Chandra Grahan Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹನಗಳಿಗೂ ವಿಶೇಷ ಪ್ರಾಮುಖ್ಯತೆ ಇದೆ. ಗ್ರಹ ಗೋಚಾರದಂತೆಯೇ ಸೂರ್ಯ-ಚಂದ್ರ ಗ್ರಹಣಗಳು ಕೂಡ ಎಲ್ಲಾ 12 ರಾಶಿಗಳ ಮೇಲೆ ಶುಭ ಅಶುಭ ಪರಿಣಾಮವನ್ನು ಬೀರುತ್ತವೆ. ಈ ವರ್ಷ ಮೊದಲ ಚಂದ್ರ ಗ್ರಹಣ ಯಾವಾಗ? ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಈ ದಿನ ಸಂಭವಿಸಲಿದೆ ವರ್ಷದ ಮೊದಲ ಚಂದ್ರಗ್ರಹಣ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷದ ಮೊದಲ ಚಂದ್ರಗ್ರಹಣ 25 ಮಾರ್ಚ್ 2024ರಂದು ಸಂಭವಿಸಲಿದೆ. ಇದರ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ನಿಮ್ಮ ರಾಶಿಯ ಮೇಲೆ ವರ್ಷದ ಮೊದಲ ಚಂದ್ರಗ್ರಹಣದ ಪ್ರಭಾವ ಏನಿರಲಿದೆ ಎಂದು ತಿಳಿಯೋಣ... 


2024ರ ಮೊದಲ ಚಂದ್ರಗ್ರಹಣ: ದ್ವಾದಶ ರಾಶಿಗಳಿಗೆ ಏನು ಫಲ!
ಮೇಷ ರಾಶಿ: 

ವರ್ಷದ ಮೊದಲ ಚಂದ್ರಗ್ರಹಣವು ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳೊಂದಿಗೆ ಹೊಸ ಹೊಸ ಅವಕಾಶಗಳನ್ನು ನೀಡಲಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ. 


ವೃಷಭ ರಾಶಿ: 
ವೃಷಭ ರಾಶಿಯವರಿಗೆ ವರ್ಷದ ಮೊದಲ ಚಂದ್ರ ಗ್ರಹಣವು ಹೊಸ ಯೋಜನೆಯಲ್ಲಿ ಹೂಡಿಕೆಯಿಂದ ಲಾಭವನ್ನು ನೀಡಲಿದೆ. 


ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಈ ವರ್ಷದ ಮೊದಲ ಚಂದ್ರಗ್ರಹಣ ಅಷ್ಟು ಪ್ರಯೋಜನಕಾರಿ ಎಂದು ಹೇಳಲಾಗುವುದಿಲ್ಲ. ಆದಾಗ್ಯೂ, ನಿಮ್ಮ ಸ್ವಭಾವದಲ್ಲಿನ ಬದಲಾವಣೆಯಿಂದ ಬೆಳವಣಿಗೆ ಕಾಣಬಹುದು. 


ಕರ್ಕಾಟಕ ರಾಶಿ: 
ವರ್ಷದ ಮೊದಲ ಚಂದ್ರಗ್ರಹಣದ ಪ್ರಭಾವದಿಂದಾಗಿ ಕರ್ಕಾಟಕ ರಾಶಿಯವರು ಹೊಸ ಜನರೊಂದಿಗೆ ಸಂಪರ್ಕ ಸಾಧಿಸುವಿರಿ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಹೆಚ್ಚಲಿದೆ. 


ಇದನ್ನೂ ಓದಿ- Weekly Horoscope: ನಾಲ್ಕು ರಾಶಿಯವರಿಗೆ ವೃತ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ವಾರ ತುಂಬಾ ಶುಭ 


ಸಿಂಹ ರಾಶಿ: 
ಈ ವರ್ಷದ ಮೊದಲ ಚಂದ್ರ ಗ್ರಹಣವು ಸಿಂಹ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಹೊಸ ಎತ್ತರಕ್ಕೆ ಏರುವಿರಿ. 


ಕನ್ಯಾ ರಾಶಿ: 
2024ರ ಮೊದಲ ಚಂದ್ರ ಗ್ರಹಣವು ಕನ್ಯಾ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ  ಜವಾಬ್ದಾರಿಗಳನ್ನು ಹೆಚ್ಚಿಸಲಿದೆ. 


ತುಲಾ ರಾಶಿ: 
ಈ ವರ್ಷದ ಮೊದಲ ಚಂದ್ರ ಗ್ರಹಣ ತುಲಾ ರಾಶಿಯವರಿಗೆ ಅಷ್ಟು ಉತ್ತಮವಾಗಿಲ್ಲ. ಈ ಸಮಯ್ದಲ್ಲಿ ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ. ಇಲ್ಲದಿದ್ದರೆ, ಟೀಕೆಗೆ ಗುರಿಯಾಗಬಹುದು. 


ವೃಶ್ಚಿಕ ರಾಶಿ: 
2024ರ ಮೊದಲ ಚಂದ್ರ ಗ್ರಹಣ ವೃಶ್ಚಿಕ ರಾಶಿಯವರಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡಲಿದೆ. ಈ ರಾಶಿಯವರು ಯಾವುದೇ ಕೆಲಸದಲ್ಲಿ ನಿಜವಾದ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಾರೆ. ಇದೇ ಇವರ ಯಶಸ್ಸಿನ ಗುಟ್ಟು. 


ಇದನ್ನೂ ಓದಿ- ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೂ ಮೂರು ತಿಂಗಳು ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ 


ಧನು ರಾಶಿ: 
ಚಂದ್ರ ಗ್ರಹಣದ ಪ್ರಭಾವದಿಂದಾಗಿ ಧನು ರಾಶಿಯ ಜನರಿಗೆ ನಂಬಿಕಸ್ಥರಿಂದಲೇ ಮೋಸ ಹೋಗುವ ಸಂಭವವಿದೆ. ಇದನ್ನು ತಪ್ಪಿಸಲು ನಿಮ್ಮ ಸ್ವಂತ ಬುದ್ದಿಯಿಂದ ಕೆಲಸ ಮಾಡುವುದನ್ನು ಪರಿಗಣಿಸಿ. 


ಮಕರ ರಾಶಿ: 
ವರ್ಷದ ಮೊದಲ ಚಂದ್ರ ಗ್ರಹಣವು ಮಕರ ರಾಶಿಯ ಜನರಿಗೆ ಜವಾಬ್ದಾರಿಗಳು ಮತ್ತು ಉದ್ದೇಶಗಳ ಮೇಲೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿ ಎಂದು ಸಾಬೀತುಪಡಿಸ್ಲೈದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 


ಕುಂಭ ರಾಶಿ: 
2024ರ ಮೊದಲ ಚಂದ್ರ ಗ್ರಹಣವು ಕುಂಭ ರಾಶಿಯವರಿಗೆ ಅಷ್ಟು ಉತ್ತಮವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನವರ ಬಗ್ಗೆ ಜಾಗರೂಕರಾಗಿರಿ. 


ಮೀನ ರಾಶಿ: 
ಈ ವರ್ಷದ ಮೊದಲ ಚಂದ್ರ ಗ್ರಹಣ ಮೀನ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ನಿಮ್ಮ ಪ್ರಯತ್ನದ ಸಂಪೂರ್ಣ ಫಲವನ್ನು ನೀಡಲಿದೆ. ಗುರಿಯತ್ತ ಗಮನ ಕೇಂದ್ರೀಕರಿಸಿ ಮುಂದುವರೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.