Budha Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುದ್ಧಿವಂತಿಕೆ, ಮಾತು, ವ್ಯವಹಾರ ಮತ್ತು ಸಂವಹನದ ಅಂಶವೆಂದು ಪರಿಗಣಿಸಲಾಗಿರುವ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂತಲೂ ಕರೆಯಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಬುಧನು ಶುಭ ಸ್ಥಾನದಲ್ಲಿದ್ದಾಗ ಆತ ತನ್ನ ವಾಕ್ಚಾತುರ್ಯದಿಂದಲೇ ಭಾರೀ ಯಶಸ್ಸನ್ನು ಸಾಧಿಸುತ್ತಾನೆ. 


COMMERCIAL BREAK
SCROLL TO CONTINUE READING

ಹಿಂದೂ ಕ್ಯಾಲೆಂಡರ್ ಪ್ರಕಾರ, ಸದ್ಯ ಕನ್ಯಾ ರಾಶಿಯಲ್ಲಿರುವ ಗ್ರಹಗಳ ರಾಜಕುಮಾರ ಬುಧನು ನಾಳೆ ಎಂದರೆ ಅಕ್ಟೋಬರ್ 19, 2023ರಂದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 19 ರಂದು ಬೆಳಿಗ್ಗೆ 01:16ಕ್ಕೆ ಬುಧನ ರಾಶಿ ಪರಿವರ್ತನೆ ನಡೆಯಲಿದೆ. ಇದಾದ ಎರಡೇ ದಿನಗಳಲ್ಲಿ ಅಕ್ಟೋಬರ್ 22ರಂದು ಸ್ವಾತಿ ನಕ್ಷತ್ರಕ್ಕೆ ಪ್ರವೇಶಿಸಲಿರುವ ಬುಧನು, ಈ ತಿಂಗಳಾಂತ್ಯದಲ್ಲಿ ವಿಶಾಖ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ. 


ಈ ರೀತಿಯಾಗಿ ಬುಧನ ಸಂಚಾರದಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಧನಾತ್ಮಕ-ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಲಿದೆ. ಆದಾಗ್ಯೂ, ನಾಳೆ ತುಲಾ ರಾಶಿಗೆ ಪ್ರವೇಶಿಸಲಿರುವ ಬುಧನು ಐದು ರಾಶಿಯವರ ಬದುಕಿನಲ್ಲಿ ಭಾಗ್ಯೋದಯವನ್ನು ತರಲಿದ್ದಾನೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Rahu-Ketu Gochar: 13 ದಿನಗಳ ಬಳಿಕ ಈ ರಾಶಿಯವರಿಗೆ ರಾಹು-ಕೇತು ಕಾಟದಿಂದ ಸಿಗಲಿದೆ ಮುಕ್ತಿ


ಅಕ್ಟೋಬರ್ 19ರಂದು ತುಲಾ ರಾಶಿಗೆ ಬುಧನ ಪ್ರವೇಶ: 5 ರಾಶಿಯವರಿಗೆ ಗೋಲ್ಡನ್ ಟೈಮ್:- 
ಮಿಥುನ ರಾಶಿ: 

ಬುಧ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. 
ಈ ಸಮಯದಲ್ಲಿ ಉದ್ಯೋಗ ವ್ಯವಹಾರದಲ್ಲಿ ಹಣಕಾಸಿನ ಹರಿವು ಹೆಚ್ಚಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು ನೀವು ಯಶಸ್ಸಿನ ಉತ್ತುಂಗವನ್ನು ಏರುವಿರಿ. 


ಕನ್ಯಾ ರಾಶಿ: 
ಬುಧನ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೂ ಸಹ ಉತ್ತಮ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನೀವು ವೃತ್ತಿ ಬದುಕಿನಲ್ಲಿ ಯಶಸ್ಸಿನ ಶಿಖರವನ್ನು ಏರುವುದರ ಜೊತೆಗೆ ಸಾಕಷ್ಟು ಸಂಪತ್ತನ್ನು ಪಡೆಯಲಿದ್ದೀರಿ. ದಿಢೀರ್ ಹಣಕಾಸಿನ ಲಾಭದಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. 


ಧನು ರಾಶಿ: 
ಬುಧ ರಾಶಿ ಪರಿವರ್ತನೆ ಧನು ರಾಶಿಯವರ ಆದಾಯವನ್ನು ಹೆಚ್ಚಿಸಲಿದೆ. ನೀವು ವ್ಯಾಪಾರ ವಿಸ್ತರಣೆಗಾಗಿ ಯೋಚಿಸುತ್ತಿದ್ದರೆ ಇದನ್ನು ಅತ್ಯುತ್ತಮ ಸಮಯ ಎಂದು ಪರಿಗಣಿಸಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. 


ಇದನ್ನೂ ಓದಿ- Venus Transit 2023: ದೀಪಾವಳಿಗೂ ಮೊದಲೇ ಬೆಳಗಲಿದೆ ಈ 3 ರಾಶಿಯವರ ಭಾಗ್ಯ ಜ್ಯೋತಿ, ಸುರಿಯಲಿದೆ ಹಣದ ಮಳೆ


ಮಕರ ರಾಶಿ: 
ಬುಧನ ಸಂಚಾರದಲ್ಲಿನ ಬದಲಾವಣೆಯು ಮಕರ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಈ ಸಂದರ್ಭದಲ್ಲಿ ನೀವು ವಿಶೇಷವಾದದ್ದನ್ನೇನಾದರೂ ಸಾಧಿಸುವಿರಿ. ಪೂರ್ವಜರ ಆಸ್ತಿಯಿಂದಲೂ ಲಾಭವಾಗಲಿದೆ. 


ಕುಂಭ ರಾಶಿ: 
ಬುಧ ರಾಶಿ ಪರಿವರ್ತನೆಯು ಕುಂಭ ರಾಶಿಯ ವ್ಯಾಪಾರಸ್ತರಿಗೆ ಬಂಪರ್ ಆರ್ಥಿಕ ಲಾಭವನ್ನು ತರಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ನಿಮ್ಮ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿದೆ. ನಿಮ್ಮ ಮಾತೇ ನಿಮಗೆ ಬಂಡವಾಳವಾಗಿದ್ದು ವಾಕ್ಚಾತುರ್ಯದಿಂದಲೇ ಹಣಕಾಸಿನ ಪ್ರಯೋಜನವನ್ನೂ ಪಡೆಯಲಿದ್ದೀರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.