Budh Vakri 2023: ಅಕ್ಟೋಬರ್ 1ರವರೆಗೆ ಈ ರಾಶಿಯವರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ

Budh Vakri 2023: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ನಿನ್ನೆಯಷ್ಟೇ ಆಗಸ್ಟ್ 24, 2023ರಂದು ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಅಕ್ಟೋಬರ್ 01, 2023ರವರೆಗೆ ಇದೇ ಸ್ಥಿತಿಯಲ್ಲಿರುವ ಬುಧನು ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಅಪಾರ ಧನ- ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Aug 25, 2023, 06:48 AM IST
  • ಸಿಂಹ ರಾಶಿಯಲ್ಲಿ ತನ್ನ ವಕ್ರ ನಡೆ ಆರಂಭಿಸಿರುವ ಗ್ರಹಗಳ ರಾಜಕುಮಾರ ಬುಧ ಅಕ್ಟೋಬರ್ 1, 2023 ರವರೆಗೆ ಇದೇ ಸ್ಥಿತಿಯಲ್ಲಿ ಸಂಚರಿಸಲಿದ್ದಾನೆ.
  • ಬುಧನ ಚಲನೆಯಲ್ಲಿನ ಈ ಬದಲಾವಣೆಯು ದ್ವಾದಶ ರಾಶಿಗಳ ಬದುಕಿನಲ್ಲಿ ತನ್ನದೇ ಆದ ಶುಭ-ಅಶುಭ ಪರಿಣಾಮಗಳನ್ನು ಬೀರಲಿದೆ.
  • ಆದಾಗ್ಯೂ, ಈ ಸಮಯದಲ್ಲಿ ವಕ್ರೀ ಬುಧನು ಐದು ರಾಶಿಯವರ ಜೀವನದಲ್ಲಿ ಸಂಪತ್ತಿನ ಹೊಳೆಯನ್ನೇ ಹರಿಸಲಿದ್ದಾನೆ
Budh Vakri 2023: ಅಕ್ಟೋಬರ್ 1ರವರೆಗೆ ಈ ರಾಶಿಯವರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ title=

Budh Vakri 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ,  ಸಂಪತ್ತು, ವ್ಯಾಪಾರ ಮತ್ತು ಬುದ್ಧಿವಂತಿಕೆಯ ಅಂಶ ಎಂದು ಪರಿಣಗಣಿಸಲಾಗಿರುವ ಬುಧನು ನಿನ್ನೆ (ಆಗಸ್ಟ್ 24, 2023ರಂದು) ಮಧ್ಯರಾತ್ರಿಯಷ್ಟೆ ಸಿಂಹ ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರ್ಕಾರ, ಬುದ್ಧನ ಚಲನೆಯಲ್ಲಿನ ಬದಲಾವಣೆಯು ವ್ಯಕ್ತಿಯ ಜೀವನದ ವೃತ್ತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. 

ಪ್ರಸ್ತುತ, ಸಿಂಹ ರಾಶಿಯಲ್ಲಿ ತನ್ನ ವಕ್ರ ನಡೆ ಆರಂಭಿಸಿರುವ ಗ್ರಹಗಳ ರಾಜಕುಮಾರ ಬುಧ ಅಕ್ಟೋಬರ್ 1, 2023 ರವರೆಗೆ ಇದೇ ಸ್ಥಿತಿಯಲ್ಲಿ ಸಂಚರಿಸಲಿದ್ದಾನೆ. ಬುಧನ ಚಲನೆಯಲ್ಲಿನ ಈ ಬದಲಾವಣೆಯು ದ್ವಾದಶ ರಾಶಿಗಳ ಬದುಕಿನಲ್ಲಿ ತನ್ನದೇ ಆದ ಶುಭ-ಅಶುಭ ಪರಿಣಾಮಗಳನ್ನು ಬೀರಲಿದೆ. ಆದಾಗ್ಯೂ, ಈ ಸಮಯದಲ್ಲಿ ವಕ್ರೀ ಬುಧನು ಐದು ರಾಶಿಯವರ ಜೀವನದಲ್ಲಿ ಸಂಪತ್ತಿನ ಹೊಳೆಯನ್ನೇ ಹರಿಸಲಿದ್ದು ಸಿರಿವಂತಿಕೆ ಭಾಗ್ಯವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ... 

ಅಕ್ಟೋಬರ್ 1ರವರೆಗೆ ಈ ರಾಶಿಯವರಿಗೆ ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ ವಕ್ರೀ ಬುಧ:- 
ಮಿಥುನ ರಾಶಿ: 

ಬುಧನ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದೆ. ಇಷ್ಟು ದಿನಗಳ ಕಾಲ ನಿಮ್ಮ ವೃತ್ತಿ ಬದುಕಿನಲ್ಲಿದ್ದ ಸಮಸ್ಯೆಗಳು ಈಗ ಬಗೆಹರಿಯಲಿವೆ. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಮನ್ನಣೆ ನೀಡಲಿದ್ದಾರೆ. ಇದು ನಿಮ್ಮ ಹಣಕಾಸಿನ ವಿಷಯದಲ್ಲೂ ಧನಾತ್ಮಕ ಪರಿಣಾಮಗಳನ್ನು ತರಲಿದೆ. ಪ್ರೀತಿ-ಪ್ರೇಮದಲ್ಲಿರುವವರು ವಿವಾಹ ಬಂಧನದಲ್ಲಿ ಬಂಧಿಯಾಗುವಿರಿ. 

ಇದನ್ನೂ ಓದಿ- ಮಂಗಳ-ಕೇತು ಯುತಿ: ಈ 4 ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ

ಕರ್ಕಾಟಕ ರಾಶಿ: 
ವಕ್ರೀ ಬುಧನು ಕರ್ಕಾಟಕ ರಾಶಿಯವರಿಗೂ ಕೂಡ ವೃತ್ತಿ, ವ್ಯವಹಾರದಲ್ಲಿ ಭಾರೀ ಪ್ರಯೋಜನವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ನಿಮ್ಮದಾಗಲಿದ್ದು ಇದು ನಿಮ್ಮ ಆತ್ಮವಿಶ್ವಾಸವನ್ನೂ ಕೂಡ ವೃದ್ಧಿಸುತ್ತದೆ. ನಿಮ್ಮ ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಶುಭ ಫಲಗಳನ್ನು ಅನುಭವಿಸುವಿರಿ. 

ಕನ್ಯಾ ರಾಶಿ: 
ಬುಧ ಗ್ರಹದ ವಕ್ರ ನಡೆಯು ಕನ್ಯಾ ರಾಶಿಯವರ ಜೀವನದಲ್ಲಿ ಇಷ್ಟು ದಿನಗಳಿಂದ ತಲೆದೂರಿದ್ದ ಸಂಕಷ್ಟಗಳಿಂದ ಪರಿಹಾರವನ್ನು ನೀಡಲಿದೆ. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಗಳಿಸುವಿರಿ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಹೊಸ ಆಫರ್ ಲಭ್ಯವಾಗಬಹುದು. ಬಿಸಿನೆಸ್ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. 

ವೃಶ್ಚಿಕ ರಾಶಿ: 
ಬುಧನ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯವರ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳನ್ನೇ ತೆರೆಯಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಳಿದ್ದು, ಕೆಲಸ ಕಾರ್ಯಗಳು ನೀವು ಅಂದುಕೊಂಡಂತೆ ಆಗುತ್ತವೆ. ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಅತ್ಯುತ್ತಮ ಸಮಯ ಇದು ಎಂತಲೇ ಹೇಳಬಹುದು. ಮಾತ್ರವಲ್ಲ, ಈ ಸಮಯದಲ್ಲಿ ವಕ್ರೀ ಬುಧನು ವೃಶ್ಚಿಕ ರಾಶಿಯವರಿಗೆ ಅಪಾರ ಧನ-ಸಂಪತ್ತನ್ನು ಕರುಣಿಸಲಿದ್ದಾನೆ. 

ಇದನ್ನೂ ಓದಿ- Shani Gochar: ಮುಂದಿನ ಒಂದೂವರೆ ವರ್ಷ ಈ ರಾಶಿಯವರ ಜೀವನದಲ್ಲಿ ಸೋಲೆಂಬುದೇ ಇಲ್ಲ

ಮೀನ ರಾಶಿ: 
ವಕ್ರೀ ಬುಧ ಮೀನ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಪ್ರಗತಿಯನ್ನು, ವ್ಯಾಪಾರ-ವ್ಯವಹಾರದಲ್ಲಿ ನಿಗದಿತ ಯಶಸ್ಸನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಇಷ್ಟು ದಿನಗಳ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀವು ಅನುಭವಿಸುವಿರಿ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದ್ದು ಉಳಿತಾಯವೂ ಸಾಧ್ಯವಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News