Budha Asta In Vrushabha Rashi Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುಧನು ಜಾತಕದಲ್ಲಿ ಪ್ರಬಲನಾಗಿದ್ದಾಗ ಆ ವ್ಯಕ್ತಿಯು ತೀಕ್ಷ್ಣವಾದ ಬುದ್ಧಿವಂತಿಕೆ, ಉತ್ತಮ ಆರೋಗ್ಯ ಮತ್ತು ಜೀವನದಲ್ಲಿ ತೃಪ್ತಿಯನ್ನು ಅನುಭವಿಸುತ್ತಾನೆ. ಮಾತ್ರವಲ್ಲ, ಉದ್ಯೋಗ, ವ್ಯವಹಾರದಲ್ಲಿ ಯಶಸ್ಸಿನ ಉತ್ತುಂಗವನ್ನು ಏರುತ್ತಾನೆ. ಅದೇ ರೀತಿ ಜಾತಕದಲ್ಲಿ ಬುದ್ಧನ ಅಶುಭ ಸ್ಥಾನವು ವ್ಯಕ್ತಿಗೆ ಭಾರೀ ನಷ್ಟವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ತರ್ಕ, ಬುದ್ದಿವಂತಿಕೆಯ ಅಂಶ ಎಂದು ಹೇಳಲಾಗುವ ಬುಧನು ಜೂನ್ 19 ರಂದು ವೃಷಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಈ ಸಂದರ್ಭದಲ್ಲಿ ಬುಧನು ನಾಲ್ಕು ರಾಶಿಯವರ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಲ್ಲಿದ್ದಾನೆ. ಅದರಲ್ಲೂ ಮುಖ್ಯವಾಗಿ, ಅವರ ಏಕಾಗ್ರತೆಯ ಮೇಲೆ ಪರಿಣಾಮ ಬೀರುವ ಬುಧ ಮಾನಸಿಕ ಒತ್ತಡವನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ... 


ವೃಷಭ ರಾಶಿಯಲ್ಲಿ ಬುಧ ಅಸ್ತ: ಈ ನಾಲ್ಕು ರಾಶಿಯವರಿಗೆ ಭಾರೀ ನಷ್ಟ: 
ವೃಷಭ ರಾಶಿ: 

ಸ್ವ ರಾಶಿಯಲ್ಲಿಯೇ ಬುಧ ಅಸ್ತಮಿಸಲಿರುವುದರಿಂದ ಈ ರಾಶಿಯವರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಇದ್ದಕ್ಕಿದ್ದಂತೆ ಆದಾಯಕ್ಕಿಂತ ಖರ್ಚು ಭಾರೀ ಹೆಚ್ಚಾಗಲಿದ್ದು ಆರ್ಥಿಕ ಮುಗ್ಗಟ್ಟು ತಲೆದೂರಲಿದೆ. ಇದಲ್ಲದೆ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಇರುವುದರಿಂದ ನೀವು ಮಾನಸಿಕವಾಗಿ ಕುಗ್ಗಬಹುದು. ಕೆಲವು ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿರುವುದರಿಂದ ಎಚ್ಚರಿಕೆಯಿಂದ ಇರಿ. 


ಪರಿಹಾರ: ನಿತ್ಯ 11 ಬಾರಿ 'ಓಂ ನಮೋ ನಾರಾಯಣ' ಎಂದು ಜಪಿಸಿ. 


ಇದನ್ನೂ ಓದಿ- Surya Grahan: ಈ 5 ರಾಶಿಯವರಿಗೆ ತುಂಬಾ ಅಪಾಯಕಾರಿ ವರ್ಷದ ಕೊನೆಯ ಸೂರ್ಯಗ್ರಹಣ


ಕರ್ಕಾಟಕ ರಾಶಿ: 
ಅಸ್ತಮಿಸಲಿರುವ ಬುಧನು ಕರ್ಕಾಟಕ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಮಸ್ಯೆಗಳನ್ನು ತಂದೊಡ್ಡಲಿದ್ದು, ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೂ ಕೂಡ ದೊಡ್ಡ ಆರ್ಡರ್ ಕೈತಪ್ಪಬಹುದು. ಇದಲ್ಲದೆ, ಚರ್ಮಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಕಾಡಬಹುದು.


ಪರಿಹಾರ: ಪ್ರತಿದಿನ 11 ಬಾರಿ "ಓಂ ಸೋಮೇ ನಮಃ" ಎಂದು ಜಪಿಸಿ.


ತುಲಾ ರಾಶಿ: 
ಬುಧ ಅಸ್ತಮದಿಂದ ತುಲಾ ರಾಶಿಯವರ ಖರ್ಚುಗಳು ಕೂಡ ಹೆಚ್ಚಾಗಲಿವೆ. ಹಣಕಾಸಿನ ನಷ್ಟ ಸಾಧ್ಯತೆ ಇರುವುದರಿಂದ ಯೋಚಿಸಿ ಖರ್ಚು ಮಾಡಿ. ವೃಷಭ ರಾಶಿಯಲ್ಲಿ ಅಸ್ತಮಿಸಲಿರುವ ಬುಧನು ನರಗಳು ಮತ್ತು ತಲೆನೋವಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಬಣಿಸಬಹುದು. 


ಪರಿಹಾರ: ಪ್ರತಿದಿನ 11 ಬಾರಿ "ಓಂ ದುರ್ಗಾಯ ನಮಃ" ಎಂದು ಜಪಿಸಿ.


ಇದನ್ನೂ ಓದಿ- ಜೂನ್ ನಲ್ಲಿ ಪ್ರಮುಖ ಗ್ರಹ ಸಂಕ್ರಮಣ! ಈ 3 ರಾಶಿಯವರಿಗೆ ವಿಶೇಷ ಲಾಭ


ಮೀನ ರಾಶಿ: 
ಬುಧ ಆಸ್ತಮ ಮೀನ ರಾಶಿಯ ಹೊರಗುತ್ತಿಗೆ ಅಥವಾ ವಿದೇಶಿ ವಿಧಾನಗಳ ಮೂಲಕ ಹಣವನ್ನು ಗಳಿಸುವವರಿಗೆ ಕಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಇದಲ್ಲದೆ, ಕೌಟುಂಬಿಕ ವಿಚಾರಗಳಲ್ಲೂ ಕೂಡ ಕೆಲವು ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. 


ಪರಿಹಾರ: ಪ್ರತಿದಿನ 21 ಬಾರಿ 'ಓಂ ಗಂ ಗಣಪತಯೇ ನಮಃ' ಎಂದು ಜಪಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.