Auspicious Dreams :ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ.ಕನಸುಗಳ ಅರ್ಥಗಳನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಲಾಗಿದೆ.ಕೆಲವು ಕನಸುಗಳು ತುಂಬಾ ಮಂಗಳಕರವಾಗಿದ್ದು,ನಮ್ಮ ಜೀವನದಲ್ಲಿ ಸಂಪತ್ತು,ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವ ಮುನ್ನ ಮಾತ್ರ ಈ ಕನಸು ಬೀಳುತ್ತವೆಯಂತೆ. ಈ ಕನಸುಗಳು ಬಿದ್ದಿವೆ ಎಂದಾದರೆ  ನಿಮ್ಮ ಜೀವನದ ಒಳ್ಳೆಯ ಸಮಯ ಪ್ರಾರಂಭವಾಗಲಿದೆ ಎಂದರ್ಥ ಎನ್ನುತ್ತದೆ ಸ್ವಪ್ನ ಶಾಸ್ತ್ರ.  


COMMERCIAL BREAK
SCROLL TO CONTINUE READING

ಶುಭ ಕನಸುಗಳು ಯಾವುವು ?: 
ಹಾಲಿನೊಂದಿಗೆ ಸ್ನಾನ  :ನಿಮ್ಮ ಕನಸಿನಲ್ಲಿ ನೀವು ಹಾಲಿನ ಸ್ನಾನವನ್ನು ಮಾಡುವುದನ್ನು ಕಂಡರೆ ಅದು ತುಂಬಾ ಶುಭ ಸಂಕೇತವಾಗಿದೆ.ದೊಡ್ಡ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಎನ್ನುವ ಮುನ್ಸೂಚನೆಯಾಗಿ ಆ ಕನಸು ಬಂದಿರುತ್ತದೆ.ಅಲ್ಲದೆ,ನಿಮ್ಮ ವೃತ್ತಿಜೀವನದಲ್ಲಿ  ಯಶಸ್ಸಿನ ಉತ್ತುಂಗಕ್ಕೆ ಏರಲಿದ್ದೀರಿ ಎನ್ನುವುದನ್ನು ಕೂಡಾ ಇದು ತೋರಿಸುತ್ತದೆ. 


ಇದನ್ನೂ ಓದಿ : ಶುಕ್ರದೆಸೆಯೊಂದಿಗೆ ಕುಬೇರ ರಾಜಯೋಗ!ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಉಕ್ಕಿ ಬರುವುದು ಧನ ಸಂಪತ್ತು!ಸ್ವಂತ ಮನೆ, ವಾಹನ, ಬಡ್ತಿ ಎಲ್ಲಾ ಸುಖವೂ ನಿಮ್ಮದೇ


ಕಮಲದ ಹೂ :ಕಮಲದ ಹೂವು ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾದುದು. ನಿಮ್ಮ ಕನಸಿನಲ್ಲಿ ಕಮಲದ ಹೂವನ್ನು ಕಂಡರೆ,ಲಕ್ಷ್ಮೀ ದೇವಿಯ ಪ್ರವೇಶ ನಿಮ್ಮ ಜೀವನದಲ್ಲಿ ಆಗುತ್ತಿದೆ ಎಂದರ್ಥ.ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಲಿವೆ ಎನ್ನುವುದನ್ನು ಕೂಡಾ ಈ ಕನಸು  ಹೇಳುತ್ತದೆ. 


ಕೊಳಲಿನ ಸದ್ದು :ಕನಸಿನಲ್ಲಿ ಕೊಳಲಿನ ಸದ್ದು ಕೇಳುವುದು ಜೀವನದಲ್ಲಿ ಐಶ್ವರ್ಯ ಮತ್ತು ಮಾಧುರ್ಯವನ್ನು ಹೆಚ್ಚಿಸುವ ಸಂಕೇತವಾಗಿದೆ.ನಿಮ್ಮ ಜೀವನವು ಸಂತೋಷದಿಂದ ತುಂಬಿರುತ್ತದೆ ಎನ್ನುವ ಅಂಶದ ಸೂಚಕ ಈ ಸದ್ದು. 


ಇದನ್ನೂ ಓದಿ:  ರಾಹು-ಕೇತು ಗೋಚಾರ: 2025ರವರೆಗೆ ಈ ರಾಶಿಯವರ ಬದುಕಿನಲ್ಲಿ ಬರೀ ಶುಭವೇ! ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ!


ದೇವಾಲಯದ ಗಂಟೆ ಶಬ್ದ :ಕನಸಿನಲ್ಲಿ ಶಂಖ ಅಥವಾ ದೇವಾಲಯದ ಗಂಟೆಯ ಶಬ್ದವನ್ನು ಕೇಳುವುದು ತುಂಬಾ ಮಂಗಳಕರವಾಗಿದೆ.ಇದು ನಿಮ್ಮ ಮನದ ಆಸೆ ಪೂರೈಸಲಿದೆ ಎನ್ನುವುದನ್ನು ತೋರಿಸುತ್ತದೆ.


ಮಳೆ ನೋಡುವುದು:ಕನಸಿನಲ್ಲಿ ಮಳೆ ಕಂಡರೆ ಆ ವ್ಯಕ್ತಿ ಪಕ್ಕಾ ಸಿರಿವಂತನಾಗುತ್ತಾನೆ ಎಂದರ್ಥ. ಯಾವುದೇ ವ್ಯಕ್ತಿ ಮಳೆಯ ಕನಸನ್ನು ಕಂಡಾಗ ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯಲಿದ್ದಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.