ಬೆಂಗಳೂರು : ಹಿಂದೂ ಧರ್ಮದಲ್ಲಿ 15 ದಿನಗಳ ಪಿತೃ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.ಈ 15 ದಿನಗಳಲ್ಲಿ ಪೂರ್ವಜರು ಪಿತೃಲೋಕದಿಂದ ಮರ್ತ್ಯಲೋಕಕ್ಕೆ ಬರುತ್ತಾರೆ.ನಂತರ ಕುಟುಂಬದ ಸದಸ್ಯರು ಶ್ರಾದ್ಧ,ತರ್ಪಣ,ಪಿಂಡದಾನ ಮುಂತಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತಾರೆ.ಪೂರ್ವಜರು ಇದರಿಂದ ಸಂತೋಷಗೊಳ್ಳುತ್ತಾರೆ ಎನ್ನುವುದು ನಂಬಿಕೆ.  ಪಿತೃ ಪಕ್ಷವು ಭಾದ್ರಪದ ಪೂರ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಅಮವಾಸ್ಯೆಯಂದು ಕೊನೆಗೊಳ್ಳುತ್ತದೆ.ಅಶ್ವಿನ್ ಅಮವಾಸ್ಯೆಯ ದಿನದಂದು, ಪೂರ್ವಜರು ಮತ್ತೆ ತಮ್ಮ ಸ್ಥಾನಕ್ಕೆ ಹಿಂದಿರುಗುತ್ತಾರೆ ಎಂದು ಹೇಳಲಾಗುತ್ತದೆ.   ಇದನ್ನು ಸರ್ವ ಪಿತೃ ಅಮಾವಾಸ್ಯೆ, ಪಿತೃ ಮೋಕ್ಷ ಅಮಾವಾಸ್ಯೆ ಮತ್ತು ಮಹಾಲಯ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ.ಈ ವರ್ಷ, ಪಿತೃ ಪಕ್ಷ ಅಥವಾ ಶ್ರಾದ್ಧವು ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗಿ, ಅಕ್ಟೋಬರ್ 2 ರವರೆಗೆ ಇರಲಿದೆ. ಇನ್ನು   ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸದ ಪಿತೃ ಪಕ್ಷದ ಪ್ರಾರಂಭ ಮತ್ತು ಅಂತ್ಯದ ಎರಡೂ ದಿನಗಳಲ್ಲಿ ಗ್ರಹಣಗಳು ಸಂಭವಿಸುತ್ತಿವೆ.ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯ ಅಥವಾ ಪೂಜೆಯನ್ನು ಮಾಡಲಾಗುವುದಿಲ್ಲ. 


COMMERCIAL BREAK
SCROLL TO CONTINUE READING

ಈ ವರ್ಷ ಪಿತೃ ಪಕ್ಷವು ಚಂದ್ರಗ್ರಹಣದಿಂದ ಪ್ರಾರಂಭವಾಗಲಿದೆ.ಶ್ರಾದ್ಧದ ಮೊದಲ ದಿನವಾದ ಸೆಪ್ಟೆಂಬರ್ 18 ರಂದು ಚಂದ್ರಗ್ರಹಣ ಸಂಭವಿಸುತ್ತದೆ.ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ.ಭಾರತೀಯ ಕಾಲಮಾನದ ಪ್ರಕಾರ, ಈ ಚಂದ್ರಗ್ರಹಣವು ಬೆಳಿಗ್ಗೆ 6:12 ಕ್ಕೆ ಪ್ರಾರಂಭವಾಗಿ 10:17 ಕ್ಕೆ ಕೊನೆಗೊಳ್ಳಲಿದೆ. ಆದರೆ ಈ ಚಂದ್ರಗ್ರಹಣವು ಹಗಲಿನಲ್ಲಿ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ.ಆದ್ದರಿಂದ ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ.ಇನ್ನು,ಗ್ರಹಣದ ಮೋಕ್ಷ ಮುಗಿದ ನಂತರವೇ ಮೊದಲ ದಿನ ಶ್ರಾದ್ಧ ಮಾಡುವುದು ಸೂಕ್ತ. 


ಇದನ್ನೂ ಓದಿ: ಗಣೇಶ ಕೂರಿಸುವಾಗ ಮುಖ ಅಲ್ಲ ಬೆನ್ನು ಈ ದಿಕ್ಕಿಗೆ ಇರಲಿ ! ಇಲ್ಲವಾದಲ್ಲಿ ವರ್ಷ ಪೂರ್ತಿ ವಿಘ್ನಗಳೇ ಎದುರಾಗುವುದು!ಹೆಜ್ಜೆ ಹೆಜ್ಜೆಗೂ ಸಂಕಷ್ಟ ಬರುವುದು !


ಪಿತೃ ಪಕ್ಷ ಕೊನೆಗೊಳ್ಳುವುದು ಕೂಡಾ ಗ್ರಹಣದ ಜೊತೆಗೆಯೇ.ಅಕ್ಟೋಬರ್ 2, 2024 ರಂದು ಪಿತೃ ಪಕ್ಷ ಅಥವಾ ಶ್ರಾದ್ಧದ ಕೊನೆಯ ದಿನದಂದು ಸೂರ್ಯಗ್ರಹಣ ಸಂಭವಿಸುತ್ತದೆ.ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಸೂರ್ಯಗ್ರಹಣ ಸಂಭವಿಸುವುದು ಮಂಗಳಕರವಲ್ಲ.ಏಕೆಂದರೆ ಈ ದಿನ ಪೂರ್ವಜರನ್ನು ಮತ್ತೆ  ಅವರ ಸ್ಥಾನಕ್ಕೆ ಕಳುಹಿಸಿ ಕೊಡಲಾಗುತ್ತದೆ.  


 ಭಾರತೀಯ ಕಾಲಮಾನದ ಪ್ರಕಾರ, ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 2 ರಂದು ರಾತ್ರಿ 9.13 ಕ್ಕೆ ಪ್ರಾರಂಭವಾಗಿ 3.17 ಕ್ಕೆ ಕೊನೆಗೊಳ್ಳಲಿದೆ. ಈ ಸೂರ್ಯಗ್ರಹಣ ಭಾರತದಲ್ಲಿಯೂ ಗೋಚರಿಸುವುದಿಲ್ಲ.ಆದ್ದರಿಂದ, ವರ್ಷದ ಎರಡನೇ ಸೂರ್ಯಗ್ರಹಣದ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಆದ್ದರಿಂದ ಅಮಾವಾಸ್ಯೆಯಂದು ಪೂರ್ವಜರಿಗೆ ವಿದಾಯ ಹೇಳಲು ಶ್ರಾದ್ಧ,ತರ್ಪಣ ಇತ್ಯಾದಿ ಆಚರಣೆಗಳಲ್ಲಿ ಯಾವುದೇ ಅಡ್ಡಿ ಇರುವುದಿಲ್ಲ. 


ಇದನ್ನೂ ಓದಿ:ಈ ರಾಶಿಯವರಿಗೆ ಬರೋಬ್ಬರಿ 16 ವರ್ಷಗಳ ಗುರು ಬಲ!ಸ್ವಂತ ಮನೆ, ವಾಹನ, ಉನ್ನತ ಸ್ಥಾನಮಾನದ ಭಾಗ್ಯ ! ಒಲಿದು ಬರುವುದು ಅಂತ್ಯವಿಲ್ಲದ ಆನಂದ, ಐಶ್ವರ್ಯ!
 
15 ದಿನಗಳಲ್ಲಿ ಎರಡು ಗ್ರಹಣಗಳು ಸಂಭವಿಸುವುದು ಅಶುಭ :
ಜ್ಯೋತಿಷಿಗಳ ಪ್ರಕಾರ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಎರಡೂ ಒಂದೇ ಕಡೆ ಅಂದರೆ 15 ದಿನಗಳೊಳಗೆ ಬರುವುದು ಒಳ್ಳೆಯದಲ್ಲ.ಆದ್ದರಿಂದ,ಈ ಸಮಯದಲ್ಲಿ  ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.ಅಲ್ಲದೆ,ಪಿತೃ ಪಕ್ಷದಲ್ಲಿಯೂ ಗ್ರಹಣದ ನೆರಳು ಮಂಗಳಕರವಲ್ಲ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.