ಗಜಕೇಸರಿ ಯೋಗದಿಂದ ವೃದ್ದಿಸುತ್ತಲೇ ಹೋಗುವುದು ಸಿರಿ ಸಂಪತ್ತು!ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು !ಬ್ರಹ್ಮಾಂಡ ಅದೃಷ್ಟ ಇವರದ್ದು

 Gajakesari yoga  good luck : ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು. 

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ, ದೇವತೆಗಳ ಗುರು ಗುರುವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಪ್ರಸ್ತುತ ಗುರುವು ವೃಷಭ ರಾಶಿಯಲ್ಲಿದ್ದು 2025ರವರೆಗೆ ಇದೇ ರಾಶಿಯಲ್ಲಿ ಸಂಚರಿಸುತ್ತಾ ಇರುತ್ತಾನೆ. ಈ ಮಧ್ಯೆ, ಚಂದ್ರ ಗುರು ಇರುವ ರಾಶಿ ವೃಷಭವನ್ನು ಪ್ರವೇಶಿಸಿದ್ದಾನೆ. ಹೀಗಾಗಿ ಪವಿತ್ರ ಗಜಕೇಸರಿ ಯೋಗವು ರೂಪುಗೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು. 

2 /6

ಗಜಕೇಸರಿ ಯೋಗದ ಕಾರಣ ಅನೇಕ ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾರೆ.  ಜೀವನದ  ಭೌತಿಕ ಸುಖವನ್ನು ಅನುಭವಿಸುತ್ತಾರೆ. ಹೆಜ್ಜೆ ಹೆಜ್ಜೆಗೂ ಇವರಿಗೆ ಅದೃಷ್ಟ ಒಲಿದು ಬರುವುದು.  

3 /6

ಮೇಷ ರಾಶಿ : ಈ ರಾಶಿಯವರ ಸಂಪತ್ತಿನ ಮನೆಯಲ್ಲಿಯೇ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದ ಈ ರಾಶಿಯವರ ಮೇಲೆ ಸಂಪತ್ತಿನ ಅಧಿದೇವತೆಯ  ವಿಶೇಷ ಆಶೀರ್ವಾದ ಇರಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ನಿಮ್ಮದಾಗುವುದು.  ಹಣಕಾಸಿನ ಕೊರತೆ ಸಂಪೂರ್ಣವಾಗಿ ನೀಗುವುದು. 

4 /6

ತುಲಾ ರಾಶಿ :ಈ ರಾಶಿಯವರ ಅದೃಷ್ಟದ ದಿನಗಳು ಆರಂಭ. ವಿದೇಶ ಪ್ರಯಾಣಕ್ಕೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗುವುದು.  ವಿದೇಶದಲ್ಲಿ ಉತ್ತಮ ಉದ್ಯೋಗ ಸಿಗುವುದು. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳು ಕಳೆಯುವುದು. ಭಾಗ್ಯದ ಬಾಗಿಲು ತೆರೆದುಕೊಳ್ಳುವುದು. 

5 /6

ಕನ್ಯಾ ರಾಶಿ :ಇವರ ಅದೃಷ್ಟದ ಮನೆಯಲ್ಲಿಯೇ ಗಜಕೇಸರಿ ಯೋಗ ನಿರ್ಮಾಣ. ಜೀವನದಲ್ಲಿ ಸಂತಸದ ಹೊನಲು ಹರಿಯುವುದು. ಯಶಸ್ಸಿನ ಏಣಿ ಏರುತ್ತಲೇ ಹೋಗುವಿರಿ.  ವಾಹನ, ಆಸ್ತಿ  ಖರೀದಿಸುವ ಕಾಲ ಇದು. ಆರೋಗ್ಯವೂ ಚೆನ್ನಾಗಿರುತ್ತದೆ.    

6 /6

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ.