Budha Uday Bhadra Rajayoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತು, ಬುದ್ಧಿವಂತಿಕೆ, ವ್ಯವಹಾರ, ಮಾತು, ತರ್ಕಶಾಸ್ತ್ರದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಗ್ರಹಗಳ ರಾಜಕುಮಾರ ಬುಧನು ಶೀಘ್ರದಲ್ಲೇ ಉದಯಿಸಲಿದ್ದಾನೆ. ಸದ್ಯ ಆಸ್ತಮ ಸ್ಥಿತಿಯಲ್ಲಿರುವ ಬುಧನು ಇದೆ ಜುಲೈ 11ರಂದು ಮಿಥುನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರೊಂದಿಗೆ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಭದ್ರ ರಾಜಯೋಗವೂ ರೂಪುಗೊಳ್ಳುತ್ತಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಬುಧ ಉದಯದಿಂದ ನಿರ್ಮಾಣಗೊಳ್ಳುತ್ತಿರುವ ಭದ್ರ ರಾಜಯೋಗವು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೂ, ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ಬಂಗಾರದಂತ ಸಮಯ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- ಈ ರಾಶಿಗಳ ಮೇಲೆ ಸಂಪತ್ತಿನ ಮಳೆ ಸುರಿಸಲಿದ್ದಾನೆ ಸೂರ್ಯ ದೇವ.. ಇನ್ಮೇಲೆ ಮುಟ್ಟಿದ್ದೆಲ್ಲಾ ಚಿನ್ನ!


ಮಿಥುನ ರಾಶಿಯಲ್ಲಿ ಬುಧನ ಉದಯದಿಂದ ತೆರೆಯಲಿದೆ ಮೂರು ರಾಶಿಯವರ ಅದೃಷ್ಟದ ಬಾಗಿಲು: 
ಕನ್ಯಾ ರಾಶಿ: 

ಬುಧನ ಉದಯದಿಂದ ನಿರ್ಮಾಣವಾಗಲಿರುವ ಭದ್ರ ರಾಜಯೋಗವು ಕನ್ಯಾ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಕನ್ಯಾ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ಭಾರೀ ಲಾಭವಾಗಲಿದ್ದು ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ಮಾಧ್ಯಮ, ಬರವಣಿಗೆ ಅಥವಾ ಕಲಾ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರಿಗೆ ಹೆಚ್ಚಿನ ಲಾಭವಾಗಲಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಆಗಲಿದೆ. 


ಸಿಂಹ ರಾಶಿ: 
ಶುಭಕರ ಭದ್ರ ರಾಜಯೋಗವು ಸಿಂಹ ರಾಶಿಯವರಿಗೆ ತುಂಬಾ ಮಂಗಲಕರ ಎಂದು ಸಾಬೀತುಪಡಿಸಲಿದೆ. ಈ ಶುಭಕರ ರಾಜಯೋಗವು ಸಿಂಹ ರಾಶಿಯವರಿಗೆ ವಿತ್ತೀಯ ಲಾಭವನ್ನು ತರಲಿದೆ. ಈ ವೇಳೆ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿದ್ದು, ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ನಿಮ್ಮ ಬಹುದಿನದ ಆಸೆಯಂತೆ ನೀವು ಜನಪ್ರಿಯ ಕಂಪನಿಗೆ ಸೇರಬಹುದು. ಇದು ನಿಮ್ಮ ವೃತ್ತಿ ರಂಗದಲ್ಲಿ ಒಂದು ಒಳ್ಳೆಯ ಹಂತ ಎಂತಲೇ ಹೇಳಬಹುದು. 


ಇದನ್ನೂ ಓದಿ- Mangal Gochara: ಸೂರ್ಯನ ರಾಶಿಯಲ್ಲಿ ಮಂಗಳನ ಪ್ರವೇಶ ಈ 4 ರಾಶಿಯವರಿಗೆ ಅದೃಷ್ಟ


ಧನು ರಾಶಿ: 
ಬುಧ ಉದಯದಿಂದ ರೂಪುಗೊಂಡ ಭದ್ರ ರಾಜಯೋಗವು ಧನು ರಾಶಿಯವರಿಗೆ ಬಂಪರ್ ಪ್ರಯೋಜನವನ್ನು ನೀಡಲಿದೆ. ಭದ್ರ ರಾಜಯೋಗದಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷದ ಹೊಳೆಯೇ ಹರಿಯಲಿದ್ದು, ವೃತ್ತಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗವನ್ನು ಏರುವಿರಿ. ಸ್ವಂತ ವ್ಯಾಪಾರ-ವ್ಯವಹಾರ ಮಾಡುವವರಿಗೆ ಅತ್ಯುತ್ತಮ ಸಮಯ ಇದಾಗಿದ್ದು ಹೆಚ್ಚಿನ ಲಾಭವನ್ನು ಗಳಿಸುವಿರಿ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.