chanakya niti should not marry a girl these qualities: ಚಾಣಕ್ಯನ ಪ್ರಕಾರ, ಮದುವೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ಇದರಲ್ಲಿ ಹುಡುಗ-ಹುಡುಗಿ ಜೊತೆಗೆ ಎರಡು ಕುಟುಂಬಗಳ ಸಂಬಂಧವೂ ಕೂಡಿಬರುತ್ತದೆ. ಆದ್ದರಿಂದ, ಮದುವೆಗೆ ಮೊದಲು ಹುಡುಗ ಅಥವಾ ಹುಡುಗಿಯನ್ನು ಆಯ್ಕೆಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇನ್ನು ಎಷ್ಟೇ ಸುಂದರವಾಗಿದ್ದರೂ ಸಹ ಈ ಕೆಳಗಿನ ಗುಣಗಳಿರುವ ಮಹಿಳೆಯರನ್ನು ಮದುವೆಯಾಗ ಬಾರದು ಎಂದು ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇನ್ನೂ ಮದುವೆಯಾಗದ ಬಿಗ್‌ಬಾಸ್‌ ಸ್ಪರ್ಧಿ ಜೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು ಗೊತ್ತೆ..? ಇಷ್ಟು ದೊಡ್ಡವರಾ.. ಅಯ್ಯೋ ಶಿವನೇ..


ಸುಳ್ಳು ಹೇಳುವ ಮಹಿಳೆ: ಆಚಾರ್ಯ ಚಾಣಕ್ಯ ಹೇಳುವಂತೆ ಸುಳ್ಳು ಹೇಳುವುದರಲ್ಲಿ ನಿಪುಣವಾಗಿರುವ ಹುಡುಗಿಯನ್ನು ಯಾವ ಕಾರಣಕ್ಕೂ ಮದುವೆಯಾಗಬಾರದು. ಸುಳ್ಳು ಹೇಳುವ ಹೆಂಗಸರು ಮದುವೆಯಾದ ಮೇಲೂ ಸುಳ್ಳು ಆರೋಪ ಮಾಡಿ ಗಂಡನ ಜೀವನ ಹಾಳು ಮಾಡುತ್ತಾರೆ. ಅಷ್ಟೇ ಅಲ್ಲ, ಇಂತಹ ಮಹಿಳೆಯರು ತಮ್ಮ ಪೋಷಕರಿಂದ ಪುರುಷರನ್ನು ದೂರವಿಡಲು ಸುಳ್ಳು ಪದಗಳನ್ನು ಬಳಸುತ್ತಾರೆ.


ನಡತೆಹೀನ ಮಹಿಳೆ: ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ನಡತೆಹೀನ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು ಎಂದು ಹೇಳುತ್ತಾನೆ. ಚಾರಿತ್ರ್ಯ ಹದಗೆಟ್ಟ ಮಹಿಳೆ ಮದುವೆಯ ನಂತರವೂ ಇತರ ಪುರುಷರಲ್ಲಿ ಪ್ರೀತಿಯನ್ನು ಹುಡುಕುತ್ತಾಳೆ. ಅಂತಹ ಮಹಿಳೆ ಏಕಕಾಲದಲ್ಲಿ ಅನೇಕ ಪುರುಷರನ್ನು ವಂಚಿಸುವಲ್ಲಿ ಪರಿಣತಿ ಹೊಂದಿರುತ್ತಾಳೆ.


ಕಟುವಾಗಿ ಮಾತನಾಡುವ ಮಹಿಳೆ: ಚಾಣಕ್ಯನ ಪ್ರಕಾರ, ಯಾವಾಗಲೂ ಕಟುವಾಗಿ ಮಾತನಾಡುವ ಮಹಿಳೆಯನ್ನು ಮದುವೆಯಾಗಬಾರದು. ಏಕೆಂದರೆ ಮದುವೆಯ ನಂತರವೂ ಅಂತಹ ಮಹಿಳೆ ತನ್ನ ಕಹಿ ಮಾತುಗಳಿಂದ ತನ್ನ ಗಂಡನ ಜೊತೆಗೆ ಅವನ ಇಡೀ ಕುಟುಂಬವನ್ನು ತೊಂದರೆಗೊಳಿಸುತ್ತಾಳೆ.


ಕೆಟ್ಟ ಕುಟುಂಬ ಹಿನ್ನೆಲೆ: ಆಚಾರ್ಯ ಚಾಣಕ್ಯ ಹೇಳುವಂತೆ, ಒಬ್ಬ ಪುರುಷನು ವಿವಾಹವಾಗುವ ಮುನ್ನ ಆಕೆಯ ಕುಟುಂಬದ ಹಿನ್ನೆಲೆಯನ್ನು ಪರಿಗಣಿಸದೆ ಮದುವೆಯಾದರೆ ಅವನ ಜೀವನವು ನರಕವಾಗುತ್ತದೆ. ಹೆಣ್ಣಿನ ಕೌಟುಂಬಿಕ ಹಿನ್ನೆಲೆ ಕೆಟ್ಟದಾಗಿದ್ದರೆ ಗಂಡನ ಮನೆ ಒಡೆಯುವ ಕೆಲಸ ಮಾಡುತ್ತಾಳೆ ಎನ್ನುತ್ತಾರೆ ಚಾಣಕ್ಯ.


ಇದನ್ನೂ ಓದಿ: ರೋಮ್ಯಾನ್ಸ್, ಲಿಪ್ ಲಾಕ್ ಮಾಡಲು ರೆಡಿ, ರಿಲೇಷನ್ ಶಿಪ್ ನಲ್ಲಿರುವುದಕ್ಕೂ ಓಕೆ, ಆದರೆ ಮದುವೆ ಮಾತ್ರ ಬೇಡ ಎಂದಿದ್ದೇಕೆ ಈ ಸೆ*ಕ್ಸಿ, ಸುಂದರಿ?


ಸುಂದರ ಮಹಿಳೆ: ಪ್ರತಿಯೊಬ್ಬರೂ ತಮ್ಮ ಜೀವನ ಸಂಗಾತಿ ಸುಂದರವಾಗಿರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಮಹಿಳೆಯ ದೇಹದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡಬಾರದು. ಮಹಿಳೆ ದೈಹಿಕವಾಗಿ ಸುಂದರವಾಗಿದ್ದರೂ, ಹೃದಯದಲ್ಲಿ ಕೊಳಕು ಇದ್ದರೆ, ಅವಳು ತನ್ನ ಗಂಡನ ಮನೆ ಮತ್ತು ಅವನ ಜೀವನ ಎರಡನ್ನೂ ನಾಶಪಡಿಸುತ್ತಾಳೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.