ಬೆಂಗಳೂರು: ಆಚಾರ್ಯ ಚಾಣಕ್ಯ ಅವರನ್ನು ಓರ್ವ ಮಹಾನ್ ತತ್ವಜ್ಞಾನಿ ಎಂದು ಕರೆಯಲಾಗುತ್ತದೆ. ಭಾರತೀಯ ರಾಜಕೀಯ ಮತ್ತು ರಾಜತಾಂತ್ರಿಕತೆಗೆ ಅವರು ನಿಜವಾಗಿಯೂ ದೊಡ್ಡ ಕೊಡುಗೆ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಭಾರತೀಯ ಇತಿಹಾಸದ ದಿಕ್ಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು (Spiritual News In Kannada). ತಮ್ಮ  ಜೀವಿತಾವಧಿಯಲ್ಲಿ, ಅವರು ನೀತಿ ಸಲಹೆಗಾರ, ತಂತ್ರಜ್ಞ, ಬರಹಗಾರ, ರಾಜಕಾರಣಿ ಇತ್ಯಾದಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಮಾನವ ಸ್ವಭಾವ ಮತ್ತು ಜೀವನದ ಬಗ್ಗೆ ನೀಡಿದ ಅನೇಕ ತತ್ವಗಳನ್ನು ಇಂದಿಗೂ ಜೀವನದಲ್ಲಿ ಅಳವಡಿಸಿಕೊಂಡರೆ ಅವು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. .


COMMERCIAL BREAK
SCROLL TO CONTINUE READING

ತಮ್ಮ ನೀತಿ ಶಾಸ್ತ್ರದಲ್ಲಿ ಚಾಣಕ್ಯರು ಮದುವೆಯ ಬಗ್ಗೆಯೂ ಹೇಳಿದ್ದಾರೆ. ಮದುವೆಯಾಗುವ ಪತಿ ಪತ್ನಿಯರು ಹೇಗೆ ಇರಬೇಕು ಎಂಬುದನ್ನೂ ಕೂಡ ಅವರು ಹೇಳಿದ್ದಾರೆ? ಅವುಗಳಲ್ಲಿ ಯಾವ ರೀತಿಯ ಹುಡುಗಿಯನ್ನು ಮದುವೆಯಾಗಬಾರದು ಎಂಬ ಸಲಹೆಯನ್ನು ಕೂಡ ಯುವಕರಿಗೆ ನೀಡಿದ್ದಾರೆ. ಬನ್ನಿ ಅವು ಯಾವುವು ತಿಳಿದುಕೊಳ್ಳೋಣ. 


1. ಸುಂದರವಾಗಿರುವ ಹಾಗೂ ತಲೆಯಲ್ಲಿ ಮೆದುಳಿಲ್ಲದ ಯುವತಿ
ಮದುವೆಯನ್ನು ಜೀವನದ ಪ್ರಮುಖ ಹಂತವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಪುರುಷರು ಸುಂದರ ಮಹಿಳೆಯರನ್ನು ಮದುವೆಯಾಗಲು ಯೋಚಿಸುತ್ತಾರೆ. ಹೊರನೋಟಕ್ಕೆ ಚೆನ್ನಾಗಿ ಕಾಣುವ ವ್ಯಕ್ತಿಗಳು ತಮ್ಮನ್ನು ಸಂತೋಷಪಡಿಸುತ್ತಾರೆ ಎಂಬುದು ಅವರ ಭಾವನೆಯಾಗಿರುತ್ತದೆ. ಆದರೆ ಅವರ ಈ ಭಾವನೆ ತಪ್ಪಗ್ಗಿರಬಹುದು. ಹೊರನೋಟಕ್ಕೆ ಸುಂದರವಾಗಿ ಕಾಣುವ ಯುವತಿಯರು ಮನಸ್ಸಿನಿಂದ ಸುಂದರವಾಗಿರಬೇಕೆಂದೇನೂ ನಿಯಮ ಇಲ್ಲ ಎಂದು ಯುವಕರಿಗೆ ಚಾಣಕ್ಯ ಸಲಹೆ ನೀಡಿದ್ದಾರೆ, ಅಂತಹ ಮಹಿಳೆಯರನ್ನು ಅವರ ಸೌಂದರ್ಯವನ್ನು ನೋಡಿದ ನಂತರ ಮದುವೆಯಾಗಬಾರದು, ಆದರೆ ಅವರ ಗುಣಗಳು ಮತ್ತು ಆಲೋಚನೆಗಳನ್ನು ನೋಡಿ ಎಂದು ಅವರು ಹೇಳುತ್ತಾರೆ.


2. ಯುವತಿಯ ಕುಟುಂಬದ ಹಿನ್ನೆಲೆ
ಯುವತಿಯ ಕೌಟುಂಬಿಕ ಹಿನ್ನೆಲೆ ಚೆನ್ನಾಗಿರಬೇಕು. ಒಳ್ಳೆಯ ಮನೆತನಕ್ಕೆ ಸೇರದ ಹೆಣ್ಣನ್ನು ಸುಂದರವಾಗಿದ್ದರೂ ಮದುವೆಯಾಗಬಾರದು ಎಂಬುದು ಚಾಣಕ್ಯನ ನೀತಿ. ಇಂತಹ ಮಹಿಳೆಯಿಂದಾಗಿ ಕುಟುಂಬವು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


3. ಅಸಭ್ಯತೆ ತೋರುವ ಯುವತಿ
ಯುವತಿಯರು ಅಸಭ್ಯ ಮತ್ತು ಅಹಿತಕರವಾಗಿದ್ದರೆ, ಯುವಕರು ಅವಳನ್ನು ಮದುವೆಯಾಗಬಾರದು, ಆಮೇಲೆ ಅವಳು ಎಷ್ಟೇ ಸುಂದರವಾಗಿರಲಿ. ಚಾಣಕ್ಯ ನೀತಿಯ ಪ್ರಕಾರ, ಅಂತಹ ಯುವತಿ ತನ್ನ ಗಂಡನ ಮೇಲೆ ಒತ್ತಡ ಹೇರಿ ಏನು ಬೇಕಾದರೂ ಮಾಡಿಸಬಹುದು. ಗಂಡನನ್ನು ಸಾರ್ವಜನಿಕವಾಗಿ ನಿಂದಿಸಬಹುದು. ಅನೈತಿಕ ಕೃತ್ಯಗಳನ್ನು ಮಾಡಲು ನಿಮ್ಮನ್ನು ಪ್ರೇರೇಪಿಸಬಹುದು ಎಂದು ಅವರು ಹೇಳುತ್ತಾರೆ.


4. ಕೆಟ್ಟ ಚರಿತ್ರೆ
ಸುಂದರ ಯುವತಿ ಒಂದು ವೇಳೆ  ಕೆಟ್ಟ ಚರಿತ್ರೆಯನ್ನು ಹೊಂದಿದ್ದರೆ, ಚಾಣಕ್ಯ ನೀತಿಯ ಪ್ರಕಾರ, ಯುವಕರು  ಅಂತಹ ಯುವತಿಯನ್ನು ಮದುವೆಯಾಗಬಾರದು. ಆಕೆಯ ಕೆಟ್ಟ ಚರಿತ್ರೆ ಇಡೀ ಕುಟುಂಬವನ್ನೇ ಹಾಳುಮಾಡುತ್ತದೆ ಎಂಬುದು ಅವರ ಅಭಿಮತ.


5. ಸುಳ್ಳು ಹೇಳುವ ಯುವತಿ 
ಸುಳ್ಳು ಹೇಳುವ ಯುವತಿ ತನ್ನ ಗಂಡನ ವಿರುದ್ಧ ಅದನ್ನು ಬಳಸುತ್ತಾಳೆ. ಆದ್ದರಿಂದ, ಅವಳು ಅಂತಿಮವಾಗಿ ಕುಟುಂಬವನ್ನು ನಾಶಮಾಡುತ್ತಾಳೆ. ಆದ್ದರಿಂದ ಯುವಕರು ಅಂತಹ ಮಹಿಳೆಯನ್ನು ಮದುವೆಯಾಗಬಾರದು.


6. ವಿಶ್ವಾಸದ್ರೋಹಿ ಯುವತಿ
ತನ್ನ ಕುಟುಂಬಕ್ಕೆ ವಿಶ್ವಾಸದ್ರೋಹಿಯಾಗಿರುವ ಯುವತಿಯನ್ನು ನಂಬಬಾರದು ಎಂಬುದು ಆಚಾರ್ಯ ಚಾಣಕ್ಯರ ಅಭಿಮತ . ಅವಳು ತನ್ನ ಪತಿಗೆ ವಿಶ್ವಾಸದ್ರೋಹಿಯೂ ಆಗಿರಬಹುದು. ಅವಳು ನಂತರ ಜೀವನದಲ್ಲಿ ಅವನಿಗೆ ದ್ರೋಹ ಮಾಡಬಹುದು.


7. ಮನೆಗೆಲಸವನ್ನು ಹೇಗೆ ಮಾಡಬೇಕೆಂದು ತಿಳಿದಿರದ ಯುವತಿ
ಚಾಣಕ್ಯನ ಪ್ರಕಾರ, ಮನೆಗೆಲಸದ ಬಗ್ಗೆ ಹೆಚ್ಚು ಜ್ಞಾನ ಹಾಗೂ ತಿಳುವಳಿಕೆ ಇಲ್ಲದ ಯುವತಿಯನ್ನು ಎಂದಿಗೂ ಮದುವೆಯಾಗಬಾರದು.


ಇದನ್ನೂ ಓದಿ-ಶೀಘ್ರದಲ್ಲೇ ಸೂರ್ಯ-ಶನಿ ಅಶುಭ ಯೋಗ ಅಂತ್ಯ, 3 ರಾಶಿಗಳ ಜನರ ಮನೆಗೆ ಧನಲಕ್ಷ್ಮಿಯ ಆಗಮನ, ಸ್ವಾಗತಕ್ಕೆ ಸಿದ್ಧರಾಗಿ!


8. ನಾಸ್ತಿಕ
ಚಾಣಕ್ಯನ ಪ್ರಕಾರ, ಯುವಕರು ಧಾರ್ಮಿಕ ಅಥವಾ ಧರ್ಮನಿಷ್ಠೆ ಇಲ್ಲದ ಯುವತಿಯನ್ನು ಮದುವೆಯಾಗಬಾರದು. ಚಾಣಕ್ಯನ ಪ್ರಕಾರ, ಮಹಿಳೆ ಕೆಲವು ಉಪವಾಸಗಳನ್ನು ಆಚರಿಸಬೇಕು ಮತ್ತು ನಿಯಮಿತವಾಗಿ ದೇವರನ್ನು ಪ್ರಾರ್ಥಿಸಬೇಕು ಎನ್ನಲಾಗಿದೆ.


ಇದನ್ನೂ ಓದಿ-Budh Uday2023: ಸಿಂಹ ರಾಶಿಯಲ್ಲಿ ಬುಧನ ಉದಯ, 4 ರಾಶಿಗಳ ಜನರ ಅಷ್ಟೈಶ್ವರ್ಯವನ್ನು ದುಪ್ಪಟ್ಟು ಮಾಡಲು ಬರಲಿದ್ದಾಳೆ ಅದೃಷ್ಟ ಲಕ್ಷ್ಮಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ