Bhadra Raja Yoga: ದೀಪಾವಳಿಗೂ ಮುನ್ನ ಈ 4 ರಾಶಿಯವರ ಅದೃಷ್ಟ ಬೆಳಗಿಸಲಿದ್ದಾನೆ ಬುಧ
Bhadra Raja Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳನ್ನು ಶುಭ ಯೋಗಗಳು ಎಂದು ಹೇಳಲಾಗುತ್ತದೆ. ಅಂತಹ ಶುಭ ಯೋಗಗಳಲ್ಲಿ ಭದ್ರಾ ರಾಜಯೋಗವೂ ಒಂದು.
Bhadra Raja Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ರಾಜಕುಮಾರ ಎಂತಲೇ ಕರೆಯಲ್ಪಡುವ ಬುಧ ಗ್ರಹವು ದೀಪಾವಳಿಗೂ ಮೊದಲು ತನ್ನ ರಾಶಿಚಕ್ರನ್ನು ಬದಲಾಯಿಸಲಿದೆ. ಅಕ್ಟೋಬರ್ ಮಾಸದಲ್ಲಿ ಬುಧನು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಕನ್ಯಾ ರಾಶಿಯಲ್ಲಿ ಬುಧನ ರಾಶಿ ಪರಿವರ್ತನೆಯಿಂದ ಶುಭಕರ ಭದ್ರ ರಾಜಯೋಗ ನಿರ್ಮಾಣವಾಗಲಿದೆ.
ದೀಪಗಳ ಹಬ್ಬ ದೀಪಾವಳಿಗೂ ಮೊದಲು ಬುಧ ಸಂಚಾರದಿಂದ ರೂಪುಗೊಳ್ಳಲಿರುವ ಭದ್ರ ರಾಜಯೋಗವು ಕೆಲವು ರಾಶಿಯವರ ಮಲಗಿರುವ ಅದೃಷ್ಟವನ್ನೂ ಜಾಗೃತಗೊಳಿಸಲಿದೆ. ಇದರಿಂದ ಅವರ ಜೀವನದಲ್ಲಿ ಸುಖ, ಶಾಂತಿಯ ಜೊತೆಗೆ ಸಂಪತ್ತಿನ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ದೀಪಾವಳಿಗೊ ಮೊದಲು ಈ 4 ರಾಶಿಯವರ ಮಲಗಿರುವ ಅದೃಷ್ಟವನ್ನೂ ಎಚ್ಚರಗೊಳಿಸಲಿದ್ದಾನೆ ಬುಧ:
ಮಿಥುನ ರಾಶಿ:
ಬುಧ ಸಂಚಾರದಿಂದ ನಿರ್ಮಾಣವಾಗಲಿರುವ ಭದ್ರ ರಾಜಯೋಗವು ಮಿಥುನ ರಾಶಿಯವರಿಗೂ ಸಹ ಲಾಭದಾಯಕ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ಹಠಾತ್ ಧನಾಗಮನ ಸಾಧ್ಯತೆ ಇದ್ದು, ಸಂಪತ್ತು ಹೆಚ್ಚಾಗಲಿದೆ. ನೀವು ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿದ್ದರೆ ಇದು ಶುಭ ಸಮಯವಾಗಿದೆ.
ಇದನ್ನೂ ಓದಿ- Dhana Lakshmi Yoga: ಈ 5 ರಾಶಿಯವರಿಗೆ ಅದೃಷ್ಟದ ಬೆಂಬಲ, ಸಂಪತ್ತು ವೃದ್ಧಿ
ಸಿಂಹ ರಾಶಿ:
ಬುಧ ರಾಶಿ ಪರಿವರ್ತನೆಯಿಂದ ನಿರ್ಮಾಣವಾಗಲಿರುವ ಭದ್ರ ರಾಜಯೋಗವು ಸಿಂಹ ರಾಶಿಯವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಆರ್ಥಿಕ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಭೂಮಿ-ವಾಹನ ಖರೀದಿ ಯೋಗವೂ ಇದೆ.
ಕನ್ಯಾ ರಾಶಿ:
ಸ್ವ ರಾಶಿಯಲ್ಲಿ ಬುಧ ರಾಶಿ ಪರಿವರ್ತನೆಯಿಂದ ನೀರ್ಮಾನವಾಗಲಿರುವ ಭದ್ರ ರಾಜಯೋಗವು ಈ ರಾಶಿಯವರ ಜೀವನದ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ಹಣಕಾಸಿನ ದಿಢೀರ್ ಆಗಮನವು ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ. ಮಾತ್ರವಲ್ಲದೆ, ಉದ್ಯೋಗ-ವ್ಯವಹಾರದಲ್ಲಿಯೂ ಯಶಸ್ಸು ನಿಮ್ಮದಾಗಲಿದೆ.
ಇದನ್ನೂ ಓದಿ- Lucky Painting: ನಿಮ್ಮ ಮಲಗಿರುವ ಅದೃಷ್ಟವನ್ನೂ ಬಡಿದೆಬ್ಬಿಸುತ್ತದೆ ಮನೆಯಲ್ಲಿರುವ ಈ ಚಿತ್ರಗಳು
ಮೀನ ರಾಶಿ:
ಶುಭಕರ ಭದ್ರ ರಾಜಯೋಗವು ಮೀನ ರಾಶಿಯವರಿಗೆ ವ್ಯಾಪಾರದಲ್ಲಿ ಬಂಪರ್ ಲಾಭವನ್ನು ತರಲಿದೆ. ಇದರಿಂದ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲೆಸಲಿದೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆಯೂ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.