Lord Kuber : ಹಿಂದೂ ಧರ್ಮದಲ್ಲಿ ಕುಬೇರ ದೇವನನ್ನು ಸಂಪತ್ತಿನ ದೇವರು ಎಂದು ಕರೆಯಲಾಗುತ್ತದೆ. ʼಧನ್‌ತೇರಸ್‌ʼ ದಿನದಂದು ಕುಬೇರನನ್ನು ಪೂಜಿಸುವ ಸಂಪ್ರದಾಯವಿದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಎಂತಹುದೇ ಆರ್ಥಿಕ ಸಮಸ್ಯೆ ಇದ್ದರೂ ಸಹ ಅದರಿಂದ ಮುಕ್ತಿ ಪಡೆಯಬಹದು ಎಂಬ ನಂಬಿಕೆ ಇದೆ. 


COMMERCIAL BREAK
SCROLL TO CONTINUE READING

ಇಷ್ಟೇಲ್ಲ ಪ್ರಭಾವ ಶಾಲಿಯಾಗಿರುವ ಕುಬೇರ ದೇವರಿಗೆ ಸಂಪತ್ತಿನ ದೇವರು ಎಂಬ ಹೆಸರು ಹೇಗೆ ಬಂತು ಅಂತ ಎಂದಾದರೂ ನೀವು ಯೋಚನೆ ಮಾಡಿದ್ದೀರಾ..? ಸಂಪತ್ತಿನ ದೇವರು ಕುಬೇರ ಯಾರು ಮತ್ತು ಈ ಬಿರುದು ಹೇಗೆ ಬಂತು ಎನ್ನುವ ಹಿನ್ನೆಲೆಯನ್ನು ಸಧ್ಯ ತಿಳಿಯೋಣ ಬನ್ನಿ.


ಇದನ್ನೂ ಓದಿ:ಈ ರಾಶಿಯ ಜನರ ಬಾಳಲ್ಲಿ ದೀಪಾವಳಿ ತರಲಿದೆ ಸಂತೋಷ-ಸಮೃದ್ಧಿ: ಲಕ್ಷ್ಮೀದೇವಿ ಅನುಗ್ರಹದಿಂದ ಸಿರಿಸಂಪತ್ತಿನ ಸುಧೆಯೇ ಹರಿದುಬರಲಿದೆ


ಸಂಪತ್ತಿನ ದೇವರು ಕುಬೇರ ಯಾರು..? : ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತಿನ ದೇವರು ಕುಬೇರನನ್ನು ಲಂಕಾಧಿಪತಿ ರಾವಣನ ಅರ್ಧ ಸಹೋದರ ಎಂದು ಪರಿಗಣಿಸಲಾಗುತ್ತದೆ. ರಾವಣನ ಮರಣದ ನಂತರ, ಕುಬೇರನನ್ನು ರಾಕ್ಷಸರ ಹೊಸ ಚಕ್ರವರ್ತಿ ಎಂದು ಪರಿಗಣಿಸಲಾಯಿತು. ಅಷ್ಟೇ ಅಲ್ಲ, ಕುಬೇರ ದೇವನು ಮನೆಯ ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಭಗವಾನ್ ಶಿವನ ಮಹಾನ್ ಭಕ್ತ ಮತ್ತು ಒಂಬತ್ತು ನಿಧಿಗಳ ದೇವರು. ಕುಬೇರ ದೇವನನ್ನು ಸಂಪತ್ತಿನ ದೇವರಾಗಿಸುವ ಹಿಂದೆ ಧರ್ಮಗ್ರಂಥಗಳಲ್ಲಿ ಅನೇಕ ಕಥೆಗಳಿವೆ. ಈತ ತನ್ನ ಹಿಂದಿನ ಜನ್ಮದಲ್ಲಿ ಕಳ್ಳನಾಗಿದ್ದನೆಂಬ ನಂಬಿಕೆಯೂ ಇದೆ. 


ಸ್ಕಂದ ಪುರಾಣ ಏನು ಹೇಳುತ್ತದೆ? : ಸ್ಕಂದ ಪುರಾಣದ ಪ್ರಕಾರ, ಕುಬೇರ ದೇವನು ತನ್ನ ಹಿಂದಿನ ಜನ್ಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದನಂತೆ. ಅವನ ಮೊದಲ ಹೆಸರು ಗುಣನಿಧಿ. ಹೆಸರಿಗೆ ವಿರುದ್ಧವಾಗಿ ಆತ ಕಳ್ಳತನ ಮಾಡುತ್ತಿದ್ದ. ಈ ವಿಷಯ ತಂದೆಗೆ ತಿಳಿದಾಗ ಆತನನ್ನು ಮನೆಯಿಂದ ಹೊರ ಹಾಕಿದ್ದರಂತೆ. ನಿರಾಶ್ರಿತನಾದ ಗುಣನಿಧಿ ಶಿವ ದೇವಾಲಯದಲ್ಲಿ ಪ್ರಸಾದವನ್ನು ಕದಿಯಲು ಪ್ರಾರಂಭಿಸಿದ. ಒಮ್ಮೆ ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದು ಗುಣನಿಧಿ ಅರ್ಚಕರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಶಿವ ಲಿಂಗದ ಪಕ್ಕದಲ್ಲಿ ಹಚ್ಚಿದ್ದ ದೀಪದ ಮೇಲೆ ವಸ್ತ್ರವನ್ನು ಹಾಕಿದ್ದ. ಆದರೆ ಕೊನೆಗೂ ಸಿಕ್ಕಿ ಬಿದ್ದು ಸಾವನ್ನಪ್ಪಿದ್ದ


ಇದನ್ನೂ ಓದಿ:ದೀಪಾವಳಿ ದಿನ ಮನೆಯಲ್ಲಿ ಹಲ್ಲಿ ಕಂಡರೆ ತಕ್ಷಣ ಈ ಕೆಲಸ ಮಾಡಿ: ಸಾಕ್ಷಾತ್ ಮಹಾಲಕ್ಷ್ಮಿಯೇ ಒಲಿದು ವರ ನೀಡಿ ಸದಾ ಹರಸುವಳು!


ಮರಣಾನಂತರ ಯಮದೂತರು ಗುಣನಿಧಿಯನ್ನು ಕರೆತರುತ್ತಿದ್ದಾಗ ಅತ್ತ ಕಡೆಯಿಂದ ಶಿವನ ದೂತರೂ ಬಂದು ಗುಣನಿಧಿಯನ್ನು ಶಿವನ ಹತ್ತಿರ ಕರೆದೊಯ್ಯುತ್ತಾರೆ. ಆ ಸಮಯದಲ್ಲಿ, ಶಂಕರ ಗುಣನಿಧಿಯು ಉರಿಯುತ್ತಿರುವ ದೀಪದ ಮೇಲೆ ಟವೆಲ್ ಅನ್ನು ಹರಡಿ ಅದನ್ನು ನಂದಿಸದಂತೆ ತಡೆದಿದ್ದ ಎಂದು ಭಾವಿಸಿದ್ದನು. ಇದರಿಂದ ಸಂತುಷ್ಟನಾದ ಭೋಲೇನಾಥನು ಅವನಿಗೆ ಕುಬೇರನೆಂಬ ಬಿರುದನ್ನು ನೀಡಿ, ಸಂಪತ್ತಿನ ಭಂಡಾರಿಯಾಗುವ ವರವನ್ನೂ ದಯಪಾಲಿಸಿದ ಎಂದು ಹೇಳಲಾಗುತ್ತದೆ.


ಈ ಮಂತ್ರಗಳನ್ನು ಜಪಸಿದರೆ ಆರ್ಥಿಕ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.


ಓಂ ಶ್ರೀಂ ಕುಬೇರಾಯ ನಮಃ. 
ಅನೇನ ಪೂಜನೇನ ಶ್ರೀ ಧನಾಧ್ಯಕ್ಷ-ಶ್ರೀ ಕುಬೇರ ಪ್ರೀಯತಾಂ. ನಮೋ ನಮಃ ।


''ಓಂ ಅಕ್ಷಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ,
ಧನಧಾನ್ಯಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ||''


''ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ - ಲಕ್ಷ್ಮಿ ಮಮ ಗೃಹೇ ಧನಂ ಪುರಯ ಪುರಯ ನಮಃ''


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.