Rahu Transit Effect 2023: ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹದ ಚಲನ-ವಲನಗಳು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಕರ್ಮಫಲದಾತ ಶನಿ ಮತ್ತು ಪಾಪ ಗ್ರಹಗಳು, ಕ್ರೂರ ಗ್ರಹಗಳು ಎಂದು ಕರೆಯಲ್ಪಡುವ ರಾಹು ಮತ್ತು ಕೇತು ಗ್ರಹಗಳ ಸಂಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ದೇವ, ರಾಹು-ಕೇತುಗಳು ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವು ಸಂಕಷ್ಟಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2023ರಲ್ಲಿ ಅಕ್ಟೋಬರ್ 30, ಸೋಮವಾರ ಮಧ್ಯಾಹ್ನ 1.33ಕ್ಕೆ ಕ್ರೂರ ಗ್ರಹ ರಾಹು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹುವಿನ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಇದೇ ಸಮಯದಲ್ಲಿ ರಾಹು ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ.
ಇದನ್ನೂ ಓದಿ- Shani Deva: ಜನವರಿ 16ರವರೆಗೆ ಈ ರಾಶಿಯವರಿಗೆ ಶನಿ ಕೃಪೆಯಿಂದ ಗೋಲ್ಡನ್ ಡೇಸ್
2023ರಲ್ಲಿ ಈ ರಾಶಿಯವರ ಮೇಲೆ ರಾಹು ವಕ್ರ ದೃಷ್ಟಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 2023 ರಲ್ಲಿ ಸಂಭವಿಸಲಿರುವ ರಾಹು ಸಂಚಾರದಿಂದ ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಮತ್ತು ಮಕರ ರಾಶಿಯವರ ಜೀವನದಲ್ಲಿ ರಾಹುವಿನ ಕೆಟ್ಟ ದೃಷ್ಟಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಈ ನಾಲ್ಕು ರಾಶಿಯವರು ಬಹಳ ಸಂಯಮದಿಂದ ಇರಬೇಕು. ಇಲ್ಲದಿದ್ದರೆ, ಜೀವನದಲ್ಲಿ ಪ್ರತಿ ಹಂತದಲ್ಲೂ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು ಎನ್ನಲಾಗುವುದು.
ಇದನ್ನೂ ಓದಿ- Grah Gochar 2023: ಜನವರಿಯಲ್ಲಿ ಶನಿ ಸೇರಿದಂತೆ 5 ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಸಂಕಷ್ಟ
ರಾಹು ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಅದೃಷ್ಟ:
ಮೀನ ರಾಶಿಯಲ್ಲಿ ರಾಹುವಿನ ಪ್ರವೇಶವು ಮಿಥುನ ರಾಶಿ, ಕರ್ಕಾಟಕ ರಾಶಿ, ಕುಂಭ ರಾಶಿ, ಮೀನ ರಾಶಿಯವರಿಗೆ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ. ರಾಹುವಿನ ರಾಶಿ ಬದಲಾವಣೆಯಿಂದ ದಿಢೀರ್ ಧನಲಾಭ ಉಂಟಾಗಲಿದೆ. ಇದಲ್ಲದೆ, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರ ವೃದ್ಧಿ, ಮನೆ ಮತ್ತು ವಾಹನವನ್ನು ಖರೀದಿಸುವ ಯೋಗವಿದೆ ಎಂದು ಹೇಳಲಾಗುತ್ತಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.