ಗ್ರಹ ಶಾಂತಿ ಪರಿಹಾರಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಗುರು, ಶುಕ್ರ, ಶನಿ ಗ್ರಹಗಳಿಗೆ  ಬಹಳ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ  ಗುರು, ಶುಕ್ರ, ಶನಿ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ, ನಮ್ಮ ಜಾತಕದಲ್ಲಿ ಗ್ರಹ ದೋಷ ಇದ್ದಾಗ ಅದಕ್ಕೆ ತಕ್ಕ ಪರಿಹಾರ ಮಾಡುವುದು ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಗ್ರಹಗಳು ಹಾಗೂ ನಕ್ಷತ್ರಗಳ ಸ್ಥಾನದಲ್ಲಿನ ಬದಲಾವಣೆಯು ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ನಾವು ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಸಹ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಇವು ಕೆಲವು ಗ್ರಹಗಳ ದೋಷವನ್ನೂ ಉಂಟುಮಾಡಬಹುದು. ಈ ಲೇಖನದಲ್ಲಿ  ಗುರು, ಶುಕ್ರ, ಶನಿ ಗ್ರಹಗಳ ದೋಷವನ್ನು ತಪ್ಪಿಸಲು ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯೋಣ...


ಇದನ್ನೂ ಓದಿ- ಜುಲೈ 16 ರಿಂದ ಈ ರಾಶಿಯವರನ್ನು ಕಷ್ಟದ ಸುಲಿಗೆ ನೂಕಲಿದ್ದಾನೆ ಸೂರ್ಯ


ಈ ತಪ್ಪುಗಳಿಂದ ಗುರು ಗ್ರಹದ ದೋಷ ಉಂಟಾಗುತ್ತದೆ:
ಗುರು ಗ್ರಹದ ದೋಷವನ್ನು ತಪ್ಪಿಸಲು ಬಯಸಿದರೆ, ನೀವು ಯಾವುದೇ ಕಾರಣಕ್ಕೂ ಜ್ಞಾನಿಗಳು, ಗುರುಗಳು, ಸಂತರನ್ನು ಅವಮಾನಿಸಬೇಡಿ. ಗುರುವು ಜ್ಞಾನ ಮತ್ತು ಶಿಕ್ಷಣದ ಅಂಶವಾಗಿದೆ, ಆದ್ದರಿಂದ ಒಬ್ಬರ ಶಿಕ್ಷಣಕ್ಕೆ ಅಡ್ಡಿಯುಂಟುಮಾಡುವುದು ಸಹ ಗುರುವನ್ನು ಕೋಪಗೊಳಿಸಬಹುದು.


ಶುಕ್ರನ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಈ ತಪ್ಪುಗಳಾಗದಂತೆ ನಿಗಾವಹಿಸಿ:
ಶುಕ್ರ ಗ್ರಹದ ಅನುಗ್ರಹದಿಂದ ಜೀವನದಲ್ಲಿ ಸಾಂಸಾರಿಕ ಸುಖ, ಪ್ರೀತಿ, ಐಷಾರಾಮಿ, ಪ್ರಯಾಣದ ಆನಂದ ಸಿಗುತ್ತದೆ. ಶುಕ್ರವು ಅಶುಭ ಫಲಿತಾಂಶಗಳನ್ನು ನೀಡಿದರೆ, ಅಂತಹ ವ್ಯಕ್ತಿಗೆ ಆರ್ಥಿಕ ಸಮಸ್ಯೆ ಬೆಂಬಿಡದೆ ಕಾಡುತ್ತದೆ. ಜೊತೆಗೆ ಪ್ರೀತಿಯ ಜೀವನದಲ್ಲಿಯೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದನ್ನು ತಪ್ಪಿಸಲು ಎಂದಿಗೂ ಮಹಿಳೆಯರನ್ನು ಅವಮಾನಿಸಬೇಡಿ. ಹಣದ ವಿಷಯದಲ್ಲಿ ಯಾರನ್ನೂ ನೋಯಿಸಬೇಡಿ.


ಇದನ್ನೂ ಓದಿ- ಇನ್ನು 5 ದಿನಗಳ ನಂತರ ಮಕರ ರಾಶಿಗೆ ಶನಿ ಪ್ರವೇಶ- ಯಾರಿಗೆ ಶುಭ? ಯಾರಿಗೆ ಅಶುಭ?


ಶನಿಯ ವಕ್ರ ದೃಷ್ಟಿಯಿಂದ ದೂರ ಉಳಿಯಲು ಈ ವಿಷಯಗಳ ಬಗ್ಗೆ ನಿಗಾವಹಿಸಿ:
ನೀವು ಶನಿಯ ದುಷ್ಟ ಕಣ್ಣಿನಿಂದ ದೂರವಿರಲು ಬಯಸಿದರೆ, ಕೆಲವು ವಿಷಯಗಳ ಬಗ್ಗೆ ಜಾಗರೂಕತೆಯಿಂದ ಇರುವುದು ಬಹಳ ಮುಖ್ಯ. ಇಲ್ಲದಿದ್ದರೆ ಜೀವನದಲ್ಲಿ ನಾನಾ ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಎಲ್ಲರಿಗೂ ತಿಳಿದಿರುವಂತೆ ಶನಿಯು ಕರ್ಮಕ್ಕೆ ತಕ್ಕ ಫಲ ನೀಡುತ್ತಾನೆ. ಶನಿಯ ವಕ್ರ ದೃಷ್ಟಿಯಿಂದ ದೂರ ಉಳಿಯಲು ಈ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಿ-
*  ಯಾರಿಗೂ ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ. 
* ಬೇರೆಯವರ ಹಣವನ್ನು ಅನ್ಯಾಯದಿಂದ ನಿಮ್ಮದಾಗಿಸಿಕೊಳ್ಳಬೇಡಿ.
* ಕಷ್ಟಪಟ್ಟು ಕೆಲಸ ಮಾಡುವವರಿಗೆ ಕಿರುಕುಳ ನೀಡಬೇಡಿ.
* ಯಾರನ್ನೂ ಶೋಷಣೆ ಮಾಡಬೇಡಿ.
* ಕೈಲಾಗದವರನ್ನು ಕಂಡು ಹಾಸ್ಯ ಮಾಡಬೇಡಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ