ಏನೇ ಮಾಡಿದರೂ ವ್ಯಾಪಾರ ವ್ಯವಹಾರದಲ್ಲಿ ಲಾಸ್ ಆಗುತ್ತಿದ್ದರೆ, ಬಣ್ಣವನ್ನು ಬಳಸಿ; ಮತ್ತೆ ಪುಟಿದೇಳುವುದು ಆರ್ಥಿಕ ಸ್ಥಿತಿ
ವಾಸ್ತುವಿನಲ್ಲಿ ಹೇಳಲಾದ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ,ವ್ಯವಹಾರದಲ್ಲಿ ಅಪಾರ ಯಶಸ್ಸು ಮತ್ತು ಆರ್ಥಿಕ ಪ್ರಗತಿಯನ್ನು ಕಾಣಬಹುದು.
ಬೆಂಗಳೂರು : ವ್ಯಾಪಾರ, ವ್ಯವಹಾರಗಳಲ್ಲಿಯೂ, ವಾಸ್ತು ಪರಿಣಾಮಕಾರಿಯಾಗಿರುತ್ತದೆ. ಅನೇಕ ಬಾರಿ ವ್ಯಾಪಾರ ಸ್ಥಳದಲ್ಲಿ ವಾಸ್ತು ದೋಷಗಳಿಂದಾಗಿ ಆರ್ಥಿಕ ಪ್ರಗತಿಕಾಣುವುದೇ ಇಲ್ಲ. ವ್ಯಾಪಾರದಲ್ಲಿಯೂ ಆಗಾಗ ನಷ್ಟ ಸಂಭವಿಸುತ್ತದೆ. ಹೀಗಿರುವಾಗ, ವಾಸ್ತುವಿನಲ್ಲಿ ಹೇಳಲಾದ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ,ವ್ಯವಹಾರದಲ್ಲಿ ಅಪಾರ ಯಶಸ್ಸು ಮತ್ತು ಆರ್ಥಿಕ ಪ್ರಗತಿಯನ್ನು ಕಾಣಬಹುದು.
ಬಣ್ಣಗಳಿಗೆ ಪ್ರಾಮುಖ್ಯತೆ :
ವಾಸ್ತು ಶಾಸ್ತ್ರದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿದೆ. ಪ್ರತಿಯೊಂದು ಬಣ್ಣವು ವಿಭಿನ್ನ ಶಕ್ತಿಯನ್ನು ಹೊಂದಿರುತ್ತದೆ. ಇದರಿಂದಾಗಿ ಅವು ವಾಸ್ತು ದೋಷಗಳನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿವೆ. ವಾಸ್ತು ದೋಷಗಳ ಕಾರಣದಿಂದಾಗಿ, ವ್ಯಾಪಾರ, ವ್ಯವಹಾರದ ಪ್ರಗತಿ ನಿಂತು ಹೋಗಿದ್ದರೆ, ಕಪ್ಪು ಬಣ್ಣದ ಬಳಕೆ ಸಹಾಯ ಮಾಡುತ್ತದೆ ಕಪ್ಪು ಬಣ್ಣವನ್ನು ಬಳಸುವ ಮೂಲಕ ವ್ಯಾಪಾರ, ವ್ಯವಹಾರದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಬಹುದು.
ಇದನ್ನೂ ಓದಿ : ದೀಪಾವಳಿಗೆ ಖರೀದಿ ಮಾತ್ರವಲ್ಲ, ಈ ಒಂದು ವಸ್ತುವನ್ನು ದಾನ ಮಾಡಿದರೂ ಒಲಿಯುತ್ತಾಳೆ ಧನಲಕ್ಷ್ಮೀ !
ಕಪ್ಪು ಏಕೆ ಬಳಸಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಕಪ್ಪು ಎಂದರೆ ನೀರು.ಆಗ್ನೇಯ ದಿಕ್ಕಿನಲ್ಲಿ ಸ್ವಲ್ಪ ಪ್ರಮಾಣದ ಕಪ್ಪು ಬಣ್ಣವನ್ನು ಹಚ್ಚುವುದರಿಂದ ಈ ದಿಕ್ಕಿಗೆ ಸಂಬಂಧಿಸಿದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಇದರ ಪರಿಣಾಮವಾಗಿ ವ್ಯಾಪಾರದಲ್ಲಿ ಆರ್ಥಿಕ ಪರಿಸ್ಥಿತಿಯು ಸುಧಾರಿಸಲು ಪ್ರಾರಂಭಿಸುತ್ತದೆ. ವ್ಯಾಪಾರವು ಸಂಪೂರ್ಣವಾಗಿ ಬಳಸಬೇಕು.
ವ್ಯಾಪಾರ ವೃದ್ದಿಗೆ ಅನುಸರಿಸಬಹುದಾದ ಇತರ ಮಾರ್ಗ :
ವ್ಯಾಪಾರದಲ್ಲಿ ಯಶಸ್ಸು ಪಡೆಯಲು ವ್ಯಾಪಾರ ವೃದ್ಧಿ ಯಂತ್ರ, ಕ್ರಿಸ್ಟಲ್ ಟರ್ಟಲ್, ಶ್ರೀ ಯಂತ್ರ ಮತ್ತು ಕ್ರಿಸ್ಟಲ್ ಬಾಲ್ ಇತ್ಯಾದಿಗಳನ್ನು ಮೇಜಿನ ಮೇಲೆ ಇಡಬಹುದು. ಇದಲ್ಲದೆ, ಅಂಗಡಿ, ಕಾರ್ಖಾನೆ ಅಥವಾ ಕಚೇರಿಯಲ್ಲಿ ತಿಳಿ ಕ್ರೀಮ್ ಅಥವಾ ಬಿಳಿ ಬಣ್ಣವನ್ನು ಬಳಸಬಹುದು. ವಾಸ್ತು ಪ್ರಕಾರ, ಈ ಬಣ್ಣಗಳ ಮೂಲಕ ಧನಾತ್ಮಕ ಶಕ್ತಿಯು ಹರಡುತ್ತದೆ. ಇದು ವ್ಯವಹಾರದಲ್ಲಿ ಪ್ರಗತಿಗೆ ಸಹಕಾರಿಯಾಗಿರುತ್ತದೆ.
ಇದನ್ನೂ ಓದಿ : ಈ 3 ಜನ್ಮರಾಶಿಗಳಿಗೆ ಶುಕ್ರದೆಸೆ ಆರಂಭ... ಅದೃಷ್ಟಕ್ಕೆ ಮತ್ತೊಂದು ಹೆಸರಾಗಿ ಬಾಳುವರು; ಇವರಿಗೆ ಶ್ರೀಮಂತಿಕೆ ಒಲಿಯುವ ಕಾಲ ದೂರವಿಲ್ಲ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ