First Lunar Eclipse of 2023 Effect: ವೈಜ್ಞಾನಿಕವಾಗಿ ಪ್ರಮುಖ ಖಗೋಳ ವಿಧ್ಯಮಾನಗಳಾಗಿರುವ ಸೂರ್ಯ ಗ್ರಹಣ, ಚಂದ್ರ ಗ್ರಹಣಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇನ್ನೆರಡು ದಿನಗಳ ಬಳಿಕ ಎಂದರೆ ಮೇ  05 ರಂದು 2023ರ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2023ರ ಮೇ 05 ಶುಕ್ರವಾರದಂದು ವೈಶಾಖ ಮಾಸದ ಹುಣ್ಣಿಮೆಯಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ವಿಶೇಷವೆಂದರೆ, ವರ್ಷದ ಮೊದಲ ಚಂದ್ರ ಗ್ರಹಣದ ದಿನ ಬುದ್ದ ಪೂರ್ಣಿಮೆಯನ್ನೂ ಆಚರಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

2023ರ ಮೇ 05 ಶುಕ್ರವಾರದಂದು ರಾತ್ರಿ ಸುಮಾರು 08:44ಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. ಮಧ್ಯ ರಾತ್ರಿ ಸುಮಾರು 01:02ಕ್ಕೆ ಚಂದ್ರ ಗ್ರಹಣ ಕೊನೆಗೊಳ್ಳಲಿದೆ. ಅರ್ಥಾತ್ ಸುಮಾರು 4 ಗಂಟೆ 15 ನಿಮಿಷಗಳವರೆಗೆ ಚಂದ್ರ ಗ್ರಹಣ ಇರಲಿದೆ. 2023ರ ಮೊದಲ ಚಂದ್ರ ಗ್ರಹಣ ಭಾರತದಲ್ಲಿ ಗೋಚರವಾಗದ ಕಾರಣ ಇದರ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ.  ಆದಾಗ್ಯೂ, ಗ್ರಹಣದ ಶುಭ ಮತ್ತು ಅಶುಭ ಪರಿಣಾಮಗಳು ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷದ ಮೊದಲ ಚಂದ್ರ ಗ್ರಹಣದ ಪ್ರಭಾವದಿಂದಾಗಿ ನಾಲ್ಕು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಸಿಗಳು ಯಾವುವು ಎಂದು ತಿಳಿಯೋಣ. 


ಇದನ್ನೂ ಓದಿ- Lunar Eclipse 2023: ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ


ಮೇ 05ರಂದು ವರ್ಷದ ಮೊದಲ ಚಂದ್ರ ಗ್ರಹಣದಿಂದ ಹೊಳೆಯಲಿದೆ ಈ ನಾಲ್ಕು ರಾಶಿಯವರ ಅದೃಷ್ಟ: 
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇ 05ರಂದು ಸಂಭವಿಸಲಿರುವ  ಚಂದ್ರಗ್ರಹಣವು ಕೆಲವು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ಅವರ ಜೀವನದಲ್ಲಿ ಮಂಗಳಕರ ಕಾರ್ಯಗಳು ಜರುಗಲಿದ್ದು, ಪ್ರತಿ ಹೆಜ್ಜೆಯಲ್ಲೂ ಅದೃಷ್ಟ ಕೈ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.  ಆ ಅದೃಷ್ಟದ ರಾಶಿ ಚಕ್ರಗಳೆಂದರೆ...


ಮಿಥುನ ರಾಶಿ: 
ಬುದ್ಧ ಪೂರ್ಣಿಮೆಯ ದಿನ ಸಂಭವಿಸುತ್ತಿರುವ ಚಂದ್ರ ಗ್ರಹಣವು ಮಿಥುನ ರಾಶಿಯವರ ಜೀವನವನ್ನು ಹೊಳೆಯುವಂತೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಚಂದ್ರ ಗ್ರಹಣದ ಶುಭ ಪರಿಣಾಮದಿಂದಾಗಿ ಮಿಥುನ ರಾಶಿಯವರಿಗೆ ಹೊಸ ಹಣಕಾಸಿನ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಆದರೆ, ನಿಮ್ಮ ಮಾತಿನ ಮೇಲೆ ಹಿಡಿತವಿರಲಿ.


ಸಿಂಹ ರಾಶಿ: 
ವರ್ಷದ ಮೊದಲ ಚಂದ್ರ ಗ್ರಹಣವು ಸಿಂಹ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಭಾರೀ ಯಶಸ್ಸನ್ನು ತರಲಿದೆ. ಮಾತ್ರವಲ್ಲ, ವ್ಯಾಪಾರ ವ್ಯವಹಾರದಲ್ಲಿಯೂ ಬಂಪರ್ ಲಾಭ ಗಳಿಸುವ ಸಾಧ್ಯತೆಗಳಿವೆ. ಹಠಾತ್ ಧನ ಲಾಭದಿಂದಾಗಿ ಹಣಕಾಸಿಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳಲಿವೆ. 


ಇದನ್ನೂ ಓದಿ- Chandra Grahan 2023 : ಈ ವರ್ಷದ ಮೊದಲ ಚಂದ್ರಗ್ರಹಣದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ!


ಕನ್ಯಾ ರಾಶಿ: 
ಮೇ 05ರಂದು ಸಂಭವಿಸುತ್ತಿರುವ ವರ್ಷದ ಮೊದಲ ಚಂದ್ರ ಗ್ರಹಣವು ಕನ್ಯಾ ರಾಶಿಯವರ ಹಲವು ಸಮಸ್ಯೆಗಳಿಗೆ ಮುಕ್ತಿಯನ್ನು ನೀಡಲಿದೆ. ಈ ಸಮಯದಲ್ಲಿ ವ್ಯಾಪಾರ- ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ಕಾಣುವ ಸಾಧ್ಯತೆ ಇದ್ದು, ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ಭೂಮಿ, ವಾಹನ ಖರೀದಿ ಯೋಗವೂ ಇದೆ. 


ಮಕರ ರಾಶಿ:
ಬುದ್ಧ ಪೂರ್ಣಿಮೆಯ ದಿನ ಸಂಭವಿಸಲಿರುವ ವರ್ಷದ ಮೊದಲ ಚಂದ್ರ ಗ್ರಹಣವು ಮಕರ ರಾಶಿಯವರ ವಿತ್ತೀಯ ಸ್ಥಿತಿಯನ್ನು ಸುಧಾರಿಸಲಿದೆ. ಈ ಸಮಯದಲ್ಲಿ ಹೊಸ ಆರ್ಥಿಕ ಮೂಲಗಳು  ಸೃಷ್ಟಿಯಾಗಲಿದ್ದು ನಿಮ್ಮ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ದೀರ್ಘ ಸಮಯದಿಂದ ಕುಂಠಿತಗೊಳ್ಳುತ್ತಿದ್ದ ಕೆಲಸಗಳು ವೇಗ ಪಡೆಯಲಿದ್ದು ವೃತ್ತಿ ರಂಗದಲ್ಲಿ ಯಶಸ್ಸನ್ನು ಗಳಿಸುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.