ಸ್ವನಕ್ಷತ್ರದಲ್ಲಿ ಸೂರ್ಯ ಗೋಚರ, ಶ್ರೀಹರಿ ನಾರಾಯಣ ಕೃಪೆಯಿಂದ ಈ ಜನರು ಮುಟ್ಟಿದ್ದೆಲ್ಲಾ ಚಿನ್ನ!

Surya Uttara Phalguni Nakshatra Gochar 2023: ಸೂರ್ಯ ಸಾಮಾನ್ಯವಾಗಿ ಒಂದು ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ. ಸೂರ್ಯ ಹೇಗೆ ತನ್ನ ರಾಶಿಯನ್ನು ಪರಿವರ್ತಿಸುತ್ತಾನೋ, ಹಾಗೆಯೇ ತನ್ನ ನಕ್ಷತ್ರವನ್ನು ಕೂಡ ಪರಿವರ್ತಿಸುತ್ತಾನೆ. ಇಂದು ಸೂರ್ಯನ ನಕ್ಷತ್ರ ಪ್ರವೇಶ ನೆರವೇರಿದ್ದು, ಒಟ್ಟು 6 ರಾಶಿಗಳ ಜಾತಕದವರಿಗೆ ಇದರಿಂದ ಭಾರಿ ಲಾಭ ಸಿಗಲಿದ್ದು,  ಈ ಜನರು ಹೊನ್ನು ಮುಟ್ಟಿದರು ಅದು ಚಿನ್ನವಾಗಲಿದೆ. 
 

ಬೆಂಗಳೂರು: ವೈದಿಕ ಜೋತಿಷ್ಯ ಶತ್ರದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನಮಾನಕ್ಕೂ ಕೂಡ ಹೆಚ್ಚಿನ ಮಹತ್ವ ಕೊಡಲಾಗಿದೆ. ಹೀರಿರುವಾಗ ಸೂರ್ಯನ ನಡೆ ಬದಲಾವಣೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಪ್ರಸ್ತುತ ಸೆಪ್ಟೆಂಬರ್ 14 ರಂದು, ಅಂದರೆ ಇಂದು ಸೂರ್ಯನು 27 ನಕ್ಷತ್ರಪುಂಜಗಳಲ್ಲಿ ಒಂದಾದ ಉತ್ತರ ಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಇಂದು ಬೆಳಗಿನ ಜಾವ 3 ಗಂಟೆ 38 ನಿಮಿಷಕ್ಕೆ ಸೂರ್ಯನ ಈ ಸ್ವನಕ್ಷತ್ರ ಗೋಚರ ನೆರವೇರಿದೆ. ಅಂದರೆ ಈ ನಕ್ಷತ್ರಕ್ಕೆ ಸೂರ್ಯನೆ ಅಧಿಪತಿ. ನಂತರ ಸೆಪ್ಟೆಂಬರ್ 17 ರಂದು ಕನ್ಯಾರಾಶಿಗೆ ಪ್ರವೇಶಿಸಲಿರುವ ಸೂರ್ಯ ನಂತರ ಅಕ್ಟೋಬರ್ 18 ರಂದು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ರೀತಿಯಾಗಿ, ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಸೂರ್ಯನ ರಾಶಿ ಬದಲಾವಣೆಯಿಂದ ಹಲವು ರಾಶಿಗಳು ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿವೆ. ಅಂದರೆ ಈ ರಾಶಿಗಳ ಜನರ ಮೇಲೆ ಸೂರ್ಯ ದೇವನ ವಿಶೇಷ ಆಶೀರ್ವಾದ ಇರುತ್ತದೆ.ಇದಲ್ಲದೆ, ಇನ್ನೊಂದೆಡೆ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುದ್ಧನ ಸಂಕ್ರಮಣ ಕೂಡ ನೆರವೇರಲಿದ್ದು, ಒಂದೇ ರಾಶಿಯಲ್ಲಿ ಸೂರ್ಯ ಹಾಗೂ ಬುದ್ಧನ ಮೈತ್ರಿಯಿಂದ ಬುದ್ಧಾದಿತ್ಯ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.  

 

ಇದನ್ನೂ ಓದಿ-ವರ್ಷದ ಬಳಿಕ ತುಲಾ ರಾಶಿಯಲ್ಲಿ ಸೂರ್ಯ-ಮಂಗಳರ ಮೈತ್ರಿ, ಈ ರಾಶಿಗಳ ಜನರಿಗೆ ಧನ ಕುಬೇರ-ಲಕ್ಷ್ಮಿ ಕೃಪಾಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

1. ಜಾತಕದಲ್ಲಿ ಬುಧಾದಿತ್ಯ ರಾಜಯೋಗವು ಹೇಗೆ ನಿರ್ಮಾಣವಾಗುತ್ತದೆ: ವೈದಿಕ ಜ್ಯೋತಿಷ್ಯದ ಪ್ರಕಾರ, ಆದಿತ್ಯ ಎಂದರೆ ಸೂರ್ಯ, ಯಾವುದೇ ಓರ್ವ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಮತ್ತು ಬುಧ ಎರಡೂ ಗ್ರಹಗಳು ಒಟ್ಟಿಗೆ ಬಂದಾಗ, ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಬುಧಾದಿತ್ಯ ಯೋಗವು ಜಾತಕದಲ್ಲಿ ತಾನು ಇರುವ ಮನೆಯನ್ನು ಬಲಪಡಿಸುತ್ತದೆ. ಜಾತಕದಲ್ಲಿ ಬುಧ ಮತ್ತು ಸೂರ್ಯ ಒಟ್ಟಿಗೆ ಇರುವಾಗ ಜಾತಕದ ವ್ಯಕ್ತಿಗೆ ವಿಶೇಷ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ. ಸೌರವ್ಯೂಹದಲ್ಲಿ ಬುಧವು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ, ಇಂತಹ  ಪರಿಸ್ಥಿತಿಯಲ್ಲಿ ಬುಧ ಮತ್ತು ಸೂರ್ಯನು ಜಾತಕದಲ್ಲಿ ಹೆಚ್ಚಿನ ಸಮಯ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧಾದಿತ್ಯ ಯೋಗವು ರೂಪುಗೊಂಡಾಗ, ಅವನು ಸಂಪತ್ತು, ಸೌಕರ್ಯ, ಕೀರ್ತಿಯನ್ನು ಪಡೆಯುತ್ತಾನೆ. ಮತ್ತು ಘನತೆ-ಗೌರವ ಪಡೆಯುತ್ತಾನೆ. ಸೂರ್ಯನ ನಕ್ಷತ್ರ ಪ್ರವೇಶ ಹಾಗೂ ಬುದ್ಧಾದಿತ್ಯ ರಾಜಯೋಗದ ಕಾರಣ 6 ರಾಶಿಗಳ ಭವಿಷ್ಯ ಬದಲಾಗಲಿದೆ  

2 /8

2. ಮೇಷ ರಾಶಿ- ಸೂರ್ಯ ದೇವನ ಸ್ವನಕ್ಷತ್ರ ಸಂಕ್ರಮಣ ಮತ್ತು ಬುಧಾದಿತ್ಯ ರಾಜಯೋಗದ ರಚನೆಯು ಸ್ಥಳೀಯರಿಗೆ ವಿಶೇಷ ಪ್ರಯೋಜನಗಳನ್ನು ನೀಡಲಿದೆ. ನೀವು ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಅನಿರೀಕ್ಷಿತ ಹಣವನ್ನು ಸಹ ಪಡೆಯಬಹುದು. ಇದೇ ವೇಳೆ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ವಿವಾಹಿತರ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.ಕುಟುಂಬದವರ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ, ಜನರು ನಿಮ್ಮಿಂದ ಪ್ರಭಾವಿತರಾಗಲಿದ್ದಾರೆ.  ಪಾರ್ಟ್ನರ್ ಸಿಪ್ ನಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ, ಲಾಭ ಪಡೆಯುವ ಸಾಧ್ಯತೆಗಳಿವೆ. ಕನ್ಯಾರಾಶಿಯಲ್ಲಿ ಸೂರ್ಯನ ಸಂಚಾರವು ಆರ್ಥಿಕ ಕ್ಷೇತ್ರದಲ್ಲಿ ಲಾಭವನ್ನು ತರಲಿದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಯಾಗಳಿವೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಅವಧಿಯಲ್ಲಿ ಹೊಸ ಉದ್ಯೋಗಾವಕಾಶಗಳು ಬರುವ ಸಾಧ್ಯತೆ ಇದೇ.  

3 /8

3. ಮಿಥುನ ರಾಶಿ-ಸೂರ್ಯ ನಕ್ಷತ್ರದ ಪ್ರವೇಶವು ನಿಮಗೆ ಕೆಲಸದಲ್ಲಿ ಭಾರಿ ಯಶಸ್ಸನ್ನು ತರಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಮತ್ತು ಸ್ಥಗಿತಗೊಂಡ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಉದ್ಯೋಗದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿರುತ್ತದೆ, ನೀವು ಕೆಲವು ದೊಡ್ಡ ಜವಾಬ್ದಾರಿ ಅಥವಾ ಬಡ್ತಿಯನ್ನು ಪಡೆಯಬಹುದು. ಹಣಕಾಸಿನ ಲಾಭದ ಬಲವಾದ ಅವಕಾಶಗಳಿವೆ, ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಹೂಡಿಕೆಗೆ ಸಮಯ ಅನುಕೂಲಕರವಾಗಿದೆ, ಉತ್ತಮ ಆದಾಯವನ್ನು ಪಡೆಯುವ ಸಂಪೂರ್ಣ ಅವಕಾಶಗಳಿವೆ. ಆರ್ಥಿಕ ಲಾಭವೂ ಆಗಬಹುದು. ಪ್ರಯಾಣಿಸುವ ಸಾಧ್ಯತೆಗಳಿವೆ.  

4 /8

4. ಕರ್ಕ ರಾಶಿ-ಸೂರ್ಯದೇವನ ನಕ್ಷತ್ರ ಹಾಗೂ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ಒಂದು ವರದಾನ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೇ. ನೀವು ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ, ನೀವು ಕೆಲವು ಹೊಸ ಅಥವಾ ದುಬಾರಿ ವಸ್ತುಗಳನ್ನು ಖರೀದಿಸಬಹುದು. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುವಿರಿ.  

5 /8

5. ಸಿಂಹ ರಾಶಿ- ಸೂರ್ಯನ ಈ ಉತ್ತರಾ ಫಾಲ್ಗುಣಿ ನಕ್ಷತ್ರ ಗೋಚರ ನಿಮ್ಮ ಪಾಲಿಗೆ ಮಂಗಳಕರವೆಂದು ಸಾಬೀತುಪಡಿಸಬಹುದು. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೆ ಸಮಯ ಅದ್ಬುತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ.  ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸಗಳು ಪೂರ್ಣಗೊಳ್ಳಬಹುದು.ಕನ್ಯಾರಾಶಿಯಲ್ಲಿ ಸೂರ್ಯನ ಸಂಚಾರವು ಆರ್ಥಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಅವಧಿಯಲ್ಲಿ, ವ್ಯಕ್ತಿಯು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾನೆ ಮತ್ತು ದೀರ್ಘಕಾಲದವರೆಗೆ ನಿಮಗೆ ಸಲ್ಲಬೇಕಾದ ಹಣವನ್ನು ನೀವು ಪಡೆಯಬಹುದು. ಗೌರವವೂ ಹೆಚ್ಚಾಗಲಿದೆ.  

6 /8

6. ಧನು ರಾಶಿ- ಸೂರ್ಯನ ನಕ್ಷತ್ರ ಹಾಗೂ ರಾಶಿ ಪರಿವರ್ತನೆಯಿದನ್ ನಿಮ್ಮ ಸಂಪತ್ತು ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಕೆಲಸದಲ್ಲಿ ಯಶಸ್ಸು ಮತ್ತು ವೃತ್ತಿಯಲ್ಲಿ ಹಠಾತ್ ಲಾಭವನ್ನು ಪಡೆಯಬಹುದು. ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಜನರ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುವಿರಿ.ತುಲಾ ರಾಶಿಯಲ್ಲಿ ಸೂರ್ಯನ ಸಂಚಾರದಿಂದಾಗಿ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಆದಾಯದಲ್ಲಿ ಹೆಚ್ಚಳ ಮತ್ತು ಹೊಸ ಮೂಲಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಉಂಟಾದ ಸಮಸ್ಯೆಗಳು ಬಗೆಹರಿಯುತ್ತವೆ.ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಭವಿಷ್ಯದ ಯೋಜನೆಗಳಲ್ಲಿ ಯಶಸ್ವಿಯಾಗುವಿರಿ. ಗೌರವವನ್ನೂ ಪಡೆಯುವಿರಿ. ಬುಧ ಸೂರ್ಯನ ಮೈತ್ರಿಯೊಂದ ರೂಪುಗೊಳ್ಳುತ್ತಿರುವ ಬುಧಾದಿತ್ಯ ರಾಜಯೋಗದಿಂದ ಆದಾಯ ಹೆಚ್ಚಾಗಲಿದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.ನೀವು ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಮಾಡಿದರೆ, ಅದರಲ್ಲಿ  ನೀವು ಯಶಸ್ವಿಯಾಗುವಿರಿ ಮತ್ತು ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ. ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಹೂಡಿಕೆ ಮಾಡುವುದು ಲಾಭವನ್ನು ನೀಡಲಿದೆ.  

7 /8

7. ಕನ್ಯಾ ರಾಶಿ- ಸೂರ್ಯನ ಸ್ವನಕ್ಷತ್ರ ಗೋಚರ ಮತ್ತು ಬುಧ ಹಾಗೂ ಸೂರ್ಯನ ಮೈತ್ರಿಯಿಂದ ರೂಪುಗೊಳ್ಳುವ ಬುಧಾದಿತ್ಯ ರಾಜಯೋಗವು ಲಾಭದಾಯಕವೆಂದು ಸಾಬೀತಾಗಲಿದೆ. ನೀವು ಆಕಸ್ಮಿಕ ಧನಲಾಭವನ್ನು ಪಡೆಯುವಿರಿ. ಸಿಲುಕಿಕೊಂಡ ಅಥವಾ ನಿಮಗೆ ಬರಬೇಕಾದ ಬಾಕಿ ನಿಮ್ಮ ಬಳಿಗೆ ಬರುವ ಸಾಧ್ಯತೆ ಇದೇ. ಉದ್ಯಮಿಗಳಿಗೆ ಸಮಯ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ವಿಶೇಷ ಲಾಭಗಳನ್ನು ಪಡೆಯುವ ಸಾಧ್ಯತೆಗಳಿವೆ. ಮಾರ್ಕೆಟಿಂಗ್, ಮಾಧ್ಯಮ, ಸಂವಹನ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಈ ಅವಧಿಯಲ್ಲಿ ಲಾಭ ಪಡೆಯಬಹುದು.  

8 /8

8. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)