Dhanteras 2024 Date: ಕಾರ್ತಿಕ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಧನತ್ರಯೋದಶಿ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಧನತ್ರಯೋದಶಿ ಐದು ದಿನಗಳ ದೀಪಾವಳಿ ಹಬ್ಬದ ಆರಂಭವನ್ನು ಸಹ ಸೂಚಿಸುತ್ತದೆ. ದೀಪಾವಳಿ ಹಬ್ಬದ ಮೊದಲ ದಿನದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ನಂತರ ನರಕ ಚತುರ್ದಶಿ, ದೀಪಾವಳಿ, ಗೋವರ್ಧನ ಪೂಜೆ ಮತ್ತು ಅಂತಿಮವಾಗಿ ರಕ್ಷಾ ಬಂಧನ ಹೋಲುವ ಭಯ್ಯಾ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಧನತ್ರಯೋದಶಿ ದಿನದಂದು ಮಾರುಕಟ್ಟೆಯಿಂದ ಏನನ್ನಾದರೂ ಖರೀದಿಸುವ ಸಂಪ್ರದಾಯವಿದೆ. ಈ ವಿಶೇಷ ದಿನದಂದು ಚಿನ್ನ, ಬೆಳ್ಳಿ ವಸ್ತುಗಳು ಮತ್ತು ವಾಹನಗಳ ಖರೀದಿಗೆ ವಿಶೇಷ ಮಹತ್ವವಿದೆ.


COMMERCIAL BREAK
SCROLL TO CONTINUE READING

ಧನತ್ರಯೋದಶಿ ದಿನದಂದು ಮನೆಗೆ ಏನಾದರೂ ಖರೀಸಿದರೆ ಇಡೀ ವರ್ಷಕ್ಕೆ ಸಂತಸದ ಆಗಮನವಾಗುತ್ತದೆ. ಧನತ್ರಯೋದಶಿ ದಿನದಂದು ಹೊಸ ಶುಭ ವಸ್ತುಗಳನ್ನು ಖರೀದಿಸುವುದು 13 ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ. ಹಾಗಾದರೆ ಧನತ್ರಯೋದಶಿಯಲ್ಲಿ ವಾಹನ ಖರೀದಿಸಲು ಯಾವುದು ಶುಭ ಸಮಯ ಎಂದು ತಿಳಿಯಿರಿ? ವಾಹನ ಪೂಜೆಯ ನಿಯಮಗಳ ಬಗ್ಗೆಯೂ ನೀವು ತಿಳಿಯುವುದು ಮುಖ್ಯ.


ಇದನ್ನೂ ಓದಿ: ಸಿಕ್ಕಾಪಟ್ಟೆ TRP ಬಂದಿದ್ರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್! ಇನ್ನೊಂದೆರಡು ವಾರಗಳಲ್ಲಿ ನಿಂತೋಗುತ್ತಾ ಷೋ?


ವಾಹನ ಖರೀದಿಸಲು ಉತ್ತಮ ಸಮಯ


ಹಿಂದೂ ಧರ್ಮದಲ್ಲಿ ಧನತ್ರಯೋದಶಿಯ ಸಂಪೂರ್ಣ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಇತರ ವಸ್ತುಗಳನ್ನು ಮತ್ತು ವಾಹನಗಳನ್ನು ಖರೀದಿಸುವ ಶುಭ ಮುಹೂರ್ತವು ಅಕ್ಟೋಬರ್ 29ರಂದು ಬೆಳಗ್ಗೆ 10.31ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ಅಕ್ಟೋಬರ್ 30ರಂದು ಮಧ್ಯಾಹ್ನ 1.15ಕ್ಕೆ ಕೊನೆಗೊಳ್ಳುತ್ತದೆ. ವಾಹನ ಖರೀದಿಸಲು ಇದು ಉತ್ತಮ ಸಮಯವಾಗಿರುತ್ತದೆ.


ವಾಹನ ಪೂಜೆಯ ವಿಧಾನ ಮತ್ತು ನಿಯಮಗಳು


* ಮೊದಲು ಕೆಂಪು ಚಂದನದಿಂದ ವಾಹನದ ಮೇಲೆ ಸ್ವಸ್ತಿಕ ಬರೆಯಿರಿ
* ಈಗ ಅದರ ಮೇಲೆ ಅಕ್ಷತೆಯನ್ನು ಉದುರಿಸಿ. 
* ನಂತರ ಹಳದಿ & ಕೆಂಪು ಬಣ್ಣದ ದಾರ ತೆಗೆದುಕೊಂಡು ಸ್ವಸ್ತಿಕದ ಮೇಲೆ ಅರ್ಪಿಸಿ. 
* ನಂತರ ವಾಹನಕ್ಕೆ ಆರತಿ ನೆರವೇರಿಸಿ ತೆಂಗಿನಕಾಯಿ ಒಡೆಯಿರಿ  
* ಪೂಜೆಯ ನಂತರ ದಾರವನ್ನು ವಾಹನದ ಮೇಲೆ ಕಟ್ಟಿ ಮುಂದಿನ ಪೂಜೆಯವರೆಗೆ ಅದನ್ನು ತೆಗೆಯಬೇಡಿ.
* ಪೂಜೆಯ ನಂತರ ಮಾತ್ರ ಆ ದಾರವನ್ನು ಹೊರತೆಗೆಯಬೇಕು.
* ಕಬ್ಬಿಣವನ್ನು ಹೆಚ್ಚಾಗಿ ವಾಹನಗಳಲ್ಲಿ ಬಳಸಲಾಗುತ್ತದೆ ಮತ್ತು ಕಬ್ಬಿಣವು ಶನಿ ಗ್ರಹಕ್ಕೆ ಸಂಬಂಧಿಸಿದೆ.
* ಧನತ್ರಯೋದಶಿ ದಿನದಂದು ವಾಹನವನ್ನು ಪೂಜಿಸುವುದರಿಂದ ಶನಿದೇವನೊಂದಿಗೆ ಇತರ ಗ್ರಹಗಳನ್ನೂ ಪೂಜಿಸಲಾಗುತ್ತದೆ.


ಇದನ್ನೂ ಓದಿ: ಶನಿ ಸೂರ್ಯ ಸಂಯೋಗದಿಂದ ರೂಪುಗೊಂಡ ನವ ಪಂಚಮ ರಾಜಯೋಗ..ಈ 3 ರಾಶಿಯವರಿಗೆ ಇನ್ನೂ ಲಕ್ಷಾಧಿಪತಿಗಳಾಗುವ ಯೋಗ..!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.