣ ಮಾಸದಲ್ಲಿ ಈ ಸಸ್ಯಗಳನ್ನು ಮನೆಗೆ ತಂದರೆ ಸಿಗುತ್ತೆ ಸಿರಿವಂತರಾಗುವ ಭಾಗ್ಯ


ಧನು ರಾಶಿ: 
ಚತುರ್ಗ್ರಾಹಿ ಯೋಗವು ಧನು ರಾಶಿಯವರ ಬದುಕಿನಲ್ಲಿಯೂ ಮಂಗಳಕರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಅದೃಷ್ಟದ ಬಾಗಿಲುಗೌ ತೆರೆಯಲಿದ್ದು, ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದೆ. ವ್ಯಾಪಾರ ಮಾಡುವವರಿಗೆ ದೊಡ್ಡ ಆರ್ಡರ್ ಲಭ್ಯವಾಗುವ ಸಾಧ್ಯತೆ ಇದು ಇದರಿಂದ ಬಂಪರ್ ಆರ್ಥಿಕ ಪ್ರಯೋಜನವಾಗಲಿದೆ. ಇದಲ್ಲದೆ, ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಯೋಗವೂ ಇದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಅಪಾರ ಕೀರ್ತಿ, ಪ್ರಗತಿಯನ್ನು ಕಾಣುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.