Budha Dosh Remedies: ಬುಧ ದೋಷದಿಂದ ಮುಕ್ತಿ ಪಡೆಯಲು ಸರಳ ಪರಿಹಾರಗಳು
Budha Dosh Remedies: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ರಾಜಕುಮಾರ ಬುಧನು ದುರ್ಬಲನಾಗಿದ್ದಾಗ ಜೀವನವು ನಾನಾ ರೀತಿಯ ಸಂಕಷ್ಟಗಳಿಂದ ಆವರಿಸುತ್ತದೆ. ಬುಧವಾರದಂದು ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು.
Budha Dosh Remedies: ವೈದಿಕ ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಯಾವುದೇ ಗ್ರಹವು ದುರ್ಬಲಗೊಂಡಾಗ, ಅದು ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಜಾತಕದಲ್ಲಿ ಗ್ರಹಗಳ ರಾಜಕುಮಾರನಾದ ಬುಧ ಗ್ರಹವು ದುರ್ಬಲವಾಗಿದ್ದಾಗ ವ್ಯಕ್ತಿಯು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬುಧನು ಮಾತು, ಸಂವಹನವನ್ನು ಪ್ರತಿನಿಧಿಸುವ ಗ್ರಹ. ಹಾಗಾಗಿ, ಜಾತಕದಲ್ಲಿ ಬುಧ ದುರ್ಬಲನಾಗಿದ್ದಾಗ ವ್ಯಕ್ತಿಯು ತನ್ನ ಬುದ್ದಿಯನ್ನು, ಆಲೋಚನೆಗಳನ್ನು ನಿಗ್ರಹಿಸಲು ಸಾಧಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಜಾತಕದಲ್ಲಿ ದುರ್ಬಲ ಬುಧನು ಯಾವ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ. ದುರ್ಬಲ ಬುಧನನ್ನು ಬಲಪಡಿಸುವುದು ಹೇಗೆ, ಯಾವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬುಧ ದೋಷದಿಂದ ಮುಕ್ತಿ ಪಡೆಯಬಹುದು ಎಂದು ತಿಳಿಯಿರಿ.
ಇದನ್ನೂ ಓದಿ- Shani Gochar 2023: 30 ವರ್ಷಗಳ ಬಳಿಕ ಈ ರಾಶಿಯವರಿಗೆ ವಿಶೇಷ ಕೃಪೆ ತೋರಲಿದ್ದಾನೆ ಶನಿ ದೇವ
ಜಾತಕದಲ್ಲಿ ದುರ್ಬಲ ಬುಧನಿಂದ ಈ ರೀತಿಯ ಸಮಸ್ಯೆಗಳು ಉದ್ಭವಿಸಬಹುದು:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ದುರ್ಬಲನಾಗಿರುವ ಬುಧ ವ್ಯಕ್ತಿ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾನೆ. ಇದರಿಂದಾಗಿ, ವ್ಯಕ್ತಿಯು ಯಾವುದೇ ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಬುಧನು ಬಲಹೀನನಾಗಿದ್ದಾಗ ವ್ಯಕ್ತಿಯ ಆತ್ಮಸ್ಥೈರ್ಯ ಕಡಿಮೆಯಾಗುತ್ತದೆ.
ಬುಧನನ್ನು ಬುದ್ದಿವಂತಿಕೆ, ಮಾತು, ಸೌಂದರ್ಯ ಮತ್ತು ಸಂಪತ್ತಿನ ಅಂಶವೆಂದು ಪರಿಗಣಿಸಲಾಗಿದೆ. ಹಾಗಾಗಿ, ಜಾತಕದಲ್ಲಿ ಬುಧನ ಬಲಹೀನತೆಯು ವ್ಯಕ್ತಿಯ ಹಣಕಾಸಿನ ಸ್ಥಿತಿಯನ್ನು ಕುಗ್ಗಿಸುತ್ತದೆ.
ಬುಧ ದೋಷದಿಂದ ವ್ಯಕ್ತಿ ಸಾಲದಲ್ಲಿ ಮುಳುಗುವನ್ತಾಗುತ್ತದೆ.
ಜಾತಕದಲ್ಲಿ ದುರ್ಬಲನಾಗಿರುವ ಬುಧನು ಸ್ತ್ರೀಯರೊಂದಿಗೆ ವ್ಯಕ್ತಿಯ ಸಂಬಂಧವನ್ನು ಹಾಳು ಮಾಡುತ್ತದೆ.
ಇದನ್ನೂ ಓದಿ- Rahu Transit Effect: 2023ರಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾನೆ ರಾಹು
ಬುಧ ದೋಷದಿಂದ ಮುಕ್ತಿ ಪಡೆಯಲು ಈ ಪರಿಹಾರಗಳನ್ನು ಕೈಗೊಳ್ಳಿ:
ಜಾತಕದಲ್ಲಿ ದುರ್ಬಲನಾಗಿರುವ ಬುಧ ಗ್ರಹವನ್ನು ಬಲಪಡಿಸಲು ಬುಧವಾರವನ್ನು ತುಂಬಾ ಪ್ರಾಶಸ್ತ್ಯ ಎಂದು ಪರಿಗಣಿಸಲಾಗಿದೆ. ಬುಧವಾರದ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಬುಧ ದೋಷದಿಂದ ಮುಕ್ತಿ ಹೊಂದಬಹುದು ಎಂದು ಹೇಳಲಾಗುತ್ತದೆ.
ಬುಧ ದೋಷ ನಿವಾರಣೆಗೆ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ:
* ಯಾವ ವ್ಯಕ್ತಿಗೆ ಬುಧ ದೋಷವಿದೆಯೋ ಅವರು ಬುಧವಾರದಂದು ಗಣೇಶನನ್ನು ವಿಧಿ ವಿಧಾನಗಳೊಂದಿಗೆ ಪೂಜಿ
* ಸಾಧ್ಯವಾದರೆ ಈ ದಿನ ಗಣೇಶನ ದೇವಸ್ಥಾನಕ್ಕೆ ಹೋಗಿ ಬನ್ನಿ.
* ನಿರ್ಗತಿಕರಿಗೆ ಹಾಗೂ ಅಗತ್ಯವಿರುವವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ.
* ಬುಧವಾರದಂದು ತೃತೀಯ ಲಿಂಗಿಗಳನ್ನು ಕಂಡರೆ ನಿಮ್ಮ ಕೈಲಾದಷ್ಟು ಧನ ಸಹಾಯ ಮಾಡಿ.
* ಬುಧವಾರದಂದು ತುಳಸಿ ಗಿಡವನ್ನು ನೆಟ್ಟು ನಿತ್ಯ ತುಳಸಿ ಮಾತೆಗೆ ಪೂಜೆ ಸಲ್ಲಿಸಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.