ಬೆಂಗಳೂರು : Dhana Rajayoga Effects on Zodiac Sign : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನ ರಾಜ ಯೋಗ ಅತ್ಯಂತ ಶುಭ ಯೋಗವಾಗಿದೆ. ಯಾರ ಜಾತಕದಲ್ಲಿ ಈ ಶುಭ ಯೋಗ ಇರುವುದೋ ಅವರ ಅದೃಷ್ಟವೇ ಬದಲಾಗಿ ಬಿಡುತ್ತದೆ. ಸೂರ್ಯ ಸಿಂಹ ರಾಶಿಗೆ ಪ್ರವೇಶವಾಗುತ್ತಿದ್ದಂತೆಯೇ ಧನ ರಾಜ ಯೋಗ ನಿರ್ಮಾಣವಾಗಿದೆ. ಈ ಯೋಗ ಜೀವನದಲ್ಲಿ ಧನ ಸಂಪತ್ತು, ಸಮೃದ್ದಿ ಸಮ್ಮಾನವನ್ನು ಹೆಚ್ಚಿಸುತ್ತದೆ. ಈ ಧನ ರಾಜಯೋಗದ ಪ್ರಭಾವ ದ್ವಾದಶ ರಾಶಿಯವರ ಜೀವನದ ಮೇಲೆಯೂ ಬೀಳುವುದು. ಅದರಲ್ಲಿಯೂ ಮೂರು ರಾಶಿಯವರಿ ಈ ಯೋಗದ ವಿಶೇಷ ಫಲವನ್ನು ಪಡೆಯುತ್ತಾರೆ.  


COMMERCIAL BREAK
SCROLL TO CONTINUE READING

ಈ ರಾಶಿಯವರ ಮೇಲೆ ಧನರಾಜಯೋಗದ ಶುಭ ಫಲ : 
ಮೇಷ ರಾಶಿ : ಧನರಾಜಯೋಗವು ಮೇಷ ರಾಶಿಯವರಿಗೆ ಭಾರೀ ಲಾಭವನ್ನು ತಂದಿದೆ. ಈ ರಾಶಿಯವರಿಗೆ ವಿಶೇಷ ಫಲ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೂ ಒಳ್ಳೆಯ ಸುದ್ದಿ ಸಿಗಬಹುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಈ ಧನ ಯೋಗ ಆದಾಯವನ್ನು ಹೆಚ್ಚಿಸುತ್ತದೆ. ಖ್ಯಾತಿಯನ್ನೂ ನೀಡುತ್ತದೆ. 


ಇದನ್ನೂ ಓದಿ ಈ ರಾಶಿಯವರಿಗೆ ಗುರು ದೆಸೆ ! ಹರಿದು ಬರುವುದು ಧನಸಂಪತ್ತು , ಮುಂದಿನ ಬದುಕು ಬಂಗಾರ


ವೃಷಭ ರಾಶಿ : ಧನ ರಾಜಯೋಗ ಸೃಷ್ಟಿಯಾಗುವುದರಿಂದ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ. ಹೂಡಿಕೆಗಳು ಲಾಭ ತರುತ್ತದೆ. ಕೆಲವು ಹಣಕಾಸಿನ ಹೊರೆಗಳಿಂದ ಮುಕ್ತರಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮನ್ನಣೆ ಹೆಚ್ಚಾಗುವ ಸಾಧ್ಯತೆಯಿದೆ. ತೊಂದರೆ ನೀಡುತ್ತಿರುವ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಬಹುದು.   ಉದ್ಯೋಗದ ಆಫರ್‌ಗಳೂ ಬರಬಹುದು. 


ಸಿಂಹ ರಾಶಿ : ಸಿಂಹ ರಾಶಿಯವರ ಮೇಲೆ ಧನಯೋಗದ ಪರಿಣಾಮ ಸ್ವಲ್ಪ ಹೆಚ್ಚೇ ಇರುತ್ತದೆ. ಸೂರ್ಯನು ನಿಮ್ಮ ರಾಶಿಗೆ ಪ್ರವೇಶವಾಗಿರುವುದರಿಂದ ಧನ ರಾಜಯೋಗದ ಸಂಪೂರ್ಣ ಶುಭ ಫಲ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ರಾಜಕೀಯದಲ್ಲಿ ತೊಡಗಿರುವವರಿಗೆ ಈ ಸಮಯ ವಿಶೇಷವಾಗಿ ಅನುಕೂಲಕರವಾಗಿರಲಿದೆ. ಹೊಸ ಸಂಪರ್ಕಗಳಿಂದ ಪ್ರಯೋಜನ ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಹೋಗಬಹುದು. 


ಇದನ್ನೂ ಓದಿ Raksha Bandhan 2023: ಶ್ರಾವಣ ಪೂರ್ಣಿಮೆಯಂದು ಈ ವಸ್ತುವನ್ನು ಮನೆಗೆ ತಂದರೆ ನೀವು ಶ್ರೀಮಂತರಾಗುತ್ತೀರಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.