Nail Cutting Astrology :ಉಗುರುಗಳು ಮತ್ತು ಕೂದಲನ್ನು ಕತ್ತರಿಸುವುದು ಸಾಮಾನ್ಯ ವಿಷಯವೆಂದು ತೋರುತ್ತದೆ. ಆದರೆ ಧಾರ್ಮಿಕ ಗ್ರಂಥಗಳಲ್ಲಿ ಇದು ಆರ್ಥಿಕ ಸ್ಥಿತಿ,ಆರೋಗ್ಯ ಮತ್ತು ಅದೃಷ್ಟಕ್ಕೆ ನೇರವಾಗಿ ಸಂಬಂಧಪಟ್ಟ ವಿಷಯವಾಗಿದೆ.ಯಾವ ದಿನ ಬೇಕೋ ಆ ದಿನ ಉಗುರು, ಕೂದಲು ಕತ್ತರಿಸುವಂತಿಲ್ಲ.ಒಂದು ವೇಳೆ ಹಾಗೆ ಮಾಡಿದರೆ ದುರಾದೃಷ್ಟ ಮತ್ತು ಬಡತನ ಜೀವನಕ್ಕೆ ವಕ್ಕರಿಸಿ ಬಿಡುತ್ತದೆ. ಉಗುರುಗಳನ್ನು ಕತ್ತರಿಸಲು ಮಂಗಳಕರವೆಂದು ಪರಿಗಣಿಸಲಾದ ದಿನಗಳಲ್ಲಿ,ಉಗುರುಗಳನ್ನು ಕತ್ತರಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ.ಈ ಕಾರಣಕ್ಕಾಗಿಯೇ ಹಿರಿಯರು ಸಾಮಾನ್ಯವಾಗಿ ಉಗುರುಗಳನ್ನು ಕತ್ತರಿಸಲು ಕೆಲವು ನಿರ್ಬಂಧಗಳನ್ನು ಹಾಕುತ್ತಾರೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯಶಾಸ್ತ್ರದ ಪ್ರಕಾರ,ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ.ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸಿದರೆ, ವ್ಯಕ್ತಿಯ ಹಣ ಹೇಗೆ ಕೈ ಜಾರಿ ಹೋಗುತ್ತದೆ ಎನ್ನುವುದೇ ತಿಳಿಯುವುದಿಲ್ಲವಂತೆ.ಬಡತನ ಸುತ್ತುವರೆದು ಸಾಲದ ಹೊರೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ : ನೀವು ಸಿರಿವಂತರಾಗುವ ದಿನ ಹತ್ತಿರವಾದಾಗಲೇ ಈ ಕನಸುಗಳು ಬೀಳುತ್ತವೆಯಂತೆ ! ಲಕ್ಷ್ಮೀ ಕಟಾಕ್ಷಕ್ಕೂ ಮುನ್ನ ಬೀಳುವ ಕನಸುಗಳು ಇವು !


ಶನಿವಾರದಂದು ಉಗುರುಗಳನ್ನು ಕತ್ತರಿಸುವುದರಿಂದ ಶನಿದೇವ ಕೋಪಗೊಳ್ಳುತ್ತಾನೆ.  ಇದು ಜೀವನದಲ್ಲಿ ಬಡತನ ಮತ್ತು ರೋಗಗಳನ್ನು ಹೆಚ್ಚಿಸುತ್ತದೆ.ಪ್ರಗತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ.ಆಯಸ್ಸು ಕಡಿಮೆಯಾಗುತ್ತದೆ.ಮಂಗಳವಾರವೂ ಉಗುರುಗಳನ್ನು ಕತ್ತರಿಸುವಂತಿಲ್ಲ.ವಿಶೇಷವಾಗಿ ಮಂಗಳವಾರದಂದು ಉಪವಾಸ ಮಾಡುವವರು ಮಂಗಳವಾರದಂದು ಉಗುರು,ಕೂದಲು,ಕ್ಷೌರ ಮಾಡಬಾರದು. ಇದಲ್ಲದೆ,ಗುರುವಾರ ಉಗುರುಗಳನ್ನು ಕತ್ತರಿಸುವುದರಿಂದ ಜೀವನದಲ್ಲಿ ದುಃಖ ಮತ್ತು ದುರದೃಷ್ಟವು ಹೆಚ್ಚಾಗುತ್ತದೆ.ಜ್ಞಾನ ಮತ್ತು ಸಂತೋಷದಲ್ಲಿ ಇಳಿಕೆ ಕಂಡುಬರುತ್ತದೆ. 


ಉಗುರುಗಳನ್ನು ಕತ್ತರಿಸಲು ಶುಭ ದಿನಗಳು : 
ಬುಧವಾರ ಮತ್ತು ಶುಕ್ರವಾರ ಉಗುರುಗಳನ್ನು ಕತ್ತರಿಸಲು ಅತ್ಯಂತ ಮಂಗಳಕರ ದಿನಗಳು.ಈ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.ಸೌಂದರ್ಯ ಮತ್ತು ಆಕರ್ಷಣೆ ಹೆಚ್ಚುತ್ತದೆ.ಜೀವನದಲ್ಲಿ ಪ್ರೀತಿ ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ.  


ಇದನ್ನೂ ಓದಿ : ಶುಕ್ರದೆಸೆಯೊಂದಿಗೆ ಕುಬೇರ ರಾಜಯೋಗ!ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಉಕ್ಕಿ ಬರುವುದು ಧನ ಸಂಪತ್ತು!ಸ್ವಂತ ಮನೆ, ವಾಹನ, ಬಡ್ತಿ ಎಲ್ಲಾ ಸುಖವೂ ನಿಮ್ಮದೇ


ಉಗುರುಗಳನ್ನು ಕತ್ತರಿಸಲು ಸರಿಯಾದ ಸಮಯ : 
ಉಗುರುಗಳನ್ನು ಕತ್ತರಿಸುವ ದಿನದ ಜೊತೆಗೆ ಉಗುರುಗಳನ್ನು ಕತ್ತರಿಸುವ ಸಮಯವೂ ಬಹಳ ಮುಖ್ಯ.ಸಂಜೆ ಅಥವಾ ರಾತ್ರಿ ಉಗುರುಗಳನ್ನು ಎಂದಿಗೂ ಕತ್ತರಿಸಬೇಡಿ. ಸೂರ್ಯಾಸ್ತದ ಸ್ವಲ್ಪ ಮುಂಚೆಯಿಂದ ರಾತ್ರಿಯವರೆಗಿನ ಸಮಯವು ಉಗುರುಗಳನ್ನು ಕತ್ತರಿಸುವುದು ಅಶುಭ. ಸಂಜೆ,ತಾಯಿ ಲಕ್ಷ್ಮಿ ಪರ್ಯಟನೆಗೆ ಹೊರಡುತ್ತಾಳೆ.ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಕೋಪಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಬಡತನವು ತಾಂಡವವಾಡುತ್ತದೆ.ಆದ್ದರಿಂದ,ಉಗುರು ಕತ್ತರಿಸುವ ಕೆಲಸವನ್ನು ಮಧ್ಯಾಹ್ನದೊಳಗೆ ಪೂರ್ಣಗೊಳಿಸಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.