Varabhavishya in Kannada From September 02nd to September 08th: ಸೆಪ್ಟೆಂಬರ್ ಮೊದಲ ವಾರದಲ್ಲಿ ಬುಧಾದಿತ್ಯ ರಾಜಯೋಗ, ಗಜಕೇಸರಿ ಯೋಗದಿಂದ ಕೆಲವು ರಾಶಿಯವರಿಗೆ ಅದೃಷ್ಟ ಹೊಳೆಯಲಿದೆ ಎನ್ನಲಾಗುತ್ತಿದೆ 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮೇಷ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದ್ದು ಶುಭ ಫಲಿತಾಂಶಗಳನ್ನು ಪಡೆಯುವರು. ಉದ್ಯೋಗದಲ್ಲಿ ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ, ನೀವು ನಿರ್ದಿಷ್ಟ ಕಾರ್ಯದಲ್ಲಿ ಶೀಘ್ರದಲ್ಲೇ ಯಶಸ್ಸನ್ನು ಸಾಧಿಸುವಿರಿ. ಬಡ್ತಿ ಅಥವಾ ಅಪೇಕ್ಷಿತ ವರ್ಗಾವಣೆ ಸಾಧ್ಯತೆಯೂ ಇದೆ. ಆದಾಯದ ಮೂಲಗಳು ಹೆಚ್ಚಾಗಳಿದ್ದು, ವಾರದ ಮಧ್ಯದಲ್ಲಿ ದಿಢೀರ್ ಧನಲಾಭವಾಗಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಅಥವಾ ವೃತ್ತಿ ಅಥವಾ ವ್ಯಾಪಾರಕ್ಕಾಗಿ ಶ್ರಮಿಸುತ್ತಿರುವ ಜನರಿಗೆ ಶುಭ ವಾರ್ತೆ ಕೇಳಿಬರಲಿದೆ. 


ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ಈ ರಾಶಿಯ ಜನರಿಗೆ ಗಜಕೇಸರಿ, ಬುಧಾದಿತ್ಯ ಯೋಗದಿಂದ ಅದೃಷ್ಟ ಬೆಳಗಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ವಾರದ ಆರಂಭದಲ್ಲಿ, ಹಠಾತ್ ಪ್ರಯಾಣವು ಲಾಭದಾಯಕವಾಗಿರುತ್ತದೆ. ಉದ್ಯೋಗಸ್ಥರಿಗೆ ವಾರವು ಅನುಕೂಲಕರವಾಗಿರಲಿದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಅಥವಾ ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುವವರಿಗೆ ಶುಭ ಸಮಯ. ಆದರೆ, ಆರೋಗ್ಯದ ದೃಷ್ಟಿಯಿಂದ, ನೀವು ವಾರವಿಡೀ ಜಾಗರೂಕರಾಗಿರಬೇಕು.


ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಈ ವಾರ ಯಾವುದೇ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಪರಿಶ್ರಮದ ಅಗತ್ಯವಿರುತ್ತದೆ. ಹಣಕಾಸಿನ ಸಮಸ್ಯೆಗಳನ್ನು ತಪ್ಪಿಸಲು, ನಿಮ್ಮ ಬಜೆಟ್ ಬಗ್ಗೆ ಹೆಚ್ಚಿನ ಗಮನವಹಿಸಿ. ಕೆಲವು ಪ್ರಮುಖ ಕೆಲಸಗಳಲ್ಲಿ ನಿರೀಕ್ಷಿತ ಫಲ ಸಿಗದೇ ನಿಮ್ಮ ಮನಸ್ಸು ಸ್ವಲ್ಪ ದುಃಖಿತವಾಗಿರುತ್ತದೆ. ಹಣಕಾಸಿನ ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರವಾಗಿರುವುದನ್ನು ತಪ್ಪಿಸಿ. ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಈ ನಿಟ್ಟಿನಲ್ಲಿ ನಿಮ್ಮ ಹಿತೈಷಿಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. 


ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ವೃತ್ತಿ-ವ್ಯಾಪಾರ ದೃಷ್ಟಿಕೋನದಿಂದ ಈ ವಾರ ನಿಮಗೆ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತದೆ. ಪ್ರಭಾವಿ ವ್ಯಕ್ತಿಯ ಸಹಾಯದಿಂದ ಲಾಭದಾಯಕ ಯೋಜನೆಗಳಲ್ಲಿ ನೀವು ಕೂಡ ಸೇರಲು ಅವಕಾಶವಿರುತ್ತದೆ. ವಿದ್ಯಾರ್ಥಿಗಳಿಗೆ ಇದು ಪ್ರಗತಿಪರವಾಗಿರುತ್ತದೆ. ವ್ಯಾಪಾರಸ್ಥರಿಗೆ ವಾರಾಂತ್ಯವು ಹೆಚ್ಚು ಲಾಭದಾಯಕ ಎಂದು ಸಾಬೀತುಪಡಿಸಲಿದೆ. ಬಹಳ ದಿನಗಳಿಂದ ಭೂಮಿ, ಕಟ್ಟಡ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ,  ವಾರದ ಕೊನೆಯಲ್ಲಿ ನಿಮ್ಮ ಕನಸು ಈಡೇರುವ ಸಾಧ್ಯತೆ ಇದೆ. 


ಇದನ್ನೂ ಓದಿ- ಬುಧಾದಿತ್ಯ ರಾಜಯೋಗ: ಈ ರಾಶಿಯವರಿಗೆ ಗೋಲ್ಡನ್ ಟೈಮ್, ಭಾರೀ ಅದೃಷ್ಟದಿಂದ ಕೈಗೂಡುವುದು ಪ್ರತಿ ಕೆಲಸ


ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಈ ವಾರ ನಿಮಗೆ ಮಿಶ್ರ ಫಲಗಳಿಂದ ಕೂಡಿದ ವಾರ. ವಾರದ ಆರಂಭದಲ್ಲಿ ಕೆಲಸದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಇದರಿಂದ ಲಾಭದ ಬದಲಿಗೆ ನಷ್ಟವೇ ಹೆಚ್ಚಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ವ್ಯವಹಾರವನ್ನು ಮಾಡುವಾಗ ಗುರು-ಹಿರಿಯರ ಸಲಹೆ ಪಡೆಯುವುದನ್ನು ಮರೆಯಬೇಡಿ. ತೀರ್ಥಯಾತ್ರೆ ಅಥವಾ ಪ್ರವಾಸಕ್ಕೆ ಹೋಗಲು ಹಠಾತ್ ಯೋಜನೆ ಮಾಡಬಹುದು. ವಾರದ ಮೊದಲಾರ್ಧಕ್ಕೆ ಹೋಲಿಸಿದರೆ, ಉತ್ತರಾರ್ಧವು  ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿದೆ. 


ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯ ಜನರು ಬುಧಾದಿತ್ಯ ಹಾಗೂ ಗಜಕೇಸರಿ ಯೋಗದಿಂದ ಈ ವಾರದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಯ. ಜೀವನೋಪಾಯಕ್ಕಾಗಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವ್ಯಾಪಾರ ವಿಸ್ತರಣೆಯ ಯೋಜನೆಗಳು ಕೈಗೂಡಲಿವೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಯಾಣವು ಆಹ್ಲಾದಕರ ಮತ್ತು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಆರ್ಥಿಕ ದೃಷ್ಟಿಕೋನದಿಂದ, ವಾರದ ದ್ವಿತೀಯಾರ್ಧವು ಹೆಚ್ಚು ಶುಭದಾಯಕವಾಗಿದೆ. 


ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯ ಜನರಿಗೆ ಇದು ಅದೃಷ್ಟದ ವಾರ. ದೀರ್ಘ ಸಮಯದಿಂದ ಸ್ತಗಿತಗೊದ್ನಿದ್ದ ಕೆಲಸಗಳಲ್ಲಿ ವೇಗ ಹೆಚ್ಚಾಗಲಿದೆ. ಭೂಮಿ, ಕಟ್ಟಡಗಳು ಮತ್ತು ವಾಹನಗಳು ಇತ್ಯಾದಿಗಳನ್ನು ಖರೀದಿಸಲು ಈ ವಾರ ಮಂಗಳಕರವಾಗಿರುತ್ತದೆ. ಪ್ರಭಾವಿ ವ್ಯಕ್ತಿಯ ನೆರವಿನಿಂದ ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಉದ್ಯೋಗಸ್ಥರು ವಾರದ ಮಧ್ಯದಲ್ಲಿ ಕೆಲಸದ ಸ್ಥಳದಲ್ಲಿ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಪಡೆಯಬಹುದು. ವಿದೇಶ ವ್ಯವಹಾರದಲ್ಲಿರುವವರಿಗೆ ವಾರವು ತುಂಬಾ ವಿಶೇಷ ಫಲಗಳನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಪಡೆಯಬಹುದು.


ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ಈ ರಾಶಿಯ ಜನರು ವಾರದ ಆರಂಭದಲ್ಲಿ ಉದ್ಯೋಗದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ, ಸಣ್ಣ ಕೆಲಸಗಳಿಗೂ ಹೆಚ್ಚು ಶ್ರಮ ಬೇಕಾಗುತ್ತದೆ. ವಾರದ ದ್ವಿತೀಯಾರ್ಧವು ಉದ್ಯೋಗಿಗಳಿಗೆ ಮೊದಲಾರ್ಧಕ್ಕಿಂತ ಹೆಚ್ಚು ಅನುಕೂಲಕರವಾಗಿರುತ್ತದೆ.  ಈ ವಾರ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.ಈ ವಾರ ನಿಮ್ಮ ಸಂಬಂಧಗಳನ್ನು ಉತ್ತಮವಾಗಿಡಲು, ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆ ನೀಡದಿರುವುದು ಉತ್ತಮ. ಪ್ರೀತಿಯ ವಿಚಾರದಲ್ಲಿ ನಿಮ್ಮ ಸಂಗಾತಿಗೆ ನೋವಾಗದಂತೆ ನಡೆದುಕೊಳ್ಳುವುದು ಹೆಚ್ಚು ಫಲಪ್ರದವಾಗಿರುತ್ತದೆ. 


ಇದನ್ನೂ ಓದಿ- ಮನೆಯಲ್ಲಿ ಹಲ್ಲಿ ಇದ್ದರೆ ಶುಭವೋ ಅಶುಭವೋ? ಈ ಕುರಿತು ಶಾಸ್ತ್ರ ಹೇಳುವುದೇನು?


ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಈ ರಾಶಿಯವರಿಗೆ ಶುಭ ಯೋಗಗಳ ಪರಿಣಾಮದಿಂದ ವಾರದ ಮೊದಲಾರ್ಧವು ಮಂಗಳಕರ ಮತ್ತು ಅದೃಷ್ಟವನ್ನು ತರುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಹಿರಿಯರಿಂದ ಸಂಪೂರ್ಣ ಆಶೀರ್ವಾದವನ್ನು ಪಡೆಯುತ್ತೀರಿ ಮತ್ತು ಉದ್ಯೋಗದ ದಿಕ್ಕಿನಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಕಠಿಣ ಪರಿಶ್ರಮದಿಂದ ನೀವು ಬಯಸಿದ ಲಾಭವನ್ನು ಪಡೆಯುತ್ತೀರಿ. ವಾರದ ಮಧ್ಯದಲ್ಲಿ, ಅಧಿಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳುತ್ತವೆ. ಭವಿಷ್ಯದಲ್ಲಿ ಇದು ಲಾಭದಾಯಕವಾಗಿರಲಿದೆ. ಈ ವಾರ ನಿಮ್ಮ ಜೀವನದಲ್ಲಿ ಹೊಸ ಜನರು ಪ್ರವೇಶಿಸಬಹುದು.


ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಈ ವಾರ ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮ ಮತ್ತು ಪ್ರಯತ್ನವನ್ನು ಪ್ರಶಂಸಿಸಲಾಗುತ್ತದೆ. ಅಧಿಕಾರಿಗಳು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ನೀವು ಅಧೀನ ಅಧಿಕಾರಿಗಳಿಂದ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ದೃಷ್ಟಿಯಿಂದಲೂ ವಾರ ಅತ್ಯುತ್ತಮವಾಗಿದೆ. ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಮೂಲಗಳ ಸಾಧ್ಯತೆ ಇದೆ. ಸಂಬಂಧಗಳ ದೃಷ್ಟಿಯಿಂದ ಈ ವಾರ ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಸಹೋದರರು ಮತ್ತು ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು  ಸುಧಾರಿಸುತ್ತದೆ. ಪ್ರೇಮ ಸಂಬಂಧಗಳು ಗಾಢವಾಗುತ್ತವೆ. 


ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಈ ರಾಶಿಯವರಿಗೆ ಇಂದು ತುಂಬಾ ಶುಭಕರವಾಗಿದ್ದು ಶುಭ ಶುದ್ಧಿಯನ್ನು ನಿರೀಕ್ಷಿಸಬಹುದು. ಅದೃಷ್ಟದ ಸಂಪೂರ್ಣ ಬೆಂಬಲದಿಂದ ವ್ಯಾಪಾರದಲ್ಲಿ ಪ್ರಗತಿ ಮತ್ತು ಉತ್ತಮ ಲಾಭ ಇರುತ್ತದೆ. ಈ ವಾರದ ಅಂತ್ಯದ ವೇಳೆಗೆ ನೀವು ವ್ಯಾಪಾರಕ್ಕೆ ಸಂಬಂಧಿಸಿದಂತೆ ದೊಡ್ಡ ವ್ಯವಹಾರವನ್ನು ಮಾಡಬಹುದು. ಉದ್ಯೋಗಸ್ಥರ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ. ರಾಜಕೀಯದಲ್ಲಿ ತೊಡಗಿಸಿಕೊಂಡವರು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ದಿನನಿತ್ಯದ ಆದಾಯ ಹೆಚ್ಚಾಗುವುದರಿಂದ ನಿಮ್ಮ ಸಮಸ್ಯೆಗಳೂ ಕಡಿಮೆಯಾಗುತ್ತವೆ. ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ ಹೆಚ್ಚಾಗಲಿದೆ. 


ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಈ ರಾಶಿಯ ಜನರಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರವಾಗಿದೆ. ಹಣಕಾಸಿನ ಪರಿಸ್ಥಿತಿಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ವಾರದ ಮೊದಲಾರ್ಧದಲ್ಲಿ ಕೆಲವು ದೊಡ್ಡ ವೆಚ್ಚಗಳು ಇದ್ದಕ್ಕಿದ್ದಂತೆ ಉದ್ಭವಿಸಬಹುದು.  ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ಆಗತ್ಯವಾಗಿದೆ. ವಾರದ ದ್ವಿತೀಯಾರ್ಧವು ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಪ್ರತಿಕೂಲವಾಗಿರುತ್ತದೆ.  ಪ್ರೀತಿಯ ಸಂಬಂಧದಲ್ಲಿ ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.